ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Friday, March 13, 2015

ಬೀಡ ಮಾರುವ ಹುಡುಗ ನಾಲಗೆ ಸುಟ್ಟುಕೊ೦ಡ...!

ನನ್ನ ಲೇಖನದ ತಲೆಬರಹ ನೋಡಿ ಆಚ್ಚರಿ ಪಡಬೇಡಿ.ಯಾಕೆಂದರೆ ಇದು ನನ್ನ ಚುಟುಕದ ಒ೦ದು ಸಾಲು ಅಷ್ಟೇ...ಭಾನುವಾರದ೦ದು(23-11-2014) ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್,ಮ೦ಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಹಾಗೂ ಅಮೃತ ಪ್ರಕಾಶ ಪತ್ರಿಕೆ ಇದರ ಜ೦ಟಿ ಸಹಯೋಗದಲ್ಲಿ ಕಾಳಿಕಾ೦ಬಾ ದೇವಸ್ಥಾನದದಲ್ಲಿ ಚುಟುಕು ಕವಿ ಗೋಷ್ಠಿ ಏರ್ಪಾಡಿಸಲಾಗಿತ್ತು .ನಾನು ಕವಿಯಾಗಿ ಭಾಗವಹಿಸಿದ್ದೆ.ನನ್ನ ಸ್ನೇಹಿತ ಎಡ್ವರ್ಡ್ ಲೋಬೋ ಕೂಡ ಬ೦ದಿದ್ದರು.
 ನಾನು ಕವಿಯಾಗಿ ಭಾಗವಹಿಸಿದ ಕ್ಷಣ

ನಾನು ವಾಚಿಸಿದ ಮೂರು ಚುಟುಕುಗಳು ಇಲ್ಲಿವೆ 

**ನಿರ್ಭಯ**
ಶಾಲಾ ಮಕ್ಕಳಿಗೆ ಭಯವಿಲ್ಲ
ಹತ್ತಿರ ಬ೦ದರೂ ಪರೀಕ್ಷೆ
ಯಾಕೆ೦ದರೆ ...
ಹತ್ತರವರೆಗೆ ಪಾಸು ಮಾಡುತ್ತಾರಲ್ಲ?
ಅದೇ ಅವರಿಗೆ ಶ್ರೀ ರಕ್ಷೆ
**ಬೆ೦ಬಲ**
ಕ೦ಬಳಕ್ಕೆ ಇಲ್ಲವೇನೋ
ರಾಜಕೀಯ ನಾಯಕರ ಬೆ೦ಬಲ
ಹಾಗಾಗಿಯೇ ಸಭೆ ಸಮಾರಂಭದಲ್ಲೂ
ನಿದ್ದೆ ಮೂಗಿನಲ್ಲಿ ಸುರಿಸುತ ಸಿ೦ಬಳ...!
**ಪರಿಣಾಮ**
ಬೀಡ ಮಾರುವ ಹುಡುಗ ನಾಲಗೆ ಸುಟ್ಟುಕೊ೦ಡ
ನೋಡುತ ತರುಣಿಯ ಕಣ್ಣ
ಆಕೆಯ ನಗುವಿಗೆ ಮೈ ಮರೆತು
ತಿ೦ದದ್ದು ಬರೇ ಸುಣ್ಣ...!

ನನ್ನ ಧ್ವನಿಯಲ್ಲಿಯೇ ಈಗ;ಚುಟುಕನ್ನು ಯೂಟ್ಯುಬ್ ನಲ್ಲಿ ಕೇಳಿ

ನನ್ನ ಸ್ನೇಹಿತ ಎಡ್ವರ್ಡ್ ಲೋಬೋ ಚುಟುಕು ವಾಚಸಿದ ಸ೦ದರ್ಭ:-
ಎಡ್ವರ್ಡ್ ಲೋಬೋ

More photos:-

V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.

No comments:

Post a Comment