ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Monday, March 2, 2015

ತಿನ್ನಲು ಮಜಾ... ಈ ಗೇರು ಬೀಜ...

ಗೇರು ಹಣ್ಣು ತಿನ್ನುವುದಕ್ಕೂ  ಭಾಗ್ಯ ಬೇಕು . ನಮ್ಮ ಮನೆಯ ಮೇಲಿನ ಗುಡ್ಡದಲ್ಲಿ ಗೇರು ಬೀಜದ ಮರ ಇತ್ತು . ಅಲ್ಲಿ ನಮ್ಮ ಸ್ನೇಹಿತರೆಲ್ಲ ಸೇರಿ ಮರಕೋತಿ ಆಟ  ಆಡುತ್ತಿದ್ದೆವು. ಅದು ಕೂಡ ಗೇರು ಹಣ್ಣು ಆಗುವ ಟೈಮ್ ನಲ್ಲಿ! ನಮ್ಮ ಆಟ ಇಷ್ಟಕ್ಕೆ ಮಾತ್ರ ಸಿಮೀತವಾಗಿರಲಿಲ್ಲ ,ಬದಲಾಗಿ ಬೀಜ ಕುಟ್ಟುವ ಮೂಲಕ ನಮ್ಮ ಪೋಕೆಟ್  ಮನಿ  ಭರ್ತಿ ಮಾಡುತ್ತಿದ್ದೆವು. ನಮ್ಮ ಗುಡ್ಡದಲ್ಲಿ ಕೆಂಪು ,ಹಳದಿ ಬಣ್ಣದ ಗೇರು ಹಣ್ಣುಗಳಿದ್ದವು . ಶಾಲಾ ದಿನಗಳಲ್ಲಿ  ನಮ್ಮ ಸಣ್ಣ ಪುಟ್ಟ ಖರ್ಚಿಗೆ ಈ  ಗೇರು ಬೀಜದ ಹಣ  ಸಾಕಾಗುತ್ತಿತ್ತು . ರಾತ್ರಿ  ಇಡೀ ಬಾವಲಿಗಳ ಕಿರುಚಾಟ . ಕೆಲವೊಮ್ಮೆ ಬಾವಲಿಗಳನ್ನು ನೋಡುವುದಕ್ಕೆ೦ದೇ  ಲೈಟ್ ಹಿಡಿದುಕೊಂಡು ಗುಡ್ಡಕ್ಕೆ ಹೋಗುತ್ತಿದ್ದೆ . ನಾನು ,ತಮ್ಮ, ಅಕ್ಕ ಶಾಲೆ ಬಿಟ್ಟು ಬಂದ ಕೂಡಲೇ ಕಾಯಿ ಬೀಜವನ್ನು ತುಂಡರಿಸಿ  ತಿನ್ನುತಿದ್ದೆವು ,ಏಷ್ಟೋ  ಸಲ ಬಾಯಿ ಸುಟ್ಟದ್ದು ಉಂಟು !  ಕೆಲವು ಸಲ ಕಾಡುಹಂದಿ ಬಂದು ಈ ಗೇರು ಬೀಜವನ್ನು ಜಗಿದು ಹಾಕುತಿತ್ತು .ಅದಕ್ಕೆ ನನ್ನ ತಂದೆ ಉರುಳು ಇಡುತ್ತಿದ್ದರು. ಅದು ನಮಗಿಂತಲೂ ಬುದ್ಡಿವಂತಿಕೆ  ತೋರಿಸಿ ,ಬೇರೆ ದಾರಿಯಲ್ಲಿ ಬಂದು ಅದಕ್ಕಿಂತಲೂ ಹೆಚ್ಚು ಗೇರು ಬೀಜ ತಿಂದು ಹೋಗುತಿತ್ತು !

ಸಣ್ಣ ಗಾತ್ರದ  ಕೆಂಪು ಬಣ್ಣದ ಗೇರು ಬೀಜದ ಹಣ್ಣುಗಳನ್ನು  ಹೆಚ್ಚು ನಾವೆಲ್ಲ ತಿನ್ನುತಿದ್ದೆವು . ನಮ್ಮ ಬ್ಯಾಗ್ ನಲ್ಲಿ ಪುಸ್ತಕದ ಜೊತೆಗೆ ಅರ್ಧ ಕೆ. ಜಿ ಯಷ್ಟು  ಬೀಜವು ಇರುತಿತ್ತು . ಹಳ್ಳಿ ಯಲ್ಲಿ ಜಾತ್ರೆ,ನೇಮೊತ್ಸವ ಹೆಚ್ಚಾಗಿ  ಇದ್ದೆ ಇರುತ್ತದೆ , ಜಾತ್ರೆಗಳಲ್ಲಿ ಐಸ್ ಕ್ಯಾಂಡಿ ,ಐಸ್ ಕ್ರೀಮ್ ,ಕಡ್ಲೆ  ಎಲ್ಲವನ್ನೂ ಈ ಗೇರು ಬೀಜ ಮಾರಿಯೇ ಹಣ ಸಂಪಾದಿಸಿ ತಿನ್ನುತ್ತಿದ್ದೆವು .  ಮಳೆಗಾಲದ ಸಮಯದಲ್ಲಿ ಬೆಂಕಿಯಲ್ಲಿ ಸುಟ್ಟು ತಿನ್ನುವ ಆ ಮಜವೇ ಬೇರೆ . ಮತ್ತೆ ಕಾಲಿಗೆ ಕಬ್ಬಿಣ ಅಥವಾ ಕಬ್ಬಿಣದ ಯಾವುದೇ ವಸ್ತು ತಾಗಿದರೂ ನನ್ನ ತಾಯಿ  ಗೇರು ಬೀಜದ ಸಿಪ್ಪೆಯನ್ನು ಬೆಂಕಿಗೆ ಇರಿಸಿ ಅದರಿಂದ ಬರುವ ಎಣ್ಣೆಯನ್ನು ಬಿಸಿ ಬಿಸಿಯಾಗಿ ಕಾಲಿಗೋ ,ಕೈಗೊ  ಮುಟ್ಟಿಸುತ್ತಿದ್ದರು .ಅದರಲ್ಲೂ  ಮದ್ದಿನ ಗುಣ ಇರುವುದನ್ನು ಕಾಣಬಹುದು .ಶಾಲಾ ದಿನಗಳಲ್ಲಿ ನಮಗೆ ಸಮರ್ಪಕವಾಗಿ ಗೇರು ಬೀಜ ಸಿಗದೇ ಹೋದ ಸಂದರ್ಭದಲ್ಲಿ ಪಕ್ಕದ ಮನೆಯವರ ಬೇಲಿ ಹಾರಿ ಹೋಗಿದ್ದು  ಈಗ ನೆನಪಾಗಿ ಉಳಿದಿದೆ.

 ಇಲ್ಲಿ ನನ್ನ ಅನುಭವನ್ನು ಮಾತ್ರ ಹಂಚಿಕೊಂಡಿದ್ದೆನೆ .ನೀವೂ ಕೂಡ ಓದಿ ನಿಮ್ಮ ಅನುಭವಗಳನ್ನು ಹಂಚಿ ಕೊಳ್ಳಿ .
ವಿ. ಕೆ ಕಡಬ 

No comments:

Post a Comment