ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Saturday, January 31, 2015

ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ

ತಿಂಡಿ  ಕೊಟ್ಟರೆ  ತಿನ್ನದೆ  ಮನಸು ಬರುತ್ತಾ? ಇಲ್ಲ ಬಿಡಿ ! ಮೊನ್ನೆ ನನ್ನ ಸ್ನೇಹಿತ ನ ಜೊತೆ  ಕಡಬದಲ್ಲಿರುವ ಆತ್ಮೀಯ ಮತ್ತೋರ್ವ ಸ್ನೇಹಿತರ ಮನೆಗೆ ಹೋಗಿದ್ದೆವು . ಕೆಲವು ಕಾರ್ಯಕ್ರಮಗಳ ಬಗ್ಗೆ ವಿವರವಾದ ಚರ್ಚೆ ಕೂಡ ಆಯ್ತು . ಮಾತಿನ ನಡುವೆ ಆಗಾಗ  ಕಾಫಿಯು ಸಿಗುತಿತ್ತು . ಅದು ಒಂದು ಗಂಟೆಯ ಮಾತುಕತೆಯಲ್ಲ .ಒಂದು ದಿನದ ಮಾತುಕತೆ !ಕೆಲವು ಕಲಾವಿದರೂ ಸೇರಿದ್ದರು . ಅವರ ಅನುಭವ ದ ಮಾತುಗಳಿಗೆ ನಾವು ಕಿವಿಯಗಿದ್ದೆವು . ಮಧ್ಯಾಹ್ನದ ಊಟ ಕ್ಕೆ  ತೊಂಡೆಕಾಯಿ ಗೊಜ್ಜು ,ಸಿಂಪಲ್ ಒಂದು ಸಾರು ,ಜೊತೆಗೆ ಮನೆಯಲ್ಲೇ ತಯಾರಿಸಿದ ಮಾವಿನ ಉಪ್ಪಿನಕಾಯಿ . ಹೊಟ್ಟೆ ಪೂರ್ತಿಯಾಯಿತು . ಮತ್ತೆ ಕೆಲವು ಹಾಡುಗಳನ್ನು ಧ್ವನಿ ಮುದ್ರಣ ಮಾಡುತ್ತಾ ಸಮಯ ಕಳೆದದ್ದೇ ಗೊತ್ತಾಗಲಿಲ್ಲ . ರಾತ್ರಿ ಒಂಭತ್ತು  ಗಂಟೆ . ಅದು ಊಟ ದ ಸಮಯ ಬೇರೆ . ಅಷ್ಟರಲ್ಲಿ  ಬಂದು ನೋಡಿ  ಬಿಸಿ ಬಿಸಿ ಸೇಮಗೆ . ಜೊತಗೆ ಬಾಳೆಹಣ್ಣಿನ ರಸಾಯನ .
ಈ ಸೇಮಿಗೆಚಿತ್ರ ವನ್ನು http://www.tulunadunews.comನಿ೦ದ ಸಂಗ್ರಹಿಸಲಾಗಿದೆ.
ಈ ಸೇಮಗೆ ಬಗ್ಗೆ ಏನು ಹೇಳ ಹೊರಟಿರುವೆನೆಂದರೆ  ನಮ್ಮ ತುಳುನಾಡಿನಲ್ಲಿ ಒಂದು ಸಂಪ್ರದಾಯ ಯಾರಾದರೂ  ನೆಂಟರು  ತುಂಬಾ ದಿನ ಇದ್ದರೆ  ಅವರನ್ನು ಹೋಗಿ ಎಂದು ಬಾಯಿಬಿಟ್ಟು ಹೇಳಲು  ಸಾಧ್ಯವಾಗದು ,ಆದ್ರೆ ಹೋಗಿ ಎನ್ನುವ ಸಂಕೇತವಾಗಿ ಸೇಮಗೆಯನ್ನು ಮಾಡಿ ಕೊಡುವುದು ರೂಢಿ . ಅದೇ ಸನ್ನಿವೇಶ ನಿರ್ಮಾಣವಾಯ್ತೆನೊ  ಅಂತ ನಾನು ನನ್ನ ಸ್ನೇಹಿತ ಮುಖ ಮುಖ ನೋಡಿಕೊಂಡು ಜೋರಾಗಿ ನಕ್ಕು ಬಿಟ್ಟೆವು . ಆಗ ಸೇಮಗೆ  ಮಾಡಿಕೊಟ್ಟ ಮನೆಯವರು ಇದು ಹೋಗಿ ಎನ್ನುವುದರ ಸಂಕೇತವಲ್ಲ ಮತ್ತೆ ಮತ್ತೆ ಬನ್ನಿ ಎನ್ನುವುದಕ್ಕಾಗಿ  ಅಂದಾಗ  ನಮಗೆ ಮತ್ತೂ ಜೋರಾದ ನಗು  .ಸೇಮಗೆ ತಿಂದರೂ  ಮತ್ತೂ ಮಾತುಕತೆಯಲ್ಲಿ ತೊಡಗಿದೆವು . ಆಗ ನನ್ನ ಸ್ನೇಹಿತ ಹೇಳಿದ "ದಾದಾ ಮರಯೇರೆ ಸೆಮೆ ಕೊರುಂಡಲಾ ಪಿದಡುನ ತೋಜುಜಿ  ಅತ್ತ "(ಸೇಮಗೆ ಕೊಟ್ಟರೂ ಹೊರಡುವ ಲಕ್ಷಣ ಕಾಣುತ್ತಿಲ್ಲ )ಅಂತು ಹೊಟ್ಟೆ ತುಂಬಾ ಸೇಮಗೆ ತಿಂದು ಮನೆದಾರಿ ಹಿಡಿದೆವು . ಇನ್ನು ಕಾರ್ಯಕ್ರಮದ ಸಲುವಾಗಿ ಮತ್ತೆ ನಾಲೂರು ಗಿರಿವನ ಅವರ ಮನೆಗೆ ಹೋಗಲು ಇದೆ .  ನಾನು ನನ್ನ ಸ್ನೇಹಿತ ಫೋನಿನಲ್ಲಿ ಮಾತಾಡುವಾಗ ಪದೇ  ಪದೇ  ಸೇಮಗೆಯ ಸುದ್ದಿಯನ್ನು ಹೇಳಿ ನಗುವಿನ ಲೋಕಕ್ಕೆ ಜಾರಿ ಹೋಗುತ್ತೇವೆ . 

No comments:

Post a Comment