ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Friday, January 16, 2015

ಖಾರ ಮೆಣಸು ತಿಂದಾಗ ...

ನಾನು ಸಣ್ಣ ಪ್ರಾಯದಲ್ಲಿ ಇರುವಾಗ ಕಿವಿ ನೋವು ಬಂದ ಕಾರಣ ಕ್ಕೆ ಮೆಣಸಿನ ಎಣ್ಣೆ ಬಿಟ್ಟ ನೆನಪು .ಆಂದಹಾಗೇ ಆ ಮೆಣಸಿನ ಎಣ್ಣೆ ತಯಾರು ಮಾಡುವುದಕ್ಕೂ ಪರಿಣತಿ ಇರಬೇಕು . ನನ್ನ ಅಜ್ಜಿ ಇರುವಾಗ ಇಂತಹ ಮದ್ದು ತಯಾರು ಮಾಡುತ್ತಿದ್ದರು . ಈಗ ಅನಿವಾರ್ಯ ಮತ್ತು ಅಗತ್ಯವಾಗಿ ವೈದ್ಯರನ್ನು ಕಾಣಲೇಬೇಕಾಗುತ್ತದೆ. ಅಂದೊಮ್ಮೆ ನನ್ನ ಸ್ನೇಹಿತರೆಲ್ಲ ಸೇರಿ ಕಾಯಿ ಮೆಣಸು ತಿನ್ನುವ ಸಣ್ಣ ಸ್ಪರ್ಧೆಯನ್ನು ಮದುವೆ  ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದೆವು . ನಾನು ಐದು ಮೆಣಸು ತಿಂದೆ . ಆ ಖಾರ ಇಂದಿಗೂ ನೆನಪಾಗುತ್ತದೆ . ನನ್ನ ಮತ್ತೊಬ್ಬ ಸ್ನೇಹಿತ ಬರೋಬ್ಬರಿ ಹದಿನೈದು ಮೆಣಸು ತಿಂದ . ಅವನಿಗೆ ಇನ್ನೂರು ರೂಪಾಯಿ ಸಿಕ್ಕಿತು! ಮತ್ತೆ .ಮನೆಯಲ್ಲಿ ತಯಾರಿಸುವ ಪದಾರ್ಥ ಗಳಲ್ಲಿ ಹೆಚ್ಚಾಗಿ ಮೆಣಸನ್ನು  ಬಳಸುತ್ತಾರೆ . ಇನ್ನು ಕೆಲವರು ಮೆಣಸಿನ ಹುಡಿಯನ್ನು ಸಾಂಬಾರು ತಯಾರು ಮಾಡಲು ಉಪಯೋಗಿಸುವುದುಂಟು . ನಾನು ಒಂದು ಮದುವೆ  ಕಾರ್ಯಕ್ರಮಕ್ಕೆ ಮುಂಚಿತವಾಗಿ ಹೋಗಿದ್ದೆ . ಆಗ ನನಗೆ  ಹತ್ತು ವರ್ಷ !ಹೌದು  ನನ್ನ  ನೆಂಟರಿಷ್ಟರೆಲ್ಲ ಒಂದೆಡೆ ಸೇರಿ ಮೆಣಸಿನ ತೊಟ್ಟು ತೆಗೆಯುತ್ತಿದ್ದರು. ಅದು ಕೂಡ  ಒಂದೇ ನಮೂನೆಯ ಮೆಣಸಲ್ಲ . ಸಲ್ಪ ಕಪ್ಪು ,ಇನ್ನು ಕೆಲವು ತುಂಬಾ ಕೆಂಪು ,ಇನ್ನೂ ಕೆಲವು ಕುಂಬಳಕಾಯಿ ರೂಪ ಇರುವ ಮೆಣಸು...  ಹೀಗೆ ನಾಲ್ಕೈ ದು ಬಗೆಯ ಮೆಣಸನ್ನು ಮರುದಿನದ ಅಡುಗೆಗಾಗಿ ತಯಾರು ಮಾಡುತ್ತಿದ್ದರು . ಅದೇ ಕೊನೆ ಇದುವರೆಗೂ ಇಂತಹ  ಸಂದರ್ಭ ಮತ್ತೆ ಒದಗಿ ಬಂದಿಲ್ಲ . ಏನೇ ಇರಲಿ ಇತ್ತೀಚಿಗೆ ನಾನು ಆಳ್ವಾಸ್ ನುಡಿಸಿರಿ  ಗೆ ಹೋಗಿದ್ದೆ ಅನೇಕ ಪ್ರದರ್ಶನ ಗಳ ನಡುವೆ ತೋಟಗಾರಿಕೆ ಇಲಾಖೆಯ ವತಿಯಿಂದ ಬೇರೆ ಬೇರೆ ತರಕಾರಿಗಳ ಪ್ರದರ್ಶನವೂ ಇತ್ತು . ಅಲ್ಲಿ ಕೆಲವೊಂದು ಮೆಣಸುಗಳನ್ನು  ನೋಡಿ ಮನಸು ಅರಳಿತು . ಬ್ಯಾಡಗಿ ಮೆಣಸು ,ಗುಮ್ ಟುರ್ ಮೆಣಸು,ಬಳ್ಳಾರಿ ಮೆಣಸು,ಬೀದರ್ ಮೆಣಸು,ಗದಗ ಮೆಣಸು ,ಬಿರ್ದ ಮೆಣಸು ,ಹುಬ್ಬಳ್ಳಿ ಮೆಣಸು  ಒಟ್ಟಿನಲ್ಲಿ ಮೆಣಸಿನ ಲೋಕವೇ ಸರಿ. ಇದರ ಜೊತೆಗೆ ಜಗತ್ತಿನ ಖಾರದ ಮೆಣಸು ನೋಡಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತು ನಿಜಕ್ಕೂ ಸತ್ಯ !

ನಾನು ಖಾರ ತಿನ್ನುವುದರಲ್ಲಿ ಸಲ್ಪ ಹಿಂದೆ. ಹಾಗೆಂದು ಮಾಂಸ ಪದಾರ್ಥ ಗಳು ಖಾರವೆ ಆಗಬೇಕು . ಅತಿ ಖಾರವನ್ನು ತಿನ್ನುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದನ್ನು ವೈದ್ಯರು ಆಗಾಗ ಹೇಳುತ್ತಿರುತ್ತಾರೆ . ಮೆಣಸನ್ನು ಹಳ್ಳಿ ಮದ್ದಿನಲ್ಲಿ ಕೂಡ  ಊಪಯೋಗ ಮಾಡುವ ಬಗ್ಗೆ  ನನ್ನ ಅಜ್ಜಿ ಹೇಳುತ್ತಿದ್ದರು . ಕೊಲೆಸ್ಟ್ರಾಲ್ ಕರಗಿಸುವಲ್ಲಿ ಈ ಮೆಣಸು ಹೆಚ್ಚಿನ ಪಾತ್ರವನ್ನು ಮಾಡುತ್ತದೆ . ಇನ್ನೂ ಚಟ್ನಿ ಮಾಡುವಾಗ ಕಾಯಿ ಮೆಣಸು ಹೆಚ್ಚಾಗಿ ಬಳಸುವುದನ್ನು ನಾವೆಲ್ಲರೂ ಗಮನಿಸಿದ್ದೇವೆ . ಅತೀ ಹೆಚ್ಚು ಖಾರ ಒಳ್ಳೆಯದಲ್ಲ ಖಾರದ ಜೊತೆ ಶುಂಠಿ, ಬೆಳ್ಳುಳ್ಳಿ ಇವುಗಳ ಕೂಡುವಿಕೆಯು ಇದ್ದರೆ ಚೆನ್ನ . ಕೆಲವು ಬಗೆಯ ಮೆಣಸುಗಳು ಇಲ್ಲಿದೆ ನೋಡಿ:-







ನನ್ನನ್ನು ಫೇಸ್ಬುಕ್ ನಲ್ಲಿ ಸಂಪರ್ಕಿಸಬಹುದು vk kadaba

No comments:

Post a Comment