ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?
Showing posts with label ನೋಡ ಬನ್ನಿ ಮತ್ಸ್ಯತೀರ್ಥ. Show all posts
Showing posts with label ನೋಡ ಬನ್ನಿ ಮತ್ಸ್ಯತೀರ್ಥ. Show all posts

Wednesday, January 21, 2015

ಯುವ ಸಮುದಾಯಕ್ಕೆ ಮಾದರಿಯಾದ ಹಿರಿಯ ಮಹಿಳೆ

ಪ್ರಸ್ತುತ  ಇರುವ ನಮ್ಮ ಆಚಾರ ವಿಚಾರ ,ಗುರು ಹಿರಿಯರಿಗೆ ನೀಡುತ್ತಿರುವ ಗೌರವ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ . 
ಅನೇಕ ಹಿರಿಯ ಮನಸುಗಳು ಇಂದು ವೃದ್ದಾಶ್ರಮ ದಲ್ಲಿ ಕಾಲ ಕಳೆಯುತ್ತಿರುವ ನೈಜ ಚಿತ್ರಣ ನಮ್ಮ ಕಣ್ಣ ಮುಂದಿದೆ . ಸಮಾಜದಲ್ಲಿ ಕೆಟ್ಟ ಕಾರ್ಯಗಳ ವೈಭವೀಕರಣ  ಹೆಚ್ಚಾಗುತ್ತಿದೆ .  ಹಿರಿಯರನ್ನು  ಸದಾ ನಿಂದಿಸುವ ಅಥವಾ ಅವರ ಬಗ್ಗೆಕೀಳರಿಮೆ ಯ ಮಾತುಗಳೇ ಬಾಯಿ ತುಂಬಿ  ಹೋಗಿದೆ . ಇದಕ್ಕೆ  ಪೂರಕವೆ೦ಬ೦ತೆ  ಮಂಗಳೂರಿನ ಎಕ್ಕೂರಿನ ಗಿರಿಜಾ ಎನ್ನುವ ಈ ಹಿರಿಯ ಮನಸು  ತನ್ನ ಎರಡು ಕಣ್ಣುಗಳನ್ನು ಸತ್ತ ಮೇಲೆ ದಾನ ಮಾಡಲು ಮುಂದಾಗಿದ್ದಾರೆ .ಈ ಮೂಲಕ ಶೋಕಿ ಜೀವನದ ವ್ಯಾಮೋಹದಲಿ ಬ್ಯುಸಿಯಾಗಿರುವ ಯುವ ಸಮುದಾಯಕ್ಕೆ ಮಾದರಿಯಾಗಿ ಬದುಕುತ್ತಿರುವುದು ಹೆಮ್ಮೆಯ ವಿಷಯ.

. ಸದಾ ಕೊಲೆ, ದರೋಡೆ. ಅತ್ಯಾಚಾರ ಸುದ್ದಿಗಳೇ  ಮಾಧ್ಯಮದ ವಸ್ತುವಾಗಿರುವ ಈ ಸಮಯದಲ್ಲಿ  ಇಂಥವರನ್ನೂ ಗುರುತಿಸುವ ಕೆಲಸ ನಮಾದಬೇಕು   ಗಿರಿಜಾರವರಿಗೆ ಈಗ74  ವರ್ಷ ಪ್ರಾಯ . ಸದಾ  ಲವಲವಿಕೆಯಿಂದ ತಮ್ಮ ಮನೆಕೆಲಸ ಮಾಡುತ್ತಲೇ ಇರುತ್ತಾರೆ .ಇವರ ಸರಳ ಜೀವನವೇ ಒಂದು ಹೊಸ ಬದುಕನ್ನು ಕಟ್ಟಿಕೊಡುವಂತಿದೆ .  ಇಂತಹ ಹಿರಿಯ ಚೇತನ ಎಷ್ಟೋ  ಕಡೆಗಳಲ್ಲಿ ಇದ್ದಾರೆ . ನನ್ನ ರೇಡಿಯೋ  ಕಾರ್ಯಕ್ರಮದ ನಿಮಿತ್ತ ಎಕ್ಕೂರಿಗೆ ಹೋದಾಗ ನನ್ನ ಗಮನಕ್ಕೆ ಬಂತು . ಅವರಿಗೊಂದು ಪ್ರೀತಿಯಿಂದ ನೆನಪಿನ ಕಾಣಿಕೆ ನೀಡಿ ಅವರಿಂದ ಆಶೀರ್ವಾದ ಪಡೆದೆ . ಹಿರಿಯರಲ್ಲಿಯೂ ಸಮಾಜಮುಖಿ ಚಿಂತನೆಯಿದೆ ,ಸಮಾಜದಲ್ಲಿ ಮಾದರಿಯಾಗಿ ಬದುಕಬೇಕೆನ್ನುವ ಹಂಬಲವಿದೆ . ಅದಕ್ಕಿಂತಲೂ ಮಿಗಿಲಾಗಿ ಅನುಭವ ದ ಆಗರವೇ ತುಂಬಿದೆ . ಹಿರಿಯರು ನಮಗೆ ಎಂದೆಂದಿಗೂ  ಮಾರ್ಗದರ್ಶಕರು ಎನ್ನುವುದರಲ್ಲಿ ಎರಡು  ಮಾತಿಲ್ಲ .ಸಮಾಜದಲ್ಲಿ ಬದುಕುವ ನಾವು ಮರಳಿ ಸಮಾಜಕ್ಕೆ ಏನನ್ನು ನೀಡೋಣ ?