ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Tuesday, July 14, 2015

ಕುಡ್ಲದ ಸೂಪರ್ ಸ್ಟಾರ್ ಭಾಗವತ ಪಟ್ಲ ಸತೀಶ ಶೆಟ್ಟಿ (Patla Sathis Shetty)

 ಕುಡ್ಲದ ಸೂಪರ್  ಸ್ಟಾರ್  ಭಾಗವತ ಪಟ್ಲ  ಸತೀಶ ಶೆಟ್ಟಿ ಮೊನ್ನೆ ರೇಡಿಯೋ  ಸಾರಂಗ್ 107.8 FM  ನ ಬಿನ್ನೆರೆ ಪಾತೆರಕತೆ  ತುಳುಕಾರ್ಯಕ್ರಮದಲ್ಲಿ ಇವರು ಪಾಲ್ಗೊಂಡಿದ್ದರು. ಸಂದರ್ಶನದ ಆಯ್ದ ಭಾಗಗಳನ್ನು ನಿಮಗೆ ತಿಳಿಸುತ್ತಿದ್ದನೆ.... 
ಶ್ರೀ ಪಟ್ಲ ಸತೀಶ ಶೆಟ್ಟಿ  ಬಂಟ್ವಾಳ ತಾಲೂಕಿನ ಹೊಗೆನಾಡುವಿನವರು . ಶ್ರೀ ಪಟ್ಲ ಮಹಾಬಲ ಶೆಟ್ಟಿ ಮತ್ತು ಶ್ರೀಮತಿ ಲಲಿತಾ ಶೆಟ್ಟಿ ದಂಪತಿಗಳ ಮಗ. ತನ್ನ ತಂದೆಯ ಪ್ರೇರಣೆಯಿ೦ದಲೇ ಯಕ್ಷಗಾನಕ್ಕೆ ಬಂದವರು .ಹೊಗೆನಾಡು ಕ್ಷೇತ್ರದಲ್ಲಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ  ಮೇಳವನ್ನು ಇವರ ತಂದೆ ನಡೆಸುತ್ತಿದ್ದರು . ಪ್ರಸ್ತುತ ಹದಿನೈದು  ವರ್ಷಗಳಿಂದ ಶ್ರೀ ದುರ್ಗಾ ಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಟೀಲು ಮೇಳದಲ್ಲಿ  5ನೇ ಮೇಳದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತಿದ್ದಾರೆ.
ಪಟ್ಲ  ಸತೀಶ ಶೆಟ್ಟಿರೊಂದಿಗೆ ನಾನು ವಿ.ಕೆ ಕಡಬ 
ಪಟ್ಲರವರದೇ  ಶೈಲಿಗೆ ಅನೇಕರು ಮನಸೋತವರಿದ್ದಾರೆ.  ಹಾಗಾಗಿಯೇ ಅವರದೇ "ಪಟ್ಲ  ಫ್ಯಾನ್" ಅನೇಕರಿದ್ದಾರೆ . ನನ್ನ ಫ್ಯಾನ್ ಗಿಂತಲೂ ಯಕ್ಷಗಾನ ಯುವಕರನ್ನು ಸೆಳೆಯುತ್ತಿದೆ ಅದೇ ಕುಷಿ  ಎನ್ನುತ್ತಾರೆ ಇವರು. ಕನ್ಯಾನದಲ್ಲಿ ದ್ವಿತೀಯ ಪಿ.ಯು.ಸಿ ಯನ್ನು ಪೂರೈಸಿದ ಇವರು ,ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವಾಗಲೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ರವರ ಹತ್ತಿರ ಯಕ್ಷಗಾನ ಭಾಗವತಿಕೆ, ಚೆಂಡೆ, ಮದ್ದಲೆಯನ್ನು ಕಲಿತರು. ಯಕ್ಷಗಾನ ಛಂದಸ್ಸನ್ನು ಸೀಮಂತೂರು ನಾರಾಯಣ ಶೆಟ್ಟಿಯವರಲ್ಲಿ,ಸಂಗೀತವನ್ನು ಎರಡು ವರ್ಷಗಳಿಂದ  ಬಜಕಳ ಗಣಪತಿ ಭಟ್ ಮತ್ತು ಯೋಗಿಶ್ ಶರ್ಮ ಬಲ್ಲ ಪದವು ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ .ಇವರು ಯಾರೊಬ್ಬರ ಧ್ವನಿಯನ್ನು ಅನುಕರಿಸುವುದಿಲ್ಲ ಬದಲಾಗಿ ಅನುಸರಣೆ ಮಾಡುತ್ತಿದ್ದಾರೆ . ತನ್ನ ಎಳೆಯ ಪ್ರಾಯದಲ್ಲೇ ಸುಮಧುರ ಕಂಠ ಮಾಧುರ್ಯದಿಂದ ಅಪಾರ ಯಕ್ಷಗಾನ ಪ್ರೇಮಿಗಳ ಮೆಚ್ಚುಗೆಯನ್ನು ಪಡೆದಿರುವ ಕಿರಿಯ ವಯಸ್ಸಿನ ಭಾಗವತರಾಗಿ ಮಿಂಚುತ್ತಿದ್ದಾರೆ .

                               * ಪಟ್ಲರ ಮನದಾಳದ ಮಾತು *

"ಯಾವುದೇ ಭಾಷೆಯ ಚೌಕಟ್ಟಿಗೆ ಯಕ್ಷಗಾನ ಸೀಮಿತ ಗೊಳ್ಳಬಾರದು .ಎಲ್ಲೆಡೆ ವ್ಯಾಪಿಸ ಬೇಕು. ಯಕ್ಷಗಾನದಲ್ಲಿ ದ್ವಂದ ಯಕ್ಷಗಾನಭಾಗವತಿಕೆ ಬೇಡ.ಯಕ್ಷಗಾನದಲ್ಲಿ ಬದಲಾವಣೆ ಬೇಡ ಆದರೆ ಅದರಲ್ಲೇ ಇರುವ ಅನೇಕ ಅಂಶಗಳನ್ನು ನಾವು ಮೈಗೂಡಿಸಿ ಕೊಂಡರೆ ಅದೇ ಸಾಕು . ಮತ್ತೆ  ಯಕ್ಷಗಾನದಲ್ಲಿ ತರಬೇತಿಯ ಅಗತ್ಯ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ... ಎಲ್ಲರು ಗುರುಗಳಾದರೆ ಕಷ್ಟ ,ಹಾಗಾಗಿ ಬಾಲ ಪಾಠ ವನ್ನು ಅಭ್ಯಾಸ ಮಾಡಿ ಯಕ್ಷರಂಗಕ್ಕೆ ಬಂದರೆ ಒಳ್ಳೆಯದು  ಎನ್ನುವುದು ಇವರ ಮನದಾಳದ ಮಾತು . ಯಕ್ಷಗಾನ ಕಲಾವಿದರ ಕೊರತೆ ಕಂಡು ಬಂದರೂ  ಹವ್ಯಾಸಿ ಯಕ್ಷಗಾನ ಕಲಾವಿದರು ಅನೇಕರಿದ್ದು ,ಹಾಗಾಗಿ ಇಲ್ಲಿ  ಬಿಟ್ಟ ಜಾಗ ತುಂಬುತ್ತಿದೆ . ಯಕ್ಷಗಾನ ಕಲಾವಿದರಿಗೆ ಸಂಬಳ ಹೊರತು ಬೇರೆ ಯಾವುದೇ ಭದ್ರತೆ ಇಲ್ಲ . ಈ ಬಗ್ಗೆ ಹೆಚ್ಚು ಗಮನ ಹರಿಸುವುದು ಅಗತ್ಯ  ಎನ್ನುವುದು ಇವರ ಮನದಾಳದ ಮಾತು " 
ಇವರ ಜೊತೆಗಿನ ತುಳು ಸಂದರ್ಶನವನ್ನು ನೀವು ಇಲ್ಲಿ ಕೇಳಬಹುದು:-

ಇತ್ತಿಚೆಗೆ ಬಿಡುಗಡೆಗೊಂಡ ರಂಗತರಂಗ ಕನ್ನಡ ಸಿನೇಮಾದಲ್ಲಿ ಅದ್ಭುತ ಹಾಡನ್ನು ಹಾಡಿದ್ದಾರೆ . ಕೇಳೆ ಚೆಲುವೇ .... ಇಲ್ಲಿ ಕೇಳಿ :-

ಕುಂದಾಪುರದಲ್ಲಿ ಬಡಗು ಯಕ್ಷಗಾನಕ್ಕೆ ಹೆಚ್ಚು ಮನ್ನಣೆ . ಆದರೆ ತೆಂಕು ಶೈಲಿಯ ಪಟ್ಲರು  ಅಲ್ಲಿ  ಕ್ಲಿಕ್  ಆಗಿದ್ದು ಯಾಕೆ ಗೊತ್ತಾ? 
 ಒಮ್ಮೆ  ಧ್ವಂದ ಬಾಗವತಿಕೆಗಾಗಿ ಕುಂದಾಪುರಕ್ಕೆ ಹೋಗಿದ್ದರು.ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಇವರು ತೆಂಕಿನ ಪಾರಂಪರಿಕ ಶೈಲಿಯನ್ನು ಹಾಡಿದರು .ಬಡಗನ್ನೆ ಮೆಚ್ಚಿಕೊಳ್ಳುತಿದ್ದ ಅಲ್ಲಿಯ ಜನ ಯಕ್ಷಗಾನ ಮುಗಿದಾಗ ಪಟ್ಲರತ್ತಾ  ಗುಂಪು ಗುಂಪಾಗಿ ಧಾವಿಸಿದರು. ಸುಮಧುರ ಕಂಠದಿಂದ ಪಟ್ಲರು ಅಲ್ಲಿಯ ಜನರನ್ನು ಮೋಡಿ ಮಾಡಿದ್ದರು .ಇದು"ಪಟ್ಲ  ಶೈಲಿ"  .ಫೇಸ್ ಬುಕ್ಕಿನಲ್ಲಿ ಇವರ ಕುರಿತು ಖಾತೆಯೇ ಇದೆ .ಈಗ ಎಲ್ಲಾ ಕಡೆಗಳಲ್ಲಿ ಪಟ್ಲರ ಅಭಿಮಾನಿ ಬಳಗವೇ ಇದೆ. ದೇವಿ ಮಹಾತ್ಮೆ ಇವರ ಇಷ್ಟದ ಯಕ್ಷಗಾನವಾಗಿದ್ದು ,ಬಲಿಪ ನಾರಾಯಣ ಭಾಗವತರು ಇವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಕಾರಣ ಕರ್ತರಾಗಿದಾರೆ.
 ಇತ್ತೀಚಿಗೆ ವಿಶ್ವ ತುಳುವೆರೆ ಪರ್ಬ ಸಮಯದಲ್ಲಿ ಯಕ್ಷಗಾನ ಶೈಲಿಯಲ್ಲಿ ಹಾಡನ್ನು ಹಾಡಿದ್ದಾರೆ. ತುಳುವೆರೆ ಪರ್ಬ...ಈ ಹಾಡನ್ನು್ಇಲ್ಲಿ ಕೇಳಿ


ಇವರು ಹಾಡಿರುವ ಯಕ್ಷಗಾನದ ಹಾಡುಗಳಿಗೆ ಬಹು ಬೇಡಿಕೆ ಇದ್ದು ,ಅನೇಕರು ಇವರ ಹಾಡುಗಳನ್ನೇ ಕೇಳುತ್ತಾರೆ .ನನ್ನ ಬ್ಲಾಗ್ ನಲ್ಲಿ ಇವರ ಯಕ್ಷಗಾನದ ಹಾಡುಗಳನ್ನು ಅಳವಡಿಸಿಕೊಂಡಿಲ್ಲ . ಯುವ ಭಾಗವತ ಪಟ್ಲ ರಿಗೆ ಮನೆಯಲ್ಲೂ ಪ್ರೋತ್ಸಾಹವಿದ್ದು ,ಯಕ್ಷ ಅಭಿಮಾನಿಗಳಲ್ಲಿ ಹೊಸ ಅಲೆ ಎದ್ದಿದೆ ಎಂದರೆ ತಪ್ಪಾಗಲಾರದು .

No comments:

Post a Comment