ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Tuesday, March 10, 2015

ದಯೇ ತೋರು ಒಮ್ಮೆ ಕಣ್ತೆರೆದು - ಸಂಗೀತದೊಂದಿಗೆ ನನ್ನ ಭಕ್ತಿ ಸಾಹಿತ್ಯ

ಸಂಗೀತ ,ಸಾಹಿತ್ಯ ನಮ್ಮ  ಜೀವನದ  ನಡುವೆ ಸಂತೋಷದ ,ಅವಿಸ್ಮರಣೀಯ ಅಂಗವಾಗಿದೆ . ನಾನು ಅನೇಕ ತುಳು ಕನ್ನಡ ಲೇಖನದ ಜೊತೆಗೆ ಕವನ ,ಹಾಸ್ಯ ಲೇಖನ ,ಪ್ರಬಂಧ  ಗಳನ್ನು ಬರೆಯುತ್ತಿದ್ದೇನೆ . ಮೊನ್ನೆ ನನ್ನ ಸ್ನೇಹಿತರೋರ್ವರು ಶ್ರೀ ಕ್ಷೇತ್ರ ಧರ್ಮಸ್ಥಳದ  ಮಂಜುನಾಥನ  ಭಕ್ತಿಗೀತೆ ಬರೆದು ಕೊಡುವಂತೆ ಹೇಳಿದರು . ಈ ಹಿಂದೆ ನಾನು ಕೆಲವು ತುಳು ಮತ್ತು ಕನ್ನಡದಲ್ಲಿ ಬೇರೆ ಕ್ಷೇತ್ರದ ಭಕ್ತಿ ಹಾಡುಗಳನ್ನು ಬರೆದಿದ್ದೆ . ಅದರ ಸ್ಪೂರ್ತಿಯಲ್ಲಿ  ಮೂರು ಶ್ರೀ ಮಂಜುನಾಥನ ಹಾಡುಗಳನ್ನು ಬರೆದಿದ್ದು , ಒಂದು ಹಾಡನ್ನು ನಿಮಗೆ ಕೇಳಿಸುತ್ತಿದ್ದೆನೆ . ಈ ಹಾಡಿಗೆ ಸಂಗೀತವನ್ನು ಗಾಡ್ವಿನ್ ಬೆಳ್ತಂಗಡಿ  ನೀಡಿದ್ದು ಹಿನ್ನೆಲೆ ಗಾಯಕ ಕಡಬ ಸುನಿಲ್ ಈ ಹಾಡನ್ನು ಹಾಡಿದ್ದಾರೆ . ಹಾಡನ್ನು ಈಗ ಯೂಟ್ಯುಬ್  ನಲ್ಲಿ ಕೇಳಿ
 .
 ಹಾಡು ಕೇಳಿ  ನಿಮ್ಮ ಅನಿಸಿಕೆ ಬರೆಯಲು ಮರೆಯಬೇಡಿ. ಪೂರ್ಣ ಸಾಹಿತ್ಯ ಇಲ್ಲಿದೆ ನೋಡಿ:-
 ದಯೇ  ತೋರು  ಒಮ್ಮೆ ಕಣ್ತೆರೆದು 
ಭಕ್ತಿಯಿಂದ ಪೂಜಿಸುವೆ
ಕಷ್ಟಗಳ  ಪರಿಹರಿಸು
ಬಳಿಬಂದು ಕೈ ಮುಗಿವೆ ...
ಭಕ್ತರನ್ನು ಹರಸು ಸ್ವಾಮೀ  ಧರ್ಮಸ್ಥಳದ ಮಂಜುನಾಥ ... ದಯೆ ತೋರು
ನಿತ್ಯ ಭಜಿಸಿ,ಶ್ರದ್ದೆಯಿಂದ  ದೀಪ  ಬೆಳಗಿಸಿ ...
ನಿನ್ನ ದರುಶನವ ನಾ ಮಾಡುವೆ
ಭಕ್ತಿಗೊಳಿದು ನೆಲೆಸು ಪ್ರಭುವೇ ಅಂತರಂಗದಿ... 
ಶಿರವಬಾಗಿ ನಾನು, ಪಾದಕೆರಗುವೆ
ಪಾಪವ ಕಳೆದು ಕರುಣಿಸು ಸ್ವಾಮೀಯೇ ...  
ಪ್ರಭೋ  ಮಂಜುನಾಥ ... ಶ್ರೀ ಮಂಜುನಾಥ ..
ನೀನೆ ಭಾಗ್ಯದ ನಿಧಿಯಾಗಿ ಬಾ ಸ್ವಾಮೀ ಕಣ್ಣೆದುರು ಧರ್ಮಸ್ಥಳದ ಅಧಿಪತಿ .... ದಯೆ ತೋರು
ಸತ್ಯ ಧರ್ಮ ಶಾಂತಿಯನ್ನು ಜಗಕೆ ಸಾರಿದೆ
ನೀನೆ...  ಲೋಕದ  ಲೋಕನಾಥ 
ಬೇಡಿಬಂದ  ಭಕ್ತರಿಗೆ ಒಲಿದು ಬಂದೆ
ನೀನೆ ಜಗದ ಕಣ್ಣು ,ವಿಶ್ವನಾಥ 
ನಿನಗೆ ಶರಣು ಸ್ವಾಮಿ ದೇವಾ…
ಶ್ರೀ ಧರ್ಮಸ್ಥಳದೀಶ ...ಕುಡುಮ ಪುರ ವಾಸ
ನೀನೆ ಭಾಗ್ಯದ ನಿಧಿಯಾಗಿ ಬಾ ಸ್ವಾಮೀ ಕಣ್ಣೆದುರು ಧರ್ಮಸ್ಥಳದ ಅಧಿಪತಿ .... 
ದಯೆ ತೋರು



ವಿ ಕೆ ಕಡಬ
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.

No comments:

Post a Comment