ಪ್ರಸ್ತುತ ಇರುವ ನಮ್ಮ ಆಚಾರ ವಿಚಾರ ,ಗುರು ಹಿರಿಯರಿಗೆ ನೀಡುತ್ತಿರುವ ಗೌರವ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ .
ಅನೇಕ ಹಿರಿಯ ಮನಸುಗಳು ಇಂದು ವೃದ್ದಾಶ್ರಮ ದಲ್ಲಿ ಕಾಲ ಕಳೆಯುತ್ತಿರುವ ನೈಜ ಚಿತ್ರಣ ನಮ್ಮ ಕಣ್ಣ ಮುಂದಿದೆ . ಸಮಾಜದಲ್ಲಿ ಕೆಟ್ಟ ಕಾರ್ಯಗಳ ವೈಭವೀಕರಣ ಹೆಚ್ಚಾಗುತ್ತಿದೆ . ಹಿರಿಯರನ್ನು ಸದಾ ನಿಂದಿಸುವ ಅಥವಾ ಅವರ ಬಗ್ಗೆಕೀಳರಿಮೆ ಯ ಮಾತುಗಳೇ ಬಾಯಿ ತುಂಬಿ ಹೋಗಿದೆ . ಇದಕ್ಕೆ ಪೂರಕವೆ೦ಬ೦ತೆ ಮಂಗಳೂರಿನ ಎಕ್ಕೂರಿನ ಗಿರಿಜಾ ಎನ್ನುವ ಈ ಹಿರಿಯ ಮನಸು ತನ್ನ ಎರಡು ಕಣ್ಣುಗಳನ್ನು ಸತ್ತ ಮೇಲೆ ದಾನ ಮಾಡಲು ಮುಂದಾಗಿದ್ದಾರೆ .ಈ ಮೂಲಕ ಶೋಕಿ ಜೀವನದ ವ್ಯಾಮೋಹದಲಿ ಬ್ಯುಸಿಯಾಗಿರುವ ಯುವ ಸಮುದಾಯಕ್ಕೆ ಮಾದರಿಯಾಗಿ ಬದುಕುತ್ತಿರುವುದು ಹೆಮ್ಮೆಯ ವಿಷಯ.
. ಸದಾ ಕೊಲೆ, ದರೋಡೆ. ಅತ್ಯಾಚಾರ ಸುದ್ದಿಗಳೇ ಮಾಧ್ಯಮದ ವಸ್ತುವಾಗಿರುವ ಈ ಸಮಯದಲ್ಲಿ ಇಂಥವರನ್ನೂ ಗುರುತಿಸುವ ಕೆಲಸ ನಮಾದಬೇಕು ಗಿರಿಜಾರವರಿಗೆ ಈಗ74 ವರ್ಷ ಪ್ರಾಯ . ಸದಾ ಲವಲವಿಕೆಯಿಂದ ತಮ್ಮ ಮನೆಕೆಲಸ ಮಾಡುತ್ತಲೇ ಇರುತ್ತಾರೆ .ಇವರ ಸರಳ ಜೀವನವೇ ಒಂದು ಹೊಸ ಬದುಕನ್ನು ಕಟ್ಟಿಕೊಡುವಂತಿದೆ . ಇಂತಹ ಹಿರಿಯ ಚೇತನ ಎಷ್ಟೋ ಕಡೆಗಳಲ್ಲಿ ಇದ್ದಾರೆ . ನನ್ನ ರೇಡಿಯೋ ಕಾರ್ಯಕ್ರಮದ ನಿಮಿತ್ತ ಎಕ್ಕೂರಿಗೆ ಹೋದಾಗ ನನ್ನ ಗಮನಕ್ಕೆ ಬಂತು . ಅವರಿಗೊಂದು ಪ್ರೀತಿಯಿಂದ ನೆನಪಿನ ಕಾಣಿಕೆ ನೀಡಿ ಅವರಿಂದ ಆಶೀರ್ವಾದ ಪಡೆದೆ . ಹಿರಿಯರಲ್ಲಿಯೂ ಸಮಾಜಮುಖಿ ಚಿಂತನೆಯಿದೆ ,ಸಮಾಜದಲ್ಲಿ ಮಾದರಿಯಾಗಿ ಬದುಕಬೇಕೆನ್ನುವ ಹಂಬಲವಿದೆ . ಅದಕ್ಕಿಂತಲೂ ಮಿಗಿಲಾಗಿ ಅನುಭವ ದ ಆಗರವೇ ತುಂಬಿದೆ . ಹಿರಿಯರು ನಮಗೆ ಎಂದೆಂದಿಗೂ ಮಾರ್ಗದರ್ಶಕರು ಎನ್ನುವುದರಲ್ಲಿ ಎರಡು ಮಾತಿಲ್ಲ .ಸಮಾಜದಲ್ಲಿ ಬದುಕುವ ನಾವು ಮರಳಿ ಸಮಾಜಕ್ಕೆ ಏನನ್ನು ನೀಡೋಣ ?
No comments:
Post a Comment