"ಆಡು ಮುಟ್ಟದ ಸೊಪ್ಪಿಲ್ಲ" ಎನ್ನುವ ಮಾತು ನೀವೆಲ್ಲರೂ ಕೇಳಿರಲೇ ಬೇಕು . ನಾನಾಗ 8ನೇ ತರಗತಿ ಓದುತ್ತಿದ್ದೆ.
ನಮ್ಮ ಮನೆಯಲ್ಲಿ ಆಗಎರಡು ಆಡುಗಲಿದ್ದವು . ಗಂಡು ಆಡಿನ ಹೆಸರು "ಕುಟ್ಟ" ಹೆಣ್ಣು ಆಡಿನ ಹೆಸರು "ಕುಟ್ಟಿ" . ಹೀಗೆ ಪ್ರೀತಿಯಿಂದ ಅದನ್ನುಕುಟ್ಟ- ಕುಟ್ಟಿ ಎಂದು ಕರೆಯುತ್ತಿದ್ದೆವು . ಆಡುಗಳನ್ನು ನಾವೇನು ಕಟ್ಟಿ ಹಾಕುತಿರಲಿಲ್ಲ . ಅದರಷ್ಟಕೆ ಬಂದು ತಿಂದು ಹೋಗುತ್ತಿದ್ದವು. ನಮ್ಮ ಪ್ರೀತಿಯ ಕುಟ್ಟ ನಮ್ಮ ಮನೆಯ ತುದಿಗೆ(ಮನೆಯ ಕುಬಾಲ್) ಹೋಗಿ ಜಾರಿಕೊಂಡು ಬರುತಿತ್ತು . ಪಕ್ಕದಲ್ಲಿ ಹಂಚಿನ ಮಾಡು ಏರಲು ಎತ್ತರದ ಜಾಗವು ಇತ್ತು . ಕೊನೆಗೆ ಅದರ ಉಪದ್ರ ತಡೆಯಲಾರದೆ ತಂದೆ ಅದನ್ನು ಮಾರಿಬಿಟ್ಟರು .ಆಗೇನು ನಮಗೆ ಬೇಸರ ಆಗಲಿಲ್ಲ . ಮತ್ತೊಂದು ಕುಟ್ಟಿ ಅದಕ್ಕೆ ದಿನಾ ಬಟಾಣಿ ಕಡ್ಲೆ ಬೇಕೆ ಬೇಕು . ಅದಕ್ಕೆ ಬಟಾಣಿ ರುಚಿ ಹಿಡಿಸಿದ್ದೆ ನಾನು ! ಶಾಲೆಯಿಂದ ನಡೆದು ಕೊಂಡು ಬರುವಾಗ ಕಡ್ಲೆ ತಿನ್ನುತ್ತಾ ಬರುತ್ತಿದ್ದೆವು . ಉಳಿದ ಕಡ್ಲೆಯನ್ನು ಪ್ರೀತಿಯ ಕುಟ್ಟಿಗೆ ಕೊಡುತ್ತಿದ್ದೆ .
ಒಂದು ದಿನ ಮನೆಯಲ್ಲಿ ಯಾರು ಇರಲಿಲ್ಲ . ಅದು ಶನಿವಾರ ಬೇರೆ ತಾಯಿ ಆಗ ಬೇರೆ ಕಡೆ ಕೆಲಸ ಮಾಡುತ್ತಿದ್ದರು . ನಾವು ಶಾಲೆ ಬಿಟ್ಟು ಮನೆಗೆ ಬಂದು ಊಟದ ಗಡಿಬಿಡಿಯಲ್ಲಿ ಇದ್ದೆವು . ಕುಟ್ಟಿಯನ್ನು ಕರೆದರೆ ಸುದ್ದಿಯೇ ಇಲ್ಲ . ಸಲ್ಪ ಹೊತ್ತು ಆದಾಗ ಜೋರಾಗಿ ಬೇ... ಬೇ... ಬೇ... ಬೇ... ಎಂಬ ಕೂಗು ಕೇಳಿತು . ನಾವೆಲ್ಲಾ ಒಮ್ಮೆ ಅತ್ತಿತ್ತ ಓಡಿದೆವು . ಪೋದೆಯೊಂದರಿಂದ ರಕ್ತ ಸುರಿಸುಕೊಂಡು ಮನೆಯ ಅಂಗಳಕ್ಕೆ ಕುಟ್ಟಿ ಬಂತು. ಸಲ್ಪ ಹೊತ್ತಲ್ಲೇ ಎರಡು ನಾಯಿಗಳು ಕೂಡ ಬಂದವು . ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಕೊತ್ತಳಿಗೆ ಯಲ್ಲಿ ನಾಯಿಗೆ ಬಿಸಾಡಿದೆವು . ಅದು ನಮ್ಮ ಪಕ್ಕದ ಮನೆಯವರ ನಾಯಿ ಆ ನಾಯಿಯನ್ನು ಯಾವತ್ತು ಬಿಡಲ್ಲ .ಆ ದಿನ ಮಾತ್ರ ಅದು ತಪ್ಪಿಸಿಕೊಂಡು ಬಂದಿತ್ತು . ನಮ್ಮ ಕುಟ್ಟಿಗೆ ಕುತ್ತಿಗೆಗೆ ಗಾಯವಾಗಿತ್ತು. ನಮ್ಮ ಮನೆಯ ಜಗಲಿಯಲ್ಲಿ ಬಂದು ಅಡ್ಡ ಮಲಗಿದನ್ನು ನೋಡಿ ನಾವೆಲ್ಲಾ ಜೋರಾಗಿ ಬೊಬ್ಬೆ ಹೊಡೆದೆವು . ಹೇಗೊ ತಾಯಿ ಬಂದು ಮದ್ದು ನೀಡಿದರು . ಮತ್ತಿ ಕುಟ್ಟಿಯನ್ನು ಕಟ್ಟಿಹಾಕಲು ಶುರು ಮಾಡಿದೆವು . ಆಡಿನ ಮೇಲೆ ನನಗೆ ತುಂಬಾ ಪ್ರೀತಿ ಇತ್ತು ನಾನು ನನ್ನ ಅಕ್ಕ, ತಮ್ಮ ದಿನಾ ನಾಚಿಕೆ ಹುಲ್ಲು ಇರುವ ಕಡೆ ಹೋಗಿ ಅದನ್ನು ಮೇ ಯಿಸುತ್ತಿದ್ದೆವು .
ಕೊನೆಗೆಪ್ರೀತಿಯ ಕುಟ್ಟಿಯನ್ನು ಒಮ್ಮೆ ಕೊಡುವಂತೆ ಕೇಳಿಕೊಂಡು ಓರ್ವರು ಬಂದರು . ಆಗ ನಮ್ಮ ತಂದೆ ಅದಕ್ಕೆ ಒಪ್ಪಿಕೊಂಡರು. ನಾವು ಆಗಲೇ ಜೋರಾಗಿ ಕೂಗಲು ಶುರು ಮಾಡಿದೆವು . ಆಗ ನಮಗೆ ಮೂರು ಮಂದಿಗೂ ತಂದೆ ಐಸ್ ಕ್ಯಾಂಡಿ ಕೊಡಿಸಿದ್ದರು. ಮರುದಿನ ರಿಕ್ಷಾ ಬಂತು ಆಗ ಇದ್ದಿದ್ದು ಲ್ಯಾಂಬಿ ರಿಕ್ಷಾ .ಅದರ ಡಿಕ್ಕಿ ತೆರೆದು ಅದರಲ್ಲಿ ಮಲಗಿಸಿದರು .
.ನಾವೆಲ್ಲ ಜೋರು ಜೋರು ಕೂಗಿದ೦ತೆ ಆದು ಕೂಡ ಬೊಬ್ಬೆ ಹಾಕುತಿತ್ತು . ನೋಡುತಿದ್ದಂತೆಯೇ ರಿಕ್ಷಾ ಸೀದಾ ಹೋಯಿತು. ಅಂದಿನಿಂದ ನಮ್ಮ ಮನೆಯಲ್ಲಿ ನಾಯಿ ಮತ್ತು ಬೆಕ್ಕು ಹೊರತು ಪಡಿಸಿ ಬೇರೆ ಸಾಕು ಪ್ರಾಣಿಯನ್ನು ಸಾಕುವುದಿಲ್ಲ . ಆ ಆಡಿನ ಒಡನಾಟ ಈಗ ಬರೀ ನೆನಪಾಗಿ ಮಾತ್ರ ಇದೆ .
ನಮ್ಮ ಮನೆಯಲ್ಲಿ ಆಗಎರಡು ಆಡುಗಲಿದ್ದವು . ಗಂಡು ಆಡಿನ ಹೆಸರು "ಕುಟ್ಟ" ಹೆಣ್ಣು ಆಡಿನ ಹೆಸರು "ಕುಟ್ಟಿ" . ಹೀಗೆ ಪ್ರೀತಿಯಿಂದ ಅದನ್ನುಕುಟ್ಟ- ಕುಟ್ಟಿ ಎಂದು ಕರೆಯುತ್ತಿದ್ದೆವು . ಆಡುಗಳನ್ನು ನಾವೇನು ಕಟ್ಟಿ ಹಾಕುತಿರಲಿಲ್ಲ . ಅದರಷ್ಟಕೆ ಬಂದು ತಿಂದು ಹೋಗುತ್ತಿದ್ದವು. ನಮ್ಮ ಪ್ರೀತಿಯ ಕುಟ್ಟ ನಮ್ಮ ಮನೆಯ ತುದಿಗೆ(ಮನೆಯ ಕುಬಾಲ್) ಹೋಗಿ ಜಾರಿಕೊಂಡು ಬರುತಿತ್ತು . ಪಕ್ಕದಲ್ಲಿ ಹಂಚಿನ ಮಾಡು ಏರಲು ಎತ್ತರದ ಜಾಗವು ಇತ್ತು . ಕೊನೆಗೆ ಅದರ ಉಪದ್ರ ತಡೆಯಲಾರದೆ ತಂದೆ ಅದನ್ನು ಮಾರಿಬಿಟ್ಟರು .ಆಗೇನು ನಮಗೆ ಬೇಸರ ಆಗಲಿಲ್ಲ . ಮತ್ತೊಂದು ಕುಟ್ಟಿ ಅದಕ್ಕೆ ದಿನಾ ಬಟಾಣಿ ಕಡ್ಲೆ ಬೇಕೆ ಬೇಕು . ಅದಕ್ಕೆ ಬಟಾಣಿ ರುಚಿ ಹಿಡಿಸಿದ್ದೆ ನಾನು ! ಶಾಲೆಯಿಂದ ನಡೆದು ಕೊಂಡು ಬರುವಾಗ ಕಡ್ಲೆ ತಿನ್ನುತ್ತಾ ಬರುತ್ತಿದ್ದೆವು . ಉಳಿದ ಕಡ್ಲೆಯನ್ನು ಪ್ರೀತಿಯ ಕುಟ್ಟಿಗೆ ಕೊಡುತ್ತಿದ್ದೆ .
ಕೊನೆಗೆಪ್ರೀತಿಯ ಕುಟ್ಟಿಯನ್ನು ಒಮ್ಮೆ ಕೊಡುವಂತೆ ಕೇಳಿಕೊಂಡು ಓರ್ವರು ಬಂದರು . ಆಗ ನಮ್ಮ ತಂದೆ ಅದಕ್ಕೆ ಒಪ್ಪಿಕೊಂಡರು. ನಾವು ಆಗಲೇ ಜೋರಾಗಿ ಕೂಗಲು ಶುರು ಮಾಡಿದೆವು . ಆಗ ನಮಗೆ ಮೂರು ಮಂದಿಗೂ ತಂದೆ ಐಸ್ ಕ್ಯಾಂಡಿ ಕೊಡಿಸಿದ್ದರು. ಮರುದಿನ ರಿಕ್ಷಾ ಬಂತು ಆಗ ಇದ್ದಿದ್ದು ಲ್ಯಾಂಬಿ ರಿಕ್ಷಾ .ಅದರ ಡಿಕ್ಕಿ ತೆರೆದು ಅದರಲ್ಲಿ ಮಲಗಿಸಿದರು .
.ನಾವೆಲ್ಲ ಜೋರು ಜೋರು ಕೂಗಿದ೦ತೆ ಆದು ಕೂಡ ಬೊಬ್ಬೆ ಹಾಕುತಿತ್ತು . ನೋಡುತಿದ್ದಂತೆಯೇ ರಿಕ್ಷಾ ಸೀದಾ ಹೋಯಿತು. ಅಂದಿನಿಂದ ನಮ್ಮ ಮನೆಯಲ್ಲಿ ನಾಯಿ ಮತ್ತು ಬೆಕ್ಕು ಹೊರತು ಪಡಿಸಿ ಬೇರೆ ಸಾಕು ಪ್ರಾಣಿಯನ್ನು ಸಾಕುವುದಿಲ್ಲ . ಆ ಆಡಿನ ಒಡನಾಟ ಈಗ ಬರೀ ನೆನಪಾಗಿ ಮಾತ್ರ ಇದೆ .
No comments:
Post a Comment