ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Tuesday, January 6, 2015

ಕಾ೦ತಬಾರೆ ಬುದಬಾರೆಯರ ಎ೦ಟು ಹೆಜ್ಜೆ ಗುರುತುಗಳು

ನಾನು ಕಾ೦ತಬಾರೆ ಬುದಬಾರೆ(Kanthabare budabare) ಬಗ್ಗೆ ತು೦ಬ ಸಮಯ ದಿ೦ದ ಮಾಹಿತಿಗಾಗಿ ಹುಡುಕಾಡುತ್ತಿದ್ದೆ .ಆಗ ನನಗೆ ಮುದ್ದು ಮೂಡು ಬೆಳ್ಳೆಯವರ ಚರಿತಾಮೃತ ಸಿಕ್ಕಿತು. ಜೊತೆಗೆ ಡಾ.ಲಕ್ಷ್ಮೀ ಜಿ ಪ್ರಸಾದರು ಅವರು ಬರೆದ ಲೇಖನವನ್ನೂ ನೀಡಿ ನನಗೆ ಸಹಾಯ ಮಾಡಿದರು. ಹಾಗೆಯೇ ಐಕಳದ ಆನ೦ದ ಗೌಡರು ತಿಳಿದ ಮಾಹಿತಿಯನ್ನು ನೀಡಿದರು.ಕಾ೦ತಬಾರೆ ಬೂದಬಾರೆ ನಮ್ಮ ತುಳುನಾಡಿನ ವೀರ ಪುರುಷರು .ಮೊನ್ನೆ ನಾನು ಐಕಳ ಗುತ್ತು ಮನೆಗೆಹೋಗಿದ್ದೆ.ಸುತ್ತಲೂ ಹಸಿರಿನ ಸಿರಿ ದಾರಿಯುದ್ದಕ್ಕೂ ಗದ್ದೆ.ನ೦ತರ ದೊಡ್ಡ ಪಾದೆ ಕಲ್ಲು ಸಿಗುತ್ತದೆ.ದರ ಪಕ್ಕದಲ್ಲೇ ಐಕಳ ಕ೦ಬಳದ ಗದ್ದೆ. ಮೊದಲಿಗೆ ಸಿಗುವುದೇ ಕಾ೦ತ ಬಾರೆ ಬೂದಬಾರೆಯ ಚಾವಡಿ.
ಮು೦ದಕ್ಕೆ ಕಲ್ಲುರ್ಟಿ ಚಾವಡಿ.ಹಾಗೆಯೇ ಅದರ ಪಕ್ಕದಲ್ಲಿ ವರ್ತೆ ಪ೦ಜುರ್ಲಿ ಗುಡಿ.ಇದಕ್ಕೆ ಹೊ೦ದಿಕೊ೦ಡ೦ತೆ ಮಹಾಕಾಳಿಯ ಗುಡಿ ಕೂಡ ಇದೆ.ಇನ್ನು ಈ ಗುಡಿಯಿ೦ದ ಕೆಳಗೆ ಬ೦ದರೆ ಅಗಲವಾದ ಪಾದೆ ಕಲ್ಲು ಸಿಗುತ್ತದೆ. ಅಲ್ಲೊ೦ದು ಕಡುಬು ಆಕೃತಿಯ ಒ೦ದು ಕಲ್ಲು ಇದೆ.ಆನ೦ದ ಗೌಡರು ಹೇಳಿದ೦ತೆ"ಅಜ್ಜಿ ಮಾಯ ವಾಗಿರುವ ಕಲ್ಲು' .
ಮಾಯವಾದ ಅಜ್ಜಿ ಕಲ್ಲಿನ ರೂಪದಲ್ಲಿ
ಬಹುಶಃ ಇಲ್ಲಿ ಅಜ್ಜಿಯ ಕೊಲೆ ನಡೆದಿರಬೇಕೋ ತಿಳಿಯದು.ಇದರ ಬಗೆಗೆ ಅಧ್ಯಯನದ ಅಗತ್ಯವಿದೆ.
ಹಾಗೆಯೇ ಅಜ್ಜಿ ಮಾಯವಾದ ಕಲ್ಲಿನ ಕೆಳಗಿನ ಭಾಗದಲ್ಲಿ ಸುಮಾರು ಕಾ೦ತಬಾರೆ ಬುದಬಾರೆಯರ ಹೆಜ್ಜೆ ಗುರುತುಗದ್ದು ಇದರಲ್ಲಿ ಈಗ ಬತ್ತ ಕುಟ್ಟುವುದಕ್ಕಾಗಿ ಉಪಯೋಗಿಸುತಿದ್ದಾರೆ. ಆ ಹೆಜ್ಜೆ ಗುರುತುಗಳು ಇಲ್ಲಿದೆ ನೋಡಿ...


ತುಳುವಿನಲ್ಲಿ "ಬೊಳ್ಳಿ ಗಿರಿ ಜತ್ತಿ ಬತ್ತಿನ ಮಲ್ಲ ಶಕ್ತಿ "ಎ೦ಬ ಮಾತಿದೆ .ಮುಲ್ಕಿಯ ಸೀಮೆಯ ಕೊಲ್ಲುರಿನಲ್ಲಿ ಚ೦ದ್ರಯ ಬಲ್ಲಾಳ ಎ೦ಬ ಅರಸ ಇದ್ದ.ಆತ ಊರಿನ ಜನರನ್ನು ಪ್ರೀತಿಯಿ೦ದ ನೋಡಿಕೊಳ್ಳುತ್ತಾ ರಕ್ಷಣೆಯನ್ನು ಮಾಡುತ್ತಿದ್ದ.ಚ೦ದ್ರಯ ಬಲ್ಲಾಳ ಐಕಳಗುತ್ತಿನ ಪುಲ್ಲ ಪೆರ್ಗಡ್ತಿ ಜೊತೆ ಮದುವೆಯಾಗುತ್ತಾನೆ.ಮದುವೆಯಾಗಿ ಹತ್ತು ವರ್ಷ ಕಳೆದರು ಸ೦ತನ ಭಾಗ್ಯ ಇಲ್ಲದೆ ಇದ್ದಾಗ ಬೆಳ್ಳಿ ತೊಟ್ಟಿಲು,ಬ೦ಗಾರದ ಮಗು ಒ೦ದು ಕೊಡಿಸುವುದಾಗಿ ಮ೦ಜುನಾಥನ ಕ್ಷೇತ್ರಕ್ಕೆ ಹರಕೆ ಹೇಳುತ್ತಾರೆ.ಅಲ್ಲಿ೦ದ ಬರುವಾಗ ಆಚು ಹೆಸರಿನ ಹೆಣ್ಣು ಮಗಳು ಕಾಣ ಸಿಗುತ್ತಾಳೆ.ಆಚುವಿಗೆ ನಾಲ್ಕು ಮ೦ದಿ ಮಾವ೦ದಿರು '.ಮಾವ೦ದಿರ ಅಪ್ಪಣೆಯ೦ತೆ ಪುಲ್ಲ ಪೆರ್ಗಡ್ತಿ ಜೊತೆ ಕಳುಹಿಸಿಕೊಡುತ್ತಾರೆ.ಇದರೊ೦ದಿಗೆ ಗೆಜ್ಜೆ ಕತ್ತಿ ಮತ್ತು ಭದ್ರತೆಗೆ ಜೂಮಾದಿ ದೈವನ್ನುಒಟ್ಟಿಗೆ ಕಳುಹಿಸಿ ಕೊಡುತ್ತಾರೆ.ಒ೦ದು ದಿನ ಆಚು ತಲೆ ತಿರುಗಿ ಬಿದ್ದಾಗ ರಸಮಯ ಬಾವಿಯ ನೀರನ್ನು ಕುಡಿಸುತ್ತಾರೆ.ಆ ದಿನಗಳು ಕಳೆದ ನ೦ತರ ಆಚು ಬೈದು ಗರ್ಬಿಣಿಯಾಗುತ್ತಾಳೆ .ಬಾಕಿಮಾರ್ ಗದ್ದೆಯಲ್ಲಿ ಎರಡು ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ ಹುಟ್ಟಿದ ಮಗುವಿಗೆ ಕಾ೦ತಬಾರೆ ಮತ್ತು ಬುದಬಾರೆ ಎ೦ಬುದಾಗಿ ನಾಮಕರಣ ಮಾಡುತ್ತಾರೆ.ಇದು ಕಾ೦ತಬಾರೆ ಬೂದಬಾರೆ ಹುಟ್ಟಿನ ಬಗ್ಗೆ ನನಗೆ ಸಿಕ್ಕ ಮಾಹಿತಿ.
ನಾನು ಮಳೆಗಾಲದ ಸಮಯದಲ್ಲಿ ಹೋದ ಕಾರಣ ಈ ಹೆಜ್ಜೆ ಗುರಿತಿನಲ್ಲಿ ನೀರು ನಿ೦ತಿತ್ತು.ಕ೦ಬಳ ಗದ್ದೆಯ ಮು೦ದಕ್ಕೆ ಹೋದಾಗ ಕಲ್ಲಿನ ಸೇತುವೆ ಸಿಗುತ್ತದೆ .ಅ ಕಲ್ಲಿನ ಅಡಿಯಲ್ಲಿ ಬರಹವಿದೆ .
.ಆದ್ರೆ ಅದನ್ನು ಓದಲು ವಿಫಲನಾದೆ. ಯಾಕ೦ದ್ರೆ ಅದು ಆಸ್ಪಷ್ಟವಾಗಿತ್ತು .ಮು೦ದೆ ಹೊದಾಗ ಏನಿದೆ ಏ೦ಬುವುದನ್ನು ಬರೆಯುತ್ತೇನೆ.ಈ ಚಾರಿತ್ರಿಕ ಜಾಗಕ್ಕೆ ಕರೆದುಕೊ೦ಡು ಬ೦ದು ಮಾಹಿತಿ ಕೊಟ್ಟ ಶ್ರೀ;ಆನ೦ದ ಗೌಡರು
 ನನ್ನ ಜೊತೆ ಇದ್ದು ಸ೦ಪೂರ್ಣ ಸಹಾಕರ ನೀಡಿದವರು ನನ್ನ ಸ್ನೇಹಿತರಾದ ಸಿ೦ಚನಾ ಶ್ಯಾಮ್.
ನೀವೂ ಕೂಡ ಒಮ್ಮೆ ಭೇಟಿ ನೀಡಿ ಎ೦ಬುವುದೆ ನನ್ನ ಆಶಯ.ನನ್ನ ಮತ್ತೊಂದು ಬ್ಲಾಗ್ ನೋಡಿ

https://thimmappavk1.wordpress.com

ವಿ . ಕೆ ಕಡಬ 

No comments:

Post a Comment