ಯೋಗ ಶಿಕ್ಷಣದ ಅಮೂಲ್ಯ ಸೇವೆಯಲ್ಲಿ ತೊಡಗಿಸಿ ಕೊಂಡ ವರಲ್ಲಿ ಯೋಗರತ್ನ ಶ್ರೀ ಗೋಪಾಲ ಕೃಷ್ಣ ದೇಲ೦ಪಾಡಿ ಒಬ್ಬರು.ಈಗಾಗಲೇ ಇವರು ತೊಂಬತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಯೋಗ ಶಿಕ್ಷಕರಾಗಿ ಉಚಿತ ಸೇವೆ ಸಲ್ಲಿಸಿದ್ದಾರೆ . ಶ್ರೀಯುತರು 120 ಕ್ಕೂ ಮಿಕ್ಕಿ ಆಸನಗಳನ್ನು ಹಾಗೂ ಆಸನಗಳಿಂದಾಗುವ ದೇಹಾರೋಗ್ಯದ ಪ್ರಯೋಜನವನ್ನು ವಿವರಿಸಿ ಪ್ರದರ್ಶನ ಮಾಡುವುದು ಇವರ ವೈಖರಿ . ಶ್ರೀ ಗೋಪಾಲ ಕೃಷ್ಣ ದೇಲ೦ಪಾಡಿ ಯವರು ಶಾಲಾ - ಕಾಲೇಜು ಶಿಕ್ಷಣದ ಜೊತೆಗೆ ಸುಳ್ಯದ ಗುರು ಪುಟ್ಟಪ್ಪ ಜೋಶಿ ಹಾಗೂ ವಿಟ್ಲದ ಗುರು ಚಿದಾನಂದ ರಿಂದ ಯೋಗಾಭ್ಯಾಸ ಕಲಿತುಕೊಂಡು ಮಲ್ಲಾಡಿ ಹಳ್ಳಿಯ ತಿರುಕ ಶ್ರೀ ರಾಘವೇಂದ್ರ ಸ್ವಾಮಿಗಳಿಂದ ಮಾರ್ಗದರ್ಶನ ಪಡೆದಿದ್ದಾರೆ .
ದೇಲ೦ಪಾಡಿರವರು ರೋಗಗಳನ್ನು ಯೂಗಾಭ್ಯಾಸಗಳಿಂದ ಹೋಗಲಾಡಿಸಿ ದೇಹಾರೋಗ್ಯವನ್ನು ವೃದ್ದಿಸುವ ಯೋಗಾಸನಗಳನ್ನು ಬಹಳ ಸಮರ್ಪಕವಾಗಿ ಬೋಧಿಸುತ್ತಾರೆ .ಯೋಗಾಭ್ಯಾಸಿಗಳ ಅನುಕೂಲಕ್ಕಾಗಿ ದೇಲ೦ಪಾಡಿ ಯವರು ಆರೋಗ್ಯ ರಕ್ಷಣೆಗಾಗಿ ಯೋಗಾಸನ ಕೈಪಿಡಿ,ಯಾವ ರೋಗಿಗೆ ಯಾವ ಯೋಗಾಸನ ಕೈಪಿಡಿ ,ಸ್ತ್ರೀಯರಿಗಾಗಿ ಯೋಗಾಸನ ಕಿರುಲೇಖನ ,ಯೋಗಾಸನ ಮಾರ್ಗದರ್ಶಿ ,ಆರೋಗ್ಯಕ್ಕಾಗಿ ಯೋಗಾಸನ ಗೋಡೆ ಕ್ಯಾಲೆಂಡರುಗಳನ್ನು ರಚಿಸಿದ್ದಾರೆ . 1999ರಲ್ಲಿ ಶ್ರೀ ಗೋಪಾಲ ಕೃಷ್ಣ ದೇಲ೦ಪಾಡಿರವರಿಗೆ ಸಂತ ಅಲೋಶಿಯಸ್ ಕಾಲೇಜಿನ ಸಂಸ್ಕೃತ ಸಂಘ "ಯೋಗರತ್ನ " ಬಿರುದು ನೀಡಿ ಸನ್ಮಾನಿಸಿದ್ದಾರೆ . ಇವರ ವೆಬ್ ಸೈಟ್ ವಿಳಾಸ http://www.delampady.com
ಇತ್ತೀಚಿಗೆ ಇವರು ರೇಡಿಯೋ ಸಾರಂಗ್ ನ ಒಂದು ವಿಶೇಷ ಕಾರ್ಯಕ್ರಮಕ್ಕೆ ಬಂದಿದ್ದರು. ಅವರ ಸಂದರ್ಶನವನ್ನು ವಿ.ಕೆ ಕಡಬ ಆಡಿಯೋ ಬ್ಲಾಗ್ ನಲ್ಲಿ ಕೇಳಿ .ಅಥವಾ ಇಲ್ಲಿ ಕೇಳಿ.https://soundcloud.com/thimmappa-vk/yoga-arogya-yogaratna-gopalakrishna-delampady
ಬನ್ನಿ ನಾವೆಲ್ಲರೂ ಯೋಗಾಸನ ದಿಂದ ಉತ್ತಮ ಜೀವನ ಶೈಲಿಯನ್ನು ರೂಪಿಸಿಕೊಳ್ಳೋಣ .

No comments:
Post a Comment