ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Thursday, February 5, 2015

ಕಲಾವಿದನಾಗಿ ಮಿಂಚಿದ ಶಿಕ್ಷಕ -ವಿಟ್ಲ ಮ೦ಗೇಶ್ ಭಟ್.

ಶ್ರೀಯುತ ವಿಟ್ಲ ಮ೦ಗೇಶ್ ಭಟ್ ರಾಜ ಪುರೋಹಿತ ವೇದ ಮೂರ್ತಿ ಶ್ರೀ ವಿಟ್ಲ ಭವಾನಿಶ೦ಕರ್ ಭಟ್ ಮತ್ತು ಶ್ರೀ ಮತಿ ವಿ ವಸ೦ತಿ ಭಟ್ ರವರ ಪುತ್ರ. ಓದಿದ್ದು ಎಸ್.ಎಸ್ .ಎಲ್ ಸಿ ಮತ್ತು ಟಿ. ಸಿ .ಹೆಚ್.ನ೦ತರ ಮ೦ಗಳೂರಿನ ಗಣಪತಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 1977ರಿಂದ 2003 ರ ವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. 2002 ರಿ೦ದ 2012ಜೂನ್ 30 ರ ವರೆಗೆ ಗಣಪತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಯಾಗಿದ್ದಾರೆ.ನಾಟಕ,ಯಕ್ಷಗಾನ ಚಲನ ಚಿತ್ರ ,ಕಿರುತೆರೆ ಸೇರಿದ೦ತೆ ಅನೇಕ ಮಗ್ಗುಲುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾ ಸಾಧಕರಾಗಿದ್ದಾರೆ.ಇದರ ಜೊತೆಗೆ  ಧಾರ್ಮಿಕ ಉಪನ್ಯಾಸ,ಕೀರ್ತನಕಾರ,ಕೇಬಲ್ ,ವಾರ್ತಾಓದುಗಸ೦ದರ್ಶನಕಾರ,ಕಾರ್ಯಕ್ರಮ ಸ೦ಘಟಕ ,ಜೊತೆಗೆ ನಾಟಕ ನಿರ್ದೇಶಕ ಕೂಡ ಹೌದು.
ವಿಟ್ಲ ಮ೦ಗೇಶ್ ಭಟ್
ಇವರ ಸಾಧನೆ.:-
*ಕೊ೦ಕಣಿ,ಕನ್ನಡ,ತುಳು ಭಾಷಾನಾಟಕಗಳಲ್ಲಿ ಹಾಸ್ಯ ಹಾಗೂ ಪೋಷಕ ಪತ್ರಗಳ ನಿರ್ವಹಣೆ.
*ರ೦ಗಯೋಗಿ ರಮಾನ೦ದ ಚೂರ್ಯರ ಹೌದಾದ್ರೆ ಹೌದೆನ್ನಿ ಹಾಗೂ ಊರೆಲ್ಲಾ ಹೇಳ್ಬೇಡಿ ನಾಟಕಗಳಲ್ಲಿ ಸುಮಾರು 50 ಕ್ಕೂ ಮೀರಿದ ಪ್ರದರ್ಶನಗಳಲ್ಲಿ ಅಭಿನಯ.
*ಖ್ಯಾತ ಚಿತ್ರನಟ ನಿರ್ಮಾಪಕ,ಕತೆಗಾರ ,ನಿರ್ದೇಶಕಶ್ರೀ ಕೆ ಏನ್ ಟೇಲರ್ ರವರ ಗಣೇಶ ನಾಟಕ ಸಭಾ ಮ೦ಗಳೂರು ಇದರಲ್ಲಿ ದೇವೆರ್ ಕೊರ್ಪೆರ್ ,ದಾಸುನ ಮದ್ಮೆ,ಯಾನ್ ಸನ್ಯಾಸಿ ಆಪೆ,ರಾಣಿ ಅಬ್ಬಕ್ಕ,ತಮ್ಮಲೆ ಅರ್ವತ್ತನ ಕೋಲ ಮೊದಲಾದ ನಾಟಕ ಗಳಲ್ಲಿ ಹಾಸ್ಯ ಪಾತ್ರಗಳ ನಿರ್ವಹಣೆ.
ಶ್ರೀಯುತ ವಿಟ್ಲ ಮ೦ಗೇಶ್ ಭಟ್ಟರು ಸುಮಾರು 25 ಯಕ್ಷಗಾನ ಧ್ವನಿ ಸುರುಳಿಗಳಲ್ಲಿ ಭಾಗವಹಿಸಿದ್ದಾರೆ .ಹಾಗೇಯೆ ರಸಿಕರತ್ನ ಶ್ರೀ ವಿಟ್ಲ ಗೋಪಾಲಕೃಷ್ಣ ಜೋಷಿ ಇವರರಲ್ಲಿ ಯಕ್ಷಗಾನ ವನ್ನು ಅಭ್ಯಾಸ ಮಾಡಿದರು.
ಚಿತ್ರರಂಗದಲ್ಲಿ
➲೧೯೭೯ರಲ್ಲಿ ನ್ಯಾಯಗಾದ್ ಬದಕ್ ,
➲೧೯೮೦ ರಲ್ಲಿ ತಪಸ್ವಿನಿ { ಪ್ರಥಮ ಸಾರಸ್ವತ ಕೊ೦ಕಣಿ ವರ್ಣ ಚಿತ್ರ }.
➲೨೦೦೬ರಲ್ಲಿ ಕೋಟಿಚೆನ್ನಯ
➲,೨೦೧೧ರಲ್ಲಿ ಒರ್ಯದೊರಿ ಅಸಲ್ ,
➲೨೦೧೪ ರಲ್ಲಿ ಚಾಲಿಪೋಲಿಲು ,
➲ಮದಿಮ ಸಿನೆಮಾ ಗಳಲ್ಲಿ ತಮ್ಮ ಕಲಾ ಸಾಮರ್ಥ್ಯ ವನ್ನು ತೋರಿಸಿದ್ದಾರೆ .
➲೧೯೯೮ ರಲ್ಲಿ ಜನನಿ ಮೆಗಾ ಧಾರವಾಹಿ ನಿರ್ಮಾಣ ,
➲೧೯೯೮ರಲ್ಲಿಉದಯ ಟಿವಿ ಯ ಹೃದಯರಾಗ ,
➲೨೦೦೨ರಲ್ಲಿ ಜೀವನ್ಮುಖಿ ,
➲೨೦೦೮ರಲ್ಲಿ ಬಂದೆ ಬರತಾವ ಕಾಲ ೨೦೧೧ರಲ್ಲಿ ಶ್ರೀರಾಘವೇಂದ್ರ ವೈಭವ
ವಿಟ್ಲ ಮ೦ಗೇಶ್ ಭಟ್   ರವರು ಮೇಕಪ್    ಮಾಡುವುದರಲ್ಲಿ ನಿಸ್ಸಿಮಾರು . ಕಳೆದ ೨೫ ವರ್ಷಗಳಿಂದ ಲಯನ್ಸ್ ಕ್ಲಬ್ ಇ೦ಟರ್ ನ್ಯಾಷನಲ್; ನ ಲಯನ್ಸ್; ಕ್ಲಬ್ ವಿಟ್ಲದ  ಸದಸ್ಯ ,ಕಾರ್ಯದರ್ಶಿ ,ಅಧ್ಯಕ್ಷ ,ವಲಯಾದ್ಯಕ್ಷ ,ಜೊತೆಗೆ ಜಿಲ್ಲಾ ಧ್ಯಕ್ಷ ಕನಾಗಿ ಸೇವೆ ಸಲ್ಲಿಸಿದ್ದಾರೆ.
➨ಎಡ್ಸ್   ಜಾಗೃತಿಗಾಗಿ ಅತ್ಯುತ್ತಮ ಜಿಲ್ಲಾ ಧ್ಯಕ್ಷ ಪ್ರಶಸ್ತಿ
➨೨೦೦೯ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಅತ್ಯುತ್ತಮ ಶಿಕ್ಷಕ ಪ್ರಶಸ್ತಿ.
➨೨೦೧೧ರಲ್ಲಿ ಜಿಲ್ಲಾರಾಜ್ಯೋ ತ್ಸವ ಪ್ರಶಸ್ತಿ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂದರ್ಭ
ವಿಟ್ಲ ಮ೦ಗೇಶ್ ಭಟ್ಟರು ಇತ್ತೀಚಿಗೆ ರೆಡೀಯೋ ಸಾರಂಗ್ 107.8 FM ನ ತುಳು ಕಾರ್ಯಕ್ರದಲ್ಲಿ ತಮ್ಮ ಸಾಧನೆಯ ಮೆಟ್ಟಿಲುಗಳನ್ನು ಹಂಚಿಕೊಂಡಿದ್ದಾರೆ .ಸದಸ್ಯ ,ಕಾರ್ಯದರ್ಶಿ ,ಅಧ್ಯಕ್ಷ ,ವಲಯಾದ್ಯಕ್ಷ ,ಜೊತೆಗೆ ಜಿಲ್ಲಾ ಧ್ಯಕ್ಷ ಕನಾಗಿ ಸೇವೆ ಸಲ್ಲಿಸಿದ್ದಾರೆ.
ಇವರಿಗೆ ಸಂದಿರುವ ಪ್ರಶಸ್ತಿಗಳು
➨೧೯೯೯ರಲ್ಲಿ ಇರ್ವತ್ತೂರು ಕಮಲಾಕ್ಷ ಗೋವರ್ಧನ ನಾಯಕ್ ಸಾಂಸ್ಕೃತಿಕ ಪ್ರತಿಷ್ಟಾ ನ ಪ್ರಶಸ್ತಿ .
➨ವಿಶ್ವ ಸಾರಸ್ವತ ಸಮ್ಮೇಳನದಲ್ಲಿ; ವಿಶ್ವ ಸಾರಸ್ವತ ಸಾಧನ ಪ್ರಶಸ್ತಿ .

No comments:

Post a Comment