ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Monday, January 12, 2015

ಪಂಡಿತರೆಂದು ಕರೆಸಿಕರೆಸಿಕೊಳ್ಳಲು ಇಚ್ಚಿಸದ ಹಳ್ಳಿ ಪಂಡಿತ

ಳ್ಳಿ ಎಂದರೆ ಅಲ್ಲಿ  ಒಂದಲ್ಲ ಒಂದು ವಿಶೇಷ ,ವೈವಿಧ್ಯ ಇದ್ದೇ  ಇರುತ್ತದೆ . ಶುದ್ದ ಗಿಡಮೂಲಿಕೆ ಗಳಿಂದ ತಯಾರಿಸಲ್ಪಟ್ಟ  ಮದ್ದುಗಳನ್ನು ನೀಡಿ ,ಪಕ್ಷಪಾತ ,ನರಸೆಳೆತ ,ಸ್ತ್ರೀ  ರೋಗ ಮುಖ್ಯವಾಗಿ  ಬಿಳಿಸೆರಗು  ಸೇರಿದಂತೆ ಅನೇಕ ಕಾಯಿಲೆಗಳನ್ನು ಗುಣಪಡಿಸಿ  ಜನರ ವಿಶ್ವಾಸಕ್ಕೆ ಪಾತ್ರರಾದವರು ನಮ್ಮ ಹಳ್ಳಿ ಪಂಡಿತ ಶ್ರೀ ಲಿಂಗಪ್ಪ ಮೊಂಟೆತ್ತಡ್ಕ.
 ಶ್ರೀ ಲಿಂಗಪ್ಪ ಮೊಂಟೆತ್ತಡ್ಕ
ಇವರು ತಯಾರಿಸಿದ ಯಾವುದೇ ಮದ್ದುಗಳನ್ನು ಅಂಗಡಿ ಗಳಿಗೆ ಮಾರದೆ ಕರೆ ಮಾಡಿದವರಿಗೆ ಮತ್ತು ಪರಿಚಯದ ಮೂಲಕ ಬಂದವರಿಗೆ ನೀಡುತ್ತಿದ್ದು ,ಕಾಯಿಲೆ ಗುಣಮುಖವಾದ ನಂತರ ಕೊಟ್ಟಷ್ಟು ಹಣವನ್ನು ಪಡೆಯುತ್ತಾರೆ . ಪ೦ಡಿತರ ಹೆಸರಲ್ಲಿ ಅನೇಕ ಮೋಸ ವಂಚನೆಗಳು  ನಡೆಯುತ್ತಿರುವುದರಿಂದ ಮತ್ತು ಹೆಸರಿಗಾಗಿ ಮಾತ್ರ ಪಂಡಿತನೆ೦ದನಿಸಿಕೊಳ್ಳುವುದು ಇವರಿಗೆ ಇಷ್ಟವಿಲ್ಲವಂತೆ.

ಡಾ . ರಾಜ್  ಕುಮಾರ್ ಧ್ವನಿಯಲ್ಲಿ ಗಾಯನ ...!

ನೀವು ನಂಬದಿದ್ದರೂ ಇದು ಸತ್ಯ . ಇವರು ಹಾಡಲಿಕ್ಕೆ ಶುರು ಮಾಡಿದರೆ ಎಂಥವರೂ ತಲೆದೂಗಲೇ ಬೇಕು . ಬಡತನದ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಹೊಟೇ ಲ್  ಒಂದರಲ್ಲಿ ಕೆಲಸ ಮಾಡುವಾಗ ಸ್ನೇಹಿತರ ಸಹಕಾರದಿಂದ ಮಂಜುಳಾ ಗುರುರಾಜ್ ರವರ ಸಾಧನಾ ಮ್ಯೂಸಿಕ್ ಶಾಲೆಯಲ್ಲಿ ಸಂಗೀತವನ್ನು ಕಲಿತು ಆರ್ಕ್ರೆಸ್ಟ್ರ ಗಳಲ್ಲಿ ಹಾಡುವ ಮೂಲಕ ಎಲ್ಲರ ಮನಗೆದ್ದವರು . ಮನೆಯಲ್ಲಿನ ಬಡತನದ ಪರಿಣಾಮವಾಗಿ  ಕೂಲಿ ಕೆಲಸವನ್ನು ಮಾಡಿ ತನ್ನ ಜೀವನ ನಿರ್ವಹಿಸುತ್ತಿದ್ದಾರೆ. ಬಹಳ ವರುಷಗಳ ಹಿಂದೆ  ಕುಡಿತದ ದಾಸರಾಗಿದ್ದ  ಇವರನ್ನು ೨೦೦೬ ರಲ್ಲಿ ಕನ್ಯಾಡಿಯಲ್ಲಿ ನಡೆದ ಮದ್ಯವರ್ಜನ ಶಿಬಿರಕ್ಕೆ ಚೆನ್ನಪ್ಪ ಎಂಬವರು ಸೇರಿಸಿದ ಪಾರಿಣಾವಾಗಿ  ಬದುಕಿನ ದಾರಿಯೇ ಬದಲಾಯಿತು .
ಹಾಡು ಹಾಡುತ್ತಿರುರುವ ಶ್ರೀ ಲಿಂಗಪ್ಪ ಮೊಂಟೆತ್ತಡ್ಕ 
ಮುಟ್ಟಾಳೆ  ಕಟ್ಟುವುದರಲ್ಲಿ ಫೇಮಸ್ 
ಹಳ್ಳಿ ಬದುಕಿನಲ್ಲಿ ಮುಟ್ಟಾಳೆಯ ಮಹತ್ವ ಮುಖ್ಯವಾದುದು . ಶಿಬಾಜೆ ಊರಿನ ಎಲ್ಲರು ಕೂಡ  ಮುಟ್ಟಾಳೆಗಾಗಿ ಇವರನ್ನೇ ಹುಡುಕಿಕೊಂಡು ಬರುತ್ತಾರೆ .ಒಂದು ಮುಟ್ಟಾಳೆಗೆ ಅಲ್ಲಿ 40 ರಿಂದ50 ರೂಪಾಯಿ ಬೇಡಿಕೆ ಇದೆ . ಮುಟ್ಟಾಳೆ ಮಾಡುವ  ಕಲೆಯಲ್ಲಿ ಹೆಚ್ಚು ಪರಿಣತಿ  ಪಡೆದಿರುವ  ಇವರು ೩೦ ನಿಮಿಷದಲ್ಲಿ ಒಂದು ಮುಟ್ಟಾಳೆ ಯನ್ನು ತಯಾರಿಸುತ್ತಾರೆ .
ಮುಟ್ಟಾಳೆ  ಕಟ್ಟುತ್ತಿರುವುದು

ಸದಾ ನಗುಮುಖದಿಂದ ಇರುವ ಇವರು ಉರಿನಲ್ಲಿ ಹಳ್ಳಿ  ಪಂಡಿತ ಎನಿಸಿ ಕೊಂಡಿದ್ದಾರೆ .
ಹಳ್ಳಿ ಮದ್ದು ಬೇಕಾದಲ್ಲಿ ಇವರನ್ನು ಒಮ್ಮೆ ಫೊನೀನಲ್ಲಿ  ಸಂಪರ್ಕಿಸಬಹುದು .

ಇವರ ವಿಳಾಸ
ಶ್ರೀ ಲಿಂಗಪ್ಪ 
ಮೊಂಟೆ ತ್ತಡ್ಕ ಮನೆ
ಶಿಬಾಜೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ  ತಾಲೂಕು
ದಕ್ಷಿಣ ಕನ್ನಡ
ಇವರ ದೂರವಾಣಿ  ಸಂಖ್ಯೆ  :- 94480935907ಅಥವಾ
                                          7022209213

No comments:

Post a Comment