ಸಂದರ್ಶನದ ಸಮಯದಲ್ಲಿ ನ್ನ ಜೊತೆ
ಏಳನೇ ತರಗತಿ ವರೆಗೆ ಹೋಗುವಾಗ ಕಣ್ಣು ಸರಿಯಾಗಿ ಕಾಣುತ್ತಿತ್ತು . ನಂತರದ ದಿನದಲ್ಲಿ ಕಣ್ಣು ತುರಿಕೆ ಬರಲು ಶುರುವಾಯಿತು .ಕ್ರಮೇಣ ಎರಡು ಕಣ್ಣು ಗಳು ಮುಚ್ಚಿ ಹೋದವು .ನಂತರ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಸಂತ ಅಲೊಶೀಯಸ್ ಕಾಲಿಜಿನ ಉಪನ್ಯಾಸಕಾರದ ಚಾಲ್ಸ್ ಪ್ರುಟಾದೊ ಅವರ ಒತ್ತಾಯದ ಮೇರೆಗೆ ಬೆಂಗಳೂರಿನ ಮಿತ್ರಜ್ಯೋತಿ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದರು . ಡೋಲ್ ಮೇಕಿಂಗ್ ಜೊತೆಗೆ ಬಹಳ ಸಲಿಸಾಗಿ ಬೀಡಿಕಟ್ಟುತ್ತಾರೆ . ಸುಮಾರು ಆರು ತಿಂಗಳವರೆಗೆ ಭಾರನಾತ್ಯವನ್ನು ಅಭ್ಯಾಸ ಮಾಡಿರುವ ಇವರು ಭರತನಾಟ್ಯ ಶಿಕ್ಷಕಿಯ ಮದುವೆಯ ಕಾರಣದಿ೦ದ ಮುಂದುವರೆಸಲು ಅಸಾಧ್ಯವಾಯಿತು . ಕೆ ವಿ ರಮಣ್ ರವರಿಂದ ಸುಗಮ ಸಂಗೀತವನ್ನು ಅಭ್ಯಾಸ ಮಾಡಿ ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ . ಸಂಗೀತವನ್ನೇ ಹವ್ಯಾಸವಾಗಿಸಿಕೊಂಡು ನಿತ್ಯವೂ ಸಂತೋಷದ ಕ್ಷಣಗಳನ್ನು ಅನುಭವಿಸುವ ಇವರಿಗೆ ತನ್ನ ಎರಡು ಕಣ್ಣು ಗಳು ಇಲ್ಲ ಎನ್ನುವ ಚಿಂತೆ ಇಲ್ಲ . ತನ್ನ ಸ್ವಂತ ಮನೆಯೆಲ್ಲಿ ಇವರು ಒ೦ಟಿಯಾಗಿ ಇರುವ ಇವರು ನಿತ್ಯ ಪದಾರ್ಥ ಕ್ಕೆ ಬೇಕಾದ ತರಕಾರಿಗಳನ್ನು ಇವರೇ ರಡಿ ಮಾಡುತ್ತಾರೆ
. ಬೆಳಿಗ್ಗೆ ತಿಂಡಿ ,ಕಾಫಿ ಚಹಾ ಎಲ್ಲವನ್ನು ಯಾವುದೇ ಭಯವಿಲ್ಲದೆ ಮಾಡುತ್ತಾರೆ . ಗ್ಯಾಸ್ ಉರಿಸೋದು ನಮಗೆಲ್ಲ ಸಲ್ಪ ಕಷ್ಟದ ಮಾತಾದರೂ ಇವರಿಗೆ ಇದು ಸುಲಭ . ಬಿಸಿ ಬಿಸಿ ಚಹಾವನ್ನು ಮೇಲಕ್ಕೆ ಚಿಮ್ಮಿಸಿ ಇನ್ನೊಂದು ಗ್ಲಾಸಿಗೆ ಹಾಕಿ ಕೊಡುತ್ತಾರೆ .
ಮತ್ತೆ ಬಿಡುವಿನ ಸಮಯದಲ್ಲಿ ಮನೆಯಲ್ಲಿ ಸದಾ ರೇಡಿಯೊ ಕೇಳುತ್ತಾ ತಮ್ಮ ಕೆಲಸ ಮಾಡುತ್ತಾ ಇರುತ್ತಾರೆ . ಈಕೆ ಮಂಗಳ ಜ್ಯೋತಿ ಶಾಲೆಯಲ್ಲಿ ಕ್ರಾಫ್ಟ್ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುವ ಇವರು ಯಾರದಾರು ಸಹಾಯದಿನದ ಬಸ್ ಹಿಡಿಯುತ್ತಾರೆ . ಮನೆಯಿಂದ ಹೋಗುವಾಗ ನೆರೆಮನೆಯ ಹುಡುಗಿಯೋರ್ವಳು ಪ್ರತಿ ದಿನ ಬಸ್ ಸ್ಟಾಂಡ್ ವರೆಗೆ ಕರೆದುಕೊಂಡು ಹೋಗುತ್ತಾರೆ . ಇವರಿಗೆ ಆರ್ಯಭಟ ಪ್ರಶಸ್ತಿ , ಡಾ .ಶಿವರಾಮ ಕಾರಂತ ಸದ್ಭಾವನ ಪ್ರಶಸ್ತಿ ,ಪುಟ್ಟರಾಜ್ ಗವಾಯಿ ಸದ್ಭಾವನ ಪ್ರಶಸ್ತಿ ಲಭಿಸಿದೆ .ಇವರ ಜೊತೆಗಿನ ಮಾತುಕತೆ ಇಲ್ಲಿ ಕೇಳಿ. |
No comments:
Post a Comment