V K Kadaba in chat with blind artist Basavaraj gudihal
ರೇಡಿಯೋ ಸ್ಟುಡಿಯೋ ದಲ್ಲಿ ಕೂತು ಹೆಚ್ಚು ಕಾರ್ಯಕ್ರಮಗಳನ್ನು ತಯಾರು ಮಾಡುವ ನಾನು ನನ್ನ ಬಿಡುವಿನ ವೇಳೆಯಲ್ಲಿ ಹೊಸ ಅಥಿತಿಯ ಹುಡುಕಾಟದಲ್ಲಿ ಇರುತ್ತೆನೆ . ಒಂದು ದಿನ ಆದಿತ್ಯವಾರ ಸಂಜೆ ನನ್ನ ಸ್ನೆಹೀತರಾದ ಅಶೋಕ್ ಪೊಳಲಿ ಕರೆ ಮಾಡಿ ಓರ್ವ ಅಂಧ ಕಲಾವಿದ ನನ್ನ ಜೊತೆ ಇದ್ದಾರೆ .ನೀವು ತಕ್ಷಣ ಬಂದು ಸಂದರ್ಶನ ಮಾಡಿ ಎಂದರು . ನನ್ನ ಮತ್ತೋರ್ವ ಒಡನಾಡಿ ಸ್ನೇಹಿತ ,ನೇರ ಪ್ರಸಾರದ ಕಾರ್ಯಕ್ರಮ ಸ೦ಯ್ಯೋಜಿಸುವ ಸಿಂಚಾನಾ ಶ್ಯಾಮ್ ರವರಲ್ಲಿ ಹೇಳಿದಾಗ ಬೇಗನೆ ಕಾರ್ಯಪ್ರವೃತ್ತರಾದರು . ಅನೇಕ ಅಂಧ ಕಲಾವಿದರನ್ನು ನಾನು ಈ ಹಿಂದೆ ಮಾತುಕತೆ ನಡೆಸಿದ್ದೆ, ಆದರೆ ಮತ್ತೊಮ್ಮೆ ನನ್ನ ಕಣ್ಣು ತೇವಗೊಳಿಸಿದ ಸಂದರ್ಶನ ಪೊಳಲಿಯಲ್ಲಿ .... ಹೌದು ವಾರದ 'ಬಿನ್ನೆರೆ ಪಾತೆರಕತೆ" ತುಳು ಕಾರ್ಯಕ್ರಮಕ್ಕೆ ಓರ್ವ ವಿಶೇಷ ಅಂಧ ಕಲಾವಿದ ಸಾಧಕ ನನಗೆ ಸಿಕ್ಕಿದರು . ಇವರ ಹೆಸರು ಶ್ರೀ ಬಸವರಾಜ್ ಗುಡಿಹಾಲ್ (BASAVARAJ GUDIHAL) .ಹುಬ್ಬಳ್ಳಿಯ ಕಲಘಟಗಿ ಯಲ್ಲಿ ಇವರ ಮನೆ.ಹುಟ್ಟುವಾಗಲೇ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ . ಆದ್ರೆ ತುಳುವಿನಲ್ಲಿ ತುಳುವನಂತೆ ಮಾತಾಡಬಲ್ಲರು . ಅಶೋಕ್ ಪೊಳಲಿ ಯವರ ತಂಡದಲ್ಲಿ ಇದೀಗ ಸಂಗೀತ ರಸಮಂಜರಿಯನ್ನು ನಡೆಸಿಕೊಡುತ್ತಿದ್ದಾರೆ . ಬಹಳ ಶುಶ್ರಾವ್ಯ ಕಂಠ . ಕನ್ನಡ ,ತುಳು ಸೇರಿದಂತೆ ಇತರ ಭಾಷೆಗಳಲ್ಲಿ ಹಾಡಬಲ್ಲರು .
ಇವರ ಜೀವನದ ಕಥೆ ಕೇಳಿ ನನ್ನ ಕಣ್ಣು ತೇವಗೊಂಡಿತು .ಸಂತಸದ ವಿಷಯವೆಂದರೆ ವಿಜಯ ಲಕ್ಷ್ಮೀ ಎನ್ನುವ ಅಂಧ ಹುಡುಗಿಯೊಂದಿಗೆ ಇವರ ಮದುವೆ ನಿಶ್ಚಯ ವಾಗಿದೆ . ಶ್ರೀ ಬಸವರಾಜ್ ಗುಡಿಹಾಲ್ ಇತರಂತೆ ಮೊಬೈಲ್ ಒಪರೆಟ್ ಮಾಡುತ್ತಾರೆ . ದೂರವಾಣಿ ಸಂಖ್ಯೆ ಯನ್ನು ಅವರೇ ನಮೂದಿಸುತ್ತಾರೆ ಜೊತೆಗೆ ಕರೆಯನ್ನು ಮಾಡುತ್ತಾರೆ . ಬದುಕಿನಲ್ಲಿ ವಿಶ್ವಾಸ ಮುಖ್ಯವೆನ್ನುತ್ತಾರೆ ಇವರು .
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang .
No comments:
Post a Comment