![]() |
ಶ್ರೀ ಲಿಂಗಪ್ಪ ಮೊಂಟೆತ್ತಡ್ಕ |
ಡಾ . ರಾಜ್ ಕುಮಾರ್ ಧ್ವನಿಯಲ್ಲಿ ಗಾಯನ ...!
ನೀವು ನಂಬದಿದ್ದರೂ ಇದು ಸತ್ಯ . ಇವರು ಹಾಡಲಿಕ್ಕೆ ಶುರು ಮಾಡಿದರೆ ಎಂಥವರೂ ತಲೆದೂಗಲೇ ಬೇಕು . ಬಡತನದ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಹೊಟೇ ಲ್ ಒಂದರಲ್ಲಿ ಕೆಲಸ ಮಾಡುವಾಗ ಸ್ನೇಹಿತರ ಸಹಕಾರದಿಂದ ಮಂಜುಳಾ ಗುರುರಾಜ್ ರವರ ಸಾಧನಾ ಮ್ಯೂಸಿಕ್ ಶಾಲೆಯಲ್ಲಿ ಸಂಗೀತವನ್ನು ಕಲಿತು ಆರ್ಕ್ರೆಸ್ಟ್ರ ಗಳಲ್ಲಿ ಹಾಡುವ ಮೂಲಕ ಎಲ್ಲರ ಮನಗೆದ್ದವರು . ಮನೆಯಲ್ಲಿನ ಬಡತನದ ಪರಿಣಾಮವಾಗಿ ಕೂಲಿ ಕೆಲಸವನ್ನು ಮಾಡಿ ತನ್ನ ಜೀವನ ನಿರ್ವಹಿಸುತ್ತಿದ್ದಾರೆ. ಬಹಳ ವರುಷಗಳ ಹಿಂದೆ ಕುಡಿತದ ದಾಸರಾಗಿದ್ದ ಇವರನ್ನು ೨೦೦೬ ರಲ್ಲಿ ಕನ್ಯಾಡಿಯಲ್ಲಿ ನಡೆದ ಮದ್ಯವರ್ಜನ ಶಿಬಿರಕ್ಕೆ ಚೆನ್ನಪ್ಪ ಎಂಬವರು ಸೇರಿಸಿದ ಪಾರಿಣಾವಾಗಿ ಬದುಕಿನ ದಾರಿಯೇ ಬದಲಾಯಿತು .![]() |
ಹಾಡು ಹಾಡುತ್ತಿರುರುವ ಶ್ರೀ ಲಿಂಗಪ್ಪ ಮೊಂಟೆತ್ತಡ್ಕ |
ಹಳ್ಳಿ ಬದುಕಿನಲ್ಲಿ ಮುಟ್ಟಾಳೆಯ ಮಹತ್ವ ಮುಖ್ಯವಾದುದು . ಶಿಬಾಜೆ ಊರಿನ ಎಲ್ಲರು ಕೂಡ ಮುಟ್ಟಾಳೆಗಾಗಿ ಇವರನ್ನೇ ಹುಡುಕಿಕೊಂಡು ಬರುತ್ತಾರೆ .ಒಂದು ಮುಟ್ಟಾಳೆಗೆ ಅಲ್ಲಿ 40 ರಿಂದ50 ರೂಪಾಯಿ ಬೇಡಿಕೆ ಇದೆ . ಮುಟ್ಟಾಳೆ ಮಾಡುವ ಕಲೆಯಲ್ಲಿ ಹೆಚ್ಚು ಪರಿಣತಿ ಪಡೆದಿರುವ ಇವರು ೩೦ ನಿಮಿಷದಲ್ಲಿ ಒಂದು ಮುಟ್ಟಾಳೆ ಯನ್ನು ತಯಾರಿಸುತ್ತಾರೆ .
![]() |
ಮುಟ್ಟಾಳೆ ಕಟ್ಟುತ್ತಿರುವುದು |
ಸದಾ ನಗುಮುಖದಿಂದ ಇರುವ ಇವರು ಉರಿನಲ್ಲಿ ಹಳ್ಳಿ ಪಂಡಿತ ಎನಿಸಿ ಕೊಂಡಿದ್ದಾರೆ .
ಹಳ್ಳಿ ಮದ್ದು ಬೇಕಾದಲ್ಲಿ ಇವರನ್ನು ಒಮ್ಮೆ ಫೊನೀನಲ್ಲಿ ಸಂಪರ್ಕಿಸಬಹುದು .
ಇವರ ವಿಳಾಸ
ಶ್ರೀ ಲಿಂಗಪ್ಪ
ಮೊಂಟೆ ತ್ತಡ್ಕ ಮನೆ
ಶಿಬಾಜೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ
ಇವರ ದೂರವಾಣಿ ಸಂಖ್ಯೆ :- 94480935907ಅಥವಾ
7022209213
No comments:
Post a Comment