ಮನೆಯೇ ಮೊದಲ ಪಾಠ ಶಾಲೆ ,ತಾಯಿಯೇ ಮೊದಲ ಗುರು ಇದೆಲ್ಲವೂ ಸತ್ಯ ಆದರೆ ,ಮಕ್ಕಳ ಜೊತೆ ಬೆರೆತು ಕಲಿಯಲು ಮೊದಲ ಶಾಲೆ ಕೂಡ ಬೇಕಾಗುತ್ತೆ ಅಲ್ವೇ?
ನನ್ನ ಮನೆಯಿಂದ ಕೇವಲ ಹತ್ತು ನಿಮಿಷ ದ ದಾರಿ ಅದು ನನ್ನ ಶಾಲೆ . ಸ್ಲೇಟು ಬಳಪ ದೊಂದಿಗೆ ಚಡ್ಡಿ ಹಾಕಿಕೊಂಡು ಓ೦ತ್ರಡ್ಕ ಶಾಲೆಗೆ ಹೋಗಿದ್ದೆ .ನಾನು ಕಲಿಯುತ್ತಿರುವ ಸಂದರ್ಭದಲ್ಲಿ 1 ರಿಂದ 7ನೇ ತರಗತಿ ವೆರೆಗೆ ಇತ್ತು . ಈಗ 8 ನೇ ತರಗತಿಯನ್ನು ಹೊಂದಿದೆ . ನಾನು 2 ನೇ ತರಗತಿಯಲ್ಲಿ ಇದ್ದಾಗ ನನ್ನ ದೊಡ್ಡಮ್ಮನ ಮಗಳು 6 ಕ್ಲಾಸು ಓದುತಿದ್ದರು . ಆಗ ಎಲ್ಲ ಮಕ್ಕಳಿಗೂ ಬಿಸಿ ಬಿಸಿ ಹಾಲು ಸಿಗುತ್ತಿತ್ತು . ನನ್ನ ಅಕ್ಕ ಹಾಲು ಹಂಚಲು ಇರುತ್ತಿದ್ದರು . ಕೆಲವೊಮ್ಮೆ ನನಗೆ ಸಲ್ಪ ಹೆಚ್ಚು ಅಂದರೆ ಮುಕ್ಕಾಲು ಗ್ಲಾಸು ಹಾಲು ಸಿಗುತಿತ್ತು .ಈಗಿನ ಭಾಷೆಯಲ್ಲಿ ಹೇಳುವುದಾದರೆ ಇಂಪ್ಲೆನ್ಸ್!
ನನಗೆ ಬಳಪ ವನ್ನು ಕೈಯಲ್ಲಿ ಹಿಡಿದು ಬರೆಸಿದ್ದು ವೀಣಾ ಟೀಚರ್ . ನನ್ನ ಪ್ರಾಥಮಿಕ ಶಿಕ್ಷಣ ಮುಗಿದು ಸುಮಾರು 13ವರ್ಷ ಕಳೆದರೂ ಆ ಟೀಚರ್ ಇದೇ ಶಾಲೆಯಲ್ಲಿ ಈಗಲೂ ಇದ್ದಾರೆ. ನನಗೆ ಗಣಿತ ವೆಂದರೆ ಕಬ್ಬಿಣದ ಕಡಲೆ ! ಆಗ ಯಮುನಾ ಟೀಚರ್ ಇದ್ದರು .ಅವರ ಒಂದೊಂದು ಗಾಳಿ ಬೆತ್ತದ ಪೆಟ್ಟಿಗೆ ಏಷ್ಟೋ ಬಾರಿ ಶಾಲೆಗೇ ಚಕ್ಕರ್ ಹಾಕಿದ್ದು ಉಂಟು . ಜೊತೆಗೆ ಲೆಕ್ಕಗಗಳೆಲ್ಲ ಬೇಗನೆ ತಲೆಗೆ ಹೋಗುತ್ತಿತ್ತು !ಆ ಟೀಚರ್ ಮಾತ್ರ ಹೋದಾಗ ಕ್ಲಾಸಿನಲ್ಲಿ ನಾವೆಲ್ಲರೂ ಅಳುತಿದ್ದದನ್ನು ನೋಡಿ ಶಾಲೆಯ ಮುಖ್ಯ ಶಿಕ್ಷಕರು ಕ್ಲಾಸಿಗೆ ಬಂದು ಜೋಕು ಹೇಳಿ ನಮ್ಮೆರನ್ನು ನಗಿಸಿದ್ದು ಈಗಲೂ ನೆನಪಿದೆ . ನನ್ನ ಅಕ್ಕ ಕುಸುಮ .ನನ್ನ ಅಕ್ಕನನ್ನು ಮತ್ತು ನನ್ನನ್ನು ಒಂದೇ ಸಮಯದಲ್ಲಿ ಶಾಲೆಗೆ ಸೇರಿಸಿದ ಕಾರಣ 1ರಿಂದ 6 ತನಕ ಒಟ್ಟಿಗೆ ಇದ್ದೆವು . ಅಕ್ಕ 6 ನೇ ಕ್ಲಾಸಲ್ಲಿ ಫೈಲ್, ಆಗ ನನಗೆ ಕೊಡು ಬಂದದ್ದು ಮಾತ್ರ ಅಷ್ಟಿಷ್ಟಲ್ಲ . ಆರ್ಥಿಕ ಕಾರಣದಿಂದ ಮತ್ತೆ ಅಕ್ಕನ ಓದು ಮುಂದುವರಿಯಲಿಲ್ಲ .
ನಾನು ಕಲಿತ ಮೊದಲ ಶಾಲೆ |
ನಾನು ನೀರಾವರಿ ಮಂತ್ರಿಯಾದಾಗ
ಶಾಲೆಯಲ್ಲಿ ನನಗೆ ನೀರಾವರಿ ಮಂತ್ರಿ ಮಂತ್ರಿ ಸ್ಥಾನವೂ ಸಿಕ್ಕಿತ್ತು . ಶಾಲೆಯ ಬಾವಿಯಿಂದ ನೀರು ಎಳೆದು ನಾನೇ ಕೊಡುತ್ತಿದ್ದೆ. ಮತ್ತೆ ಶಾಲೆಯ ಮುಂದೆ ಇದ್ದ ತೆಂಗಿನ ಮರಗಳಿಗೆ ನೀರು ಹಾಕಲು ಇತ್ತು . ಮಣ್ಣಿನ ಮಡಕೆ, ಅದಕ್ಕೆ ಒಂದು ಸಣ್ಣ ತೂತು ಅದಕ್ಕೆ ಮೂರು ಕೊಡಪಾನ ನೀರು ಹಾಕಲು ಇತ್ತು .ಸ್ನೇಹಿತರೆಲ್ಲ ಸೇರಿ ಈ ಕೆಲಸವನ್ನು ಮಾಡುತ್ತಿದ್ದೆವು . ಅನೇಕ ಕೊಡಪಾನ ಬಾವಿಯಲ್ಲಿ ಬಾಕಿ ಆಗಿದ್ದು ಇದೆ .ಮತ್ತೆ ಮಧ್ಯಾಹ್ನದ ಸಮಯದಲ್ಲಿ ಬುತ್ತಿ ತೊಳೆಯಲು ಹೋಗಿ ಅದರ ಮುಚ್ಚಳ ಬಾವಿಗೆ ಬಿದ್ದಾಗ ಅದನ್ನು ತೆಗೆಯಲು ದೊಡ್ದ ಸಹಾಸವನ್ನೇ ಮಾಡುತ್ತಿದ್ದೆವು . ಆ ಸಮಯದಲ್ಲಿ ಹೆಚ್ಚಾಗಿ ಅಲ್ಯುಮಿನಿಯಂ ಬುತ್ತಿಗಳೇ ಇರುತಿತ್ತು . ನನ್ನ ಮತೊರ್ವ ಸ್ನೇಹಿತ ಜನಾರ್ಧನ . ಸಾಯಂಕಾಲ ಆತ ನನ್ನ ಮನೆಗೆ ಬಂದು ಹಾಡು ಕೇಳುತಿದ್ದ . ಆಗ ನಮ್ಮ ಮನೆಯಲ್ಲಿ ಕ್ಯಾಸೆಟ್ ಹಾಕುವ ಟೇಪ್ ರೆಕಾರ್ಡರ್ ಇತ್ತು ."ಇಲ್ಲದ ಯಾಜಮಾನ ಪೋದು ಬರ್ಕ ಇಲ್ಲಗ್ 'ಹಾಡನ್ನು ಜತೆಸೇರಿ ಕೇಳುತ್ತಿದ್ದದ್ದು ಈಗ ನೆನಪು ಮಾತ್ರ.
ತಿಂದ ನೆಲ್ಲಿಕಾಯಿ ವಾಪಾಸು ಬಂದಾಗ !
ಇದೊಂದು ಮಾತ್ರ ಮರೆಯಲಾಗದ ಅನುಭವ . ಆಗಷ್ಟೆ ೭ನೇ ಕ್ಲಾಸಿಗೆ ತೇರ್ಗಡೆ ಗೊಂಡ ಸ೦ಭ್ರಮ .ನಾವೇ ಹಿರಿಯರೆಂಬ ಜಂಬ ಬೇರೆ . ಮಧ್ಯಾಹ್ನ ದ ಊಟದ ಸಮಯದಲ್ಲಿ ಸ್ನೇಹಿತರು ಸೇರಿ ಪಕ್ಕದ ಗುಡ್ದದಲ್ಲಿದ್ದ ನೆಲ್ಲಿಕಾಯಿ ಮರಕ್ಕೆ ಏರಿದೆವು . ಆ ಸಮಯದಲ್ಲಿ ಅಲ್ಲಿಯ ಕೆಲಸದಾಳು ಓಡಿಸಿಕೊಂಡು ಬಂದರು . ಸಿಕ್ಕ ನೆಲ್ಲಿಕಾಯಿ ಹಿಡಿದುಕೊಂಡು ಹೇಗೋ ಬೇಲಿ ಹಾರಿ ಬಂದೆವು . ಈ ವಿಷಯವನ್ನು ಆ ಮನೆಯವರು ಶಾಲೆಗೆ ಫೋನ್ ಮಾಡಿ ಹೇಳಿದರು .ನಾವು ಬರುವ ದಾರಿಯಲ್ಲಿ ನಮ್ಮ ಹೆಡ್ ಮಾಸ್ತರ್ ಸಿಪ್ಪೆ ತೆಗೆದ ಗಾಳಿಯ ಬೆತ್ತ ಹಿಡಿದು ಕಾಯುತ್ತಿದ್ದರು . ಕೈಗೆ.ಬೆನ್ನಿಗೆ ಬಿಸಿ ಬಿಸಿ ಪೆಟ್ಟು ಬಿದ್ದ ಆಗಿನ ಅನುಭವ ಈಗಲೂ ಬೆನ್ನು ತುರಿಸುವಂತೆ ಮಾಡುತ್ತದೆ !ಕೊನೆಗೆ ನೆಲ್ಲಿಕಾಯಿಯನ್ನು ಕಿಸೆಯಿಂದ ಕೈ ಹಾಕಿ ಮತ್ತೋ ರ್ವ ಶಿಕ್ಷಕರು ತೆಗೆದರು . ಅಂದಿನಿಂದ ಇಂದಿನವರೆಗೂ ನೆಲ್ಲಿಕಾಯಿ ಕದ್ದು ತಿಂದಿಲ್ಲ .
ಆಗಿನ ಪೆಟ್ಟು ನಿಜಕ್ಕೂ ಮರೆಯಲಾಗದು ಉದ್ದನೆಯ ಗಾಳಿಯ ಬೆತ್ತ ತರಲು ನನ್ನಲ್ಲೇ ಹೇಳುತ್ತಿದ್ದರು ,ಮತ್ತೆ ತಪ್ಪು ಮಾಡಿದಾಗ ಅದೇ ಬೆತ್ತದಿಂದ ಬಿಸಿ ಏಟು . ಬೀಳುವ ಪೆಟ್ಟು ಕಡಿಮೆಯಾಗಲೆಂದು ನಾನೇ ಬೆತ್ತ ತರುತ್ತಿದ್ದೆ ಆದ್ರೆ ಏನ್ ಮಾಡೋದು ಹೇಳಿ ವೇದ ಸುಳ್ಳಾದರು ಗಾದೆ ಸುಳ್ಳಲ್ಲ !
ನಾನು ಓರ್ವ ಕ್ರೀಡಾ ಪಟು ಅಂತ ಹೇಳೋದಕ್ಕೆ ಹೆಮ್ಮೆ ಆಗುತ್ತಿದೆ . ಖೋ ಖೋ ಕಲಿತದ್ದೇ ಓ೦ತ್ರಡ್ಕ ಶಾಲೆಯಲ್ಲಿ . ಅನೇಕ . ಖೋ ಖೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ . ಡೈ ಬೀಳುವುದರಲ್ಲಿ ನನಗೂ ಒಂದು ಹೆಸರು ಇತ್ತು . ಎಲ್ಲೂ ಪ್ರಕಟ ಪಡಿಸದ ನನ್ನ ಮನದಾಳಾದ ಮಾತುಗಳಿಗೆ ಈ ನನ್ನ ಬ್ಲಾಗ್ ಅವಕಾಶ ಮಾಡಿಕೊಟ್ಟಿತು .ಆಗಿದ್ದ ಈಗ ನನ್ನ ಶಾಲೆ ತುಂಬಾ ಬೆಳೆದಿದೆ ಬಹಳ ವಿಸ್ತಾರವಾದ ಆಟದ ಮೈದಾನವಿದೆ . ಶೌಚಾಲಯ ವಿದೆ .ಉತ್ತಮ ಶಿಕ್ಷಕ ವರ್ಗ ವಿದೆ .
ಹಳೆಯ ನೆನಪುಗಳು ಗಟ್ಟಿಯಾಗಿ ನಮ್ಮ ಮನದಾಳದಲ್ಲಿ ಬೇರೂರಿ ಆಗಾಗ ಹೊರಹೊಮ್ಮುತ್ತವೆ. ಆ ನೆನಪುಗಳು ಹಾದುಹೋಗಲು ಬರಲು ಇಂತಹ ಬ್ಲಾಗ್ ಗಳು ಹೆಚ್ಚು ಸಹಕಾರಿ.ಎಷ್ಟೋ ಜನರಿಗೆ ನಿಮ್ಮ ನೆನಪುಗಳು ನೆಪವಾಗಿ ಅವರದೇ ಆದ ಅವೆಷ್ಟೋ ನೆನಪುಗಳನ್ನು ಮೊಗೆಮೊಗೆದು ಕೊಡಬಹುದು. ಹೀಗೇ ಬರೆಯುತ್ತಿರಿ. ಬರೆವವರಿಗೆ ಸ್ಫೂರ್ತಿಯಾಗಿ.
ReplyDeleteಧನ್ಯವಾದಗಳು
DeleteReally nice write up . Thanks for recalling my school days... Keep it up good work... :-)
ReplyDelete