Maikaltho palka -byari language live program in radio sarang 107.8 Fm
-vk kadaba
ರೇಡಿಯೋ ಮೂಲಕ ಮಾತು ಆರಂಭಿಸಿ ಕೇಳುಗರನ್ನು ಹಿಡಿದಿಟ್ಟುಕೊಳ್ಳುವುದು ಒಂದು ಸಾಹಸದ ಕೆಲಸ ! ನಮ್ಮ ಕುಡ್ಲದ ಸುತ್ತ ಮುತ್ತ ಕನ್ನಡ, ತುಳು ,ಕೊಂಕಣಿ ಮತ್ತು ಬ್ಯಾರಿ ಭಾಷೆಯಲ್ಲಿ ವ್ಯವಹರಿಸುವ ಜನರು ಅಲ್ಲಲ್ಲಿ ಸಿಕ್ಕೆ ಸಿಗುತ್ತಾರೆ . ಹಾಗೆಯೇ ನಮ್ಮ ಮಂಗಳೂರು ವ್ಯಾಪ್ತಿಯಲ್ಲಿ ಅನೇಕ ರೀತಿಯ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ .ಅದರಲ್ಲಿಯೂ ಸ್ಥಳೀಯ ಭಾಷೆಗೆ ಹೆಚ್ಚು ಒತ್ತು ನೀಡಿ ಬಣ್ಣ ಬಣ್ಣದ ಕಾರ್ಯಕ್ರಮ ನೀಡುತ್ತಿರುವುದು ಮಂಗಳೂರಿನ ಜನರ ಮನೆ-ಮನದ ಸಂಗಾತಿ ರೇಡಿಯೊ ಸಾರಂಗ್ 107.8 FM ಎಫ್ ಎಂ .ಮಂಗಳೂರಿನ ರೇಡಿಯೋ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬ್ಯಾರಿ ಭಾಷೆಯಲ್ಲಿ ಲೈವ್ ಕಾರ್ಯಕ್ರಮ "ಮೈಕಾಲ್ತೊ ಪಲ್ಕ "ಹೌದು ಈ ಕಾರ್ಯಕ್ರಮವನ್ನು ನಡೆಸುತ್ತಿರುವುದು ಸೈಪುಲ್ಲ ಕುತ್ತಾರ್SAIFULLA KUTHAR IN LIVE STUDIO |
ಹಿಂದೂ ,ಕ್ರೈಸ್ತ ,ಮುಸ್ಲಿಂ ಎಂಬ ಬೇಧ ವಿಲ್ಲದೆ ಅನೇಕ ಕೇಳುಗರ ಮೆಚ್ಚುಗೆಗೆ ಈ ಕಾರ್ಯಕ್ರಮ ಪಾತ್ರವಾಗಿದ್ದು ,ದಫ್ ಪಾಟ್ ,ಬ್ಯಾರಿ ಸಮುದಾಯದ ಹಾಡುಗಳು ಮಾತಿನ ಜೊತೆ ಜೊತೆಗೆ ಪ್ರಸಾರವಾಗುತ್ತಿದೆ . ಮಾತಿನಲ್ಲಿ ಎಲ್ಲರನ್ನು ಸೆಳೆಯಬಲ್ಲ ಕಲೆ ಇವರಲ್ಲಿದೆ ಸ್ಥಳೀಯ ಭಾಷೆಯ ಮಾತಿನ ಇಂಪಿಗೆ ಮರುಳಾಗದವರು ಯಾರದಾರೂ ಇದ್ದಾರಾ ನಿವೇ ಹೇಳಿ ?
ಇವರು ಓದಿದ್ದು ಬಿ.ಬಿ.ಎಂ. ಹಾಡುವುದು ,ಕತೆಬರೆಯುವುದು ,ಹಾಡು ರಚನೆ ಇದು ಸೈಪುಲ್ಲ ಕುತ್ತಾರ್ ರವರ ಹವ್ಯಾಸವಾಗಿದೆ .
. ಸಾಮರಸ್ಯವನ್ನು ಬೆಸೆಯುವ ಮತ್ತು ಬ್ಯಾರಿ ಸಮುದಾಯದ ಏಳಿಗೆಗೆ ಜೊತೆಗೆ ಸಂಸ್ಕೃತಿಯ ಉಳಿವಿಗೆ ಈ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ . vk kadaba
No comments:
Post a Comment