ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Thursday, May 21, 2015

ಕೊಳಲ ದನಿಯ ಇನಿಯ-ಚಿದಂಬರ ಕಾಕತ್ಕರ್

 ಮಂಗಳೂರಲ್ಲಿ ದೂರಸಂಪರ್ಕ ಇಲಾಖೆಯ ಒಬ್ಬ ಗುಮಾಸ್ತ (ಕ್ಲರ್ಕ್‌) ನಾಗಿ ಸೇರಿ ಈ ಮೂವತ್ತು ವರ್ಷಗಳಲ್ಲಿ ಸ್ವಪ್ರಯತ್ನದಿಂದ ಸಾಧನೆಯ ಮೆಟ್ಟಿಲುಗಳನ್ನೇರುತ್ತ  ಇಲಾಖೆಯಲ್ಲಿ ಒಬ್ಬ ಸಮರ್ಥ ಆಫೀಸರ್‌ ಆಗಿಕಂಪ್ಯೂಟರ್‌ ತಜ್ಞ ನಾಗಿ ಎಲ್ಲಕ್ಕಿಂತ ಮೇಲಾಗಿ   ಸಂಚಾರ ಸೇವಾ ಪದಕ ಕ್ಕೆ ಚಿದಂಬರ ಕಾಕತ್ಕರ್ ಭಾಜನರಾದವರು.ಕೊಳಲನ್ನು ಒಂದು ಹವ್ಯಾಸದ ಭಾಗವಾಗಿ ಬೆಳೆಸಿಕೊಂಡ ಇವರು ಇದೀಗ ವೇಣುಗಾನ ಮಂಜರಿ ತಂಡವನ್ನು ಕಟ್ಟಿ ಇಂಪಾದ ಸಂಗೀತದ ನಾದವನ್ನು ಹೊಮ್ಮಿಸುತ್ತಿದ್ದಾರೆ.
ಕೊಳಲುವಾದಕ ಚಿದಂಬರ ಕಾಕತ್ಕರ್ ಜೊತೆ ನಾನು(ವಿ.ಕೆ ಕಡಬ)
ರೇಡಿಯೋ ಇವರ ಒಡನಾಡಿ. ಮಿತ್ರ  ಹಳೆಯ , ಹೊಸ ಹಿಂದಿ, ಕನ್ನಡ ಚಿತ್ರಗೀತೆಗಳೆಲ್ಲ ಇವರು ಸಂಗ್ರಹ ಮಾಡಿ ಇಟ್ಟಿದಾರೆ. ಕೆಲವರಿಗೆ ಎಲೆ ಡಿಕೆ ಮೆಲ್ಲುವ ನಶ್ಯ ಎಳೆಯುವ ಇತ್ಯಾದಿ ಚಟಗಳು ಇದ್ದಂತೆ ಇವರಿಗೆ ರೇಡಿಯೋ ಕೇಳುವ ಚಟ ಎಂದರೆ ತಪ್ಪಾಗಲಾರದು. ಕೇಬಲ್‌ ಸ್ಯಾಟಲೈಟ್‌ ಟೀವಿಯಲ್ಲಿ ಇಷ್ಟೊಂದು ಚಾನೆಲ್‌ಗಳೂ ವಿವಿಧ ಮನರಂಜನೆಯೂ ಇದ್ದರೂ ಚಿದಂಬರ ಕಾಕತ್ಕರ್ ರವರಿಗೆ ದಿನ ಮುಗಿದು ರಾತ್ರೆಯ ನಿದ್ದೆ ಬರುವುದು ವಿವಿಧ ಭಾರತಿಯ ಛಾಯಾಗೀತ್‌ ಮತ್ತು ಆಪ್‌ಕೀ ಫರ್ಮಾಯಿಷ್‌ ಕೇಳಿದರೆ ಮಾತ್ರ! ಮನೆಯವೆಲ್ಲ ಟೀವಿ ನೋಡಿ ಆದ ಮೇಲೆ ಇವರು ಟೀವಿಯನ್ನೂ ರೇಡಿಯೋದಂತೆ 'ಕೇಳು"ವುದುಂಟು. ಇವರು ತಮ್ಮ ಹೆಚ್ಚಿನ ಕಾರ್ಯಕ್ರಮದಲ್ಲಿ ಬೊಳ್ಳಿದೊಟ ಸಿನೆಮಾದ ದಾನೆ ಪೊಣ್ಣೆ ಮತ್ತು ಕೋಟಿ ಚೆನ್ನಯ ಸಿನೆಮಾ ದ ಎಕ್ಕ ಸಕ್ಕ ಹಾಡನ್ನು ನುಡಿಸುತ್ತಾರೆ. ಇವರ ಬಗೆಗೆ ಹೆಚ್ಚಿನ ಮಾಹಿತಿ ವಿರಾಮದ ವೇಳೆ ಬ್ಲಾಗ್ ನಲ್ಲಿದೆ 
ಇವರ ಜೊತೆಗೆಗಿನ ಮಾತುಕತೆ ತುಳುವಿನಲ್ಲಿದೆ ಆಸಕ್ತರು ಕೇಳಿ:

2 comments:

  1. This comment has been removed by the author.

    ReplyDelete
  2. Wonderful program with Chidambar Kakathkar. I am also fond of old film songs in Tulu, Kannada, Hindi and Marathi languages. Thanks for uploading this program.

    ReplyDelete