ಕೆ.ಎಂ. ಶರೀಫ್ ಕಡಬ ನನ್ನ ಒಡನಾಡಿ ಮಿತ್ರ.ಶಾಲಾ ದಿನಗಳಲ್ಲಿ ಅವರ ಮನೆಯ ಮಾವಿನ ಮರದ ಅಡಿಯಲ್ಲಿ ಕುಳಿತು ಊಟ ಮಾಡುತ್ತಿದ್ದೆವು.
ಕೆಲವೊಮ್ಮೆ ಶರೀಫ್ ನ ತಾಯಿ ನಮಗೆ ಪದಾರ್ಥವನ್ನು ನೀಡುತ್ತಿದ್ದರು.ಕೆ.ಎಂ. ಶರೀಫ್ ಕಡಬ ಅನೇಕ ಬರಹಗಳನ್ನು ಬರೆದಿದ್ದಾರೆ.ಅವರ ಒಂದು ಲೇಖನವನ್ನು ನನ್ನ ಬ್ಲಾಗ್ ನಲ್ಲಿ ಪ್ರಕಟಿಸುತ್ತಿದ್ದೆನೆ.
ಸಮಸ್ಯೆ ಎಂಬುವುದು ಒಂದು ದೊಡ್ಡ ಸಮಸ್ಯೆಯೇ ಅಲ್ಲ.
ಪ್ರಸಕ್ತ ಸನ್ನಿವೇಶದಲ್ಲಿ "ಸಮಾಜೋತ್ಸವ" ಎಂಬ ಹೊಸ ಸಮಸ್ಯೆ ಹುಟ್ಟಿಕೊಂಡು ಆ ಪದದ ಅರ್ಥ ಕಳೆದುಕೊಳ್ಳುತ್ತಿದೆ.ಜನರನ್ನು ಒಂದುಗೂಡಿಸಬೇಕಾದ ಸಮಾಜೋತ್ಸವಗಳು ಭಯವನ್ನು ನಿವಾರಿಸುವ ಬದಲಿಗೆ ಭಯಾನಕತೆಯನ್ನು ಹುಟ್ಟು ಹಾಕುತ್ತಿದೆ.ಸಂಸ್ಕೃತಿ ಹಾಗು ಅನ್ಯೋನ್ಯತೆಯ ಬಗ್ಗೆ ಅರಿವು ಮೂಡಿಸುವುದರ ಬದಲು ಪುಂಡಾಟಿಕೆ ಹಾಗು ವಿಕೃತಿಯನ್ನು ಕಲಿಸಿಕೊಡುತ್ತಿದೆ.ಧರ್ಮ ಧರ್ಮಗಳ ನಡುವೆ ಸಮನ್ವಯತೆ..ಸಹೋದರತ್ವ ದ ಕುರಿತು ಮನದಟ್ಟು ಮಾಡಿಕೊಡಬೇಕಾದ ಸಮಾಜೋತ್ಸವಗಳು ಪರಸ್ಪರ ಧಾರ್ಮಿಕ ಸಂಗರ್ಷಗಳನ್ನು ಉಂಟುಮಾಡಿ ಧರ್ಮಗಳ ನಡುವೆ ಬಿಕ್ಕಟ್ಟು ಉಂಟುಮಾಡಿಸುತ್ತಿದೆ
ಅಂತರ್ಜಾಲದಿಂದ ಸಂಗ್ರಹಿಸಿದ ಚಿತ್ರ |
ನಿಮ್ಮೊಲವಿನ ಕೆ.ಎಂ. ಶರೀಫ್ ಕಡಬ
ಕೆ.ಎಂ. ಶರೀಫ್ ಕಡಬ |
No comments:
Post a Comment