ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Thursday, May 28, 2015

ತುಳು ಸೂಪರ್ ಹಿಟ್ ಹಾಡುಗಳ ಸರದಾರ-ಲೋಕು ಕುಡ್ಲ

ಶ್ರೀ ಯುತ ಲೋಕು ಕುಡ್ಲ ಮೂಡಬಿದಿರೆಯ ಅಶ್ವತ್ತಪುರ ದವರು . ಆಳ್ವಾಸ್  ಕಾಲೇಜಿನಲ್ಲಿ  ಓದು ಮುಗಿಸಿ ನಂತರ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗಿ ಬೇರೆ ಬೇರೆ ಕೆಲಸಗಳನ್ನು ಮಾಡಿದರು .ಇದರ ಜೋತೆಯಲ್ಲಿ ಇವರು ಓದು ಕಡಿಮೆಯಾಯಿತೆಂದು ಪಿ. ಯು. ಸಿ ಶಿಕ್ಷಣವನ್ನು ಸಂಜೆ  ಕಾಲೇಜಿನಲ್ಲಿ ಮುಗಿಸಿ ಅಕೌ೦ಟಟ್  ಕೆಲಸಕ್ಕೆ ಸೇರಿಕೊಂಡರು . ಮೊನ್ನೆ ನನ್ನ ವಾರದ ಬಿನ್ನೆರೆ ಪಾತೆರಕತೆ ಕಾರ್ಯಕ್ರಮಕ್ಕಾಗಿ ಆಹ್ವಾನಿಸಿದ್ದೆ .ಅರ್ಧ ಗಂಟೆಯಲ್ಲಿ ತಮ್ಮ ಅನುಭವನ್ನು ಅನಾವರಣಗೊಳಿಸಿದರು


ಶಾಲಾ ದಿನಗಳಲ್ಲಿ ಕವನ ಬರೆಯುವ ಹವ್ಯಾಸವನ್ನು ಬೆಳೆಸಿಕೊಂದಿರುವ ಇವರು ಪಿಂಗಾರದ ಕಬಿತೆಲು ಕವನ ಸಂಕಲನವನ್ನು ಹೊರತಂದರು. ನಂತರದ ದಿನಗಳಲ್ಲಿ ಕುಡ್ಲದ ಸಿನೆಮಾ  ಮಾಡುವ ಸ್ನೇಹಿತವರ್ಗ ಸಿಕ್ಕಿತು . ಈ ಸಮಯದಲ್ಲಿ ನಿರೆಲ್ ತುಳು ಸಿನೆಮಾ  ಕ್ಕೆ ಸಾಹಿತ್ಯವನ್ನು  ಬೆರೆಯುತ್ತೇನೆ ಎಂಬುದಾಗಿ ಅವಕಾಶವನ್ನು ಕೇಳಿದರು . ನಿರೆಲ್  ಸಿನೆಮಾ ನಿರ್ದೇಶಕ ರಂಜಿತ್ ಬಜ್ಪೆ ಮತ್ತು ಶಾನ್  ಅವಕಾಶವನ್ನು ನೀಡಿದರು . ಮೊದಲ  ಸಿನೆಮಾ    ಸಾಹಿತ್ಯ ಎಲ್ಲರ ಮನ ಗೆದ್ದಿತು . ಆ ಹಾಡು ಸೇರ್ ನಗ  ಈ ಮನಸ ಅರಲ್ ನಗ  ... 
ಈ ಹಾಡನ್ನು ಹಾಡಿದ್ದು ಅಕ್ಷತಾ ರಾವ್  ಈ ಹಾಡನ್ನು ಇಲ್ಲಿ ಕೇಳಿ 
 

 ಹೀಗೆ ಈ ಸಿನೆಮಾಕ್ಕೆ ಐಟಮ್ ಸಾಂಗ್ ಸೇರಿದಂತೆ ಮೂರು ಹಾಡುಗಳನ್ನು ಬರೆದರು . ನಂತರ ಬೊಲ್ಕಿರ್ ತುಳು ಕಿರು ಚಿತ್ರವನ್ನು ನಿರ್ಮಿಸಿದರು. ಈ ತುಳು ಕಿರು ಚಿತ್ರದಲ್ಲಿ ಒಂದು ಹಾಡು ಇದ್ದು ,ಅದನ್ನು ಇವರೇ ಬರೆದಿದ್ದಾರೆ ಈ ಹಾಡು ಕೂಡ ಸೂಪರ್ ಹಿಟ್ .

ಸಧ್ಯಕ್ಕೆ ಪರ್ಬ ತುಳುಕಿರು  ಸಿನೆಮಾ ರಡಿಯಾಗುತ್ತಿದೆ.ಮುಂದೆ ಈ ಬೊಲ್ಕಿರ್ ತುಳು ಕಿರು ಚಿತ್ರ ದೊಡ್ಡ ಸಿನೆಮಾವಾಗಿ ಬರಲಿದೆ. ಇದರ  ಜೊತೆಯಲ್ಲೇ ಈಗ ತುಳು ಸಿನೆಮಾ ಚಿತ್ರರಂಗ ದಲ್ಲಿ ಸುದ್ದಿಯಲ್ಲಿರುವ" ದಂಡ್ " ತುಳು ಸಿನೆಮಾಕ್ಕೆ  ಎರಡು ಹಾಡುಗಳನ್ನು ಬರೆದಿದ್ದಾರೆ . ವಿಶೇಷವೆಂದರೆ ಇವರು ಬರೆದ ಒಂದು ಹಾಡನ್ನು ಸೋನೊನಿಗಮ್  ಹಾಡಿದ್ದಾರೆ . ಅದು ನಿನ್ನ ತೆಲಿಕೆನ್ ...ಇದು ಕೂಡ ಸೂಪರ್ ಹಿಟ್ ಹಾಡು ಇಲ್ಲಿ ಕೇಳಿ .  ಲೋಕನಾಥ ಲೋಕು ಕುಡ್ಲ ಆಗಿದ್ದು ಹೇಗೆ ?
ಲೋಕು ಕುಡ್ಲರವರು ಅನೇಕ ಕಡೆಗಳಲ್ಲಿ ಕವಿಕೊಗೊಷ್ಟಿ ಗಳಿಗೆ ಹೋಗುವ ಸಮಯದಲ್ಲಿ ಎಲ್ಲರು ಇವರನ್ನು ಲೋಕು ಎಂಬುದಾಗಿ ಕರೆಯುತ್ತಿದ್ದರು. ಸಾಹಿತ್ಯದ ಅಭಿರುಚಿ  ಬೆಳೆಸುದರ ಜೊತೆಗೆ ಗುರುವಾಗಿದ್ದವರು  ಉದಯ ಧರ್ಮಸ್ಥಳ.
ಅನೇಕರು ನೀವು ಎಲ್ಲಿಯವರು ಎಂದು ಕೇಳಿದಾಗ ಇವರು ಸುಲಭವಾಗಲೆಂದು ಕುಡ್ಲ ಎಂದು ಹೇಳುತ್ತಿದ್ದರು. ನ೦ತರದ  ದಿನಗಳಲ್ಲಿ  "ಲೋಕು ಕುಡ್ಲ " ಎಂದು ಎಲ್ಲರಿಗೂ ಪರಿಚಿತರಾದರು .. 

3 comments: