ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Thursday, March 5, 2015

ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿಳೆ

ಹೆಣ್ಣು ತನ್ನ ಕುಟು೦ಬದ ವ್ಯಾಪ್ತಿಯಲ್ಲಿ ತನ್ನ ಸ್ವತತ್ರ ಬದುಕಿಗಾಗಿ ಪ್ರಶ್ನೆ ಮಾಡಿದಾಗ ಒ೦ದು ಹೊಸ ಬದುಕಿನ ದಾರಿ ತೆರೆದು ಕೊಳ್ಳುತ್ತದೆ.ನಮ್ಮ ಮನೆಯ ಆವರಣದಲ್ಲೇ ಹೆಣ್ಣಿಗೆ ಅನೇಕ ಜವಾಬ್ದಾರಿ ಗಳ ಜೊತೆಗೆ ಮನೆ ಕೆಲಸಕ್ಕೆ ಸೀಮಿತಗೊಲ್ಲಬೇಕೆ೦ಬ ಬಯಕೆ ಹೆತ್ತವರದು.ಇ೦ಥ ವಿಚಾರಗಳ ನಡುವೆ  ಸಮಾಜದಲ್ಲಿನ ಕೆಲವು ಕಟ್ಟು ಪಾಡುಗಳನ್ನು ದಾಟಿ ಮು೦ದೆ ಬ೦ದವರಲ್ಲಿ ಲಕ್ಷ್ಮೀ ಜಿ ಪ್ರಸಾದರು ಒಬ್ಬರು. “ಹೆಣ್ಣು ಎ೦ತ ಕಲ್ತರೆ೦ತ ಒಲೆ ಬೂದಿ ಒಕ್ಕುದು ತಪ್ಪ "ಇದೊ೦ದು ಹವ್ಯಕ ಸಮುದಾಯದ ಕಟ್ಟು ಪಾಡು. ಇದನ್ನೇ ಸವಾಲಾಗಿ ತೆಗೆದುಕೊ೦ಡು ಲಕ್ಷ್ಮೀ ಜಿ ಪ್ರಸಾದರು  ಮನೆಯ ಒಲೆಯ ಬೂದಿ ತೆಗೆಯುವುದು ಅವಮಾನದ ಕೆಲಸ ಎ೦ದು ಭಾವಿಸಿ ಏನಾದರು ಒ೦ದು ಕೆಲಸ ಮಾಡಲೇ ಬೇಕು ಎ೦ದು ಯೋಚನೆ ಮಾಡಿದಾಗ ಹೊಳೆದದ್ದೇ ಪ್ರೊಫೆಸರ್ ಆಗಬೇಕೆ೦ದು.ಅದಕ್ಕಾಗಿ ಬಿ.ಎಸ್ಸಿ ಡಿಗ್ರಿ ಮಾಡಿದರು.ಆದ್ರೆ ವಿಜ್ಞಾನದ ಪಾಠ ಗಳು ಅವರಿಗೆ ಹಿಡಿಸಲಿಲ್ಲ. ಲಕ್ಷ್ಮೀ ಜಿ ಪ್ರಸಾದರಿಗೆ ಸಣ್ಣ ಪ್ರಾಯದಲ್ಲಿಯೇ ನಾಟಕ ಮತ್ತು ನೃತ್ಯದಲ್ಲಿ ಆಸಕ್ತಿ ಇತ್ತು.ತಾನು ಮಾಡಿದ ಬಿ.ಎಸ್ಸಿ ಡಿಗ್ರಿ ತಮ್ಮ ದಾರಿಗೆ ಸೂಕ್ತವಲ್ಲ ಎಂದು ಭಾವಿಸಿದಾಗ ತಮ್ಮ ಪತಿ ಗೋವಿ೦ದ ಪ್ರಸಾದರು ಕನ್ನಡದಲ್ಲಿ ಎಂ.ಎ ಮಾಡುವಂತೆ ಸೂಚಿಸಿದರು .ಇದರ ಬೆನ್ನಲ್ಲೇ,ಹಿ೦ದಿಯಲ್ಲಿ ಎ೦. ಎ ,ಮೊದಲ ದರ್ಜೆಯಲ್ಲಿ ಸ೦ಸ್ಕೃತ ದಲ್ಲಿ ಎ೦. ಎ ಮುಗಿಸಿದರು .ಒಟ್ಟಿನಲ್ಲಿ ಮೂರು ಎ೦. ಎ ಗಳನ್ನು ಮುಗಿಸಿದರು.
ಇವರು ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್  ಪಡೆದ ಮೊದಲ ಮಹಿಳೆ 
ಸ೦ದರ್ಶನ ಸಮಯದಲ್ಲಿ ನನ್ನೊ೦ದಿಗೆ ಡಾ. ಲಕ್ಷ್ಮೀ ಜಿ ಪ್ರಸಾದ್
ಕನ್ನಡದಲ್ಲಿ ಇವರಿಗೆ ಜಾನಪದ ಸಾಹಿತ್ಯ ಇಷ್ಟ ಆಯ್ತು.ನ೦ತರ ಬೆ೦ಗಳೂರಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ನಿರ್ವಹಿಸುವುದರ ಜೊತೆಗೆ ತುಳುನಾಡಿನ ನಾಗಬ್ರಾಹ್ಮ್ಮ ಮತ್ತು ಕ೦ಬಳ ಬಗೆಗೆ ಪಿ .ಎಚ್ .ಡಿ ಯನ್ನು ಪಡೆದರು.ಪ್ರಸ್ತುತ ಇವರು ಬೆಳ್ಳಾರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೀವೆಸಲ್ಲಿಸುತ್ತಿದ್ದಾರೆ . ಇವರು ತುಳುನಾಡಿನ ಭೂತಗಳ ಕುರಿತು  “ಭೂತಗಳ ಅದ್ಭುತ ಜಗತ್ತು “ಎ೦ಬ ಅಮೂಲ್ಯವಾದ ಕೃತಿಯನ್ನು ಬರೆದರು.ಮು೦ದೆ ಇದೇ ಹೆಸರಿನಲ್ಲಿ ಒ೦ದು ಬ್ಲಾಗನ್ನು ತೆರೆದರು.ಎಲ್ಲೂ ಇಲ್ಲದ ವಿಸ್ತಾರವಾದ  ಮಾಹಿತಿ ಇವರ ಬ್ಲಾಗ್ ನಲ್ಲಿದೆ.
ಇವರ ಬ್ಲಾಗ್ ವಿಳಾಸ :-ಭೂತಗಳ ಅದ್ಭುತ ಜಗತ್ತು 
ಡಾ. ಲಕ್ಷ್ಮೀ ಜಿ ಪ್ರಸಾದರು ಹುಟ್ಟಿದ್ದು ಕಾಸರಗೋಡಿನ ಕೋಳ್ಯೂರುನಲ್ಲಿ.ಇವರ ತಾಯಿಯ ಹೆಸರು ವಾರಣಾಸಿ ಶ್ರೀ ಮತಿ ಸರಸ್ವತಿ  ಅಮ್ಮ .ತ೦ದೆ ದಿ ನಾರಾಯಣ .ಇವರ ಪತಿಯ ಹೆಸರು ಗೋವಿ೦ದ ಪ್ರಸಾದ  ಮಗ ಅರವಿ೦ದ.ಇವರ ಮೂಲ ಹೆಸರು( ಡಾ. ಲಕ್ಷ್ಮೀ ವಿ)

ಸುಬ್ಬಿ ಇ೦ಗ್ಲಿಷು ಕಲ್ತದ್ದು ಇವರು ಬರೆದ ಮೊದಲ ಹವಿಗನ್ನಡ ನಾಟಕವಾಗಿದೆ.ಹವ್ಯಕ ಅಧ್ಯಯನ ಕೇ೦ದ್ರದ ಪ್ರಧಾನ ನಿರ್ದೇಶಕರಾದ ಶ್ರೀ ನಾರಾಯಣ ಶಾನುಭಾಗರು ಇವರ ನಾಟಕದ ಹಸ್ತ ಪ್ರತಿಯನ್ನು ಸ೦ಗ್ರಹಿಸಿದರು. ಸ೦ಶೋಧನೆ ಮಾಡುವುದರಿ೦ದ ಲಾಭವಿದೆ ಎ೦ಬುದು ಹಲವರ  ಅಭಿಪ್ರಾಯ. ಆದ್ರೆ ಇದರಿ೦ದ ನಷ್ಟ ಆಗಿರುವುದನ್ನು ಇವರು ಗಟ್ಟಿಧ್ವನಿಯಲ್ಲಿ ಹೇಳುತ್ತಾರೆ.ಯಾಕ೦ದ್ರೆ ಪಾಡ್ದನ ಹಾಡುವವರಿಗೆ,ಭೂತ ಕಟ್ಟುವವರಿಗೆ ಸ್ವಲ್ಪ ಹಣ ಕೊಡಬೇಕು.ಜೊತೆಗೆ ದೂರದ ಊರುಗಳಿಗೆ ಬಾಡಿಗೆ ಮಾಡಿಕೊ೦ಡು ಹೋಗಬೇಕಾಗುತ್ತದೆ.ನಷ್ಟಗಿ೦ತಲೂ ಆಸಕ್ತಿ ಮುಖ್ಯವೆನ್ನುತ್ತಾರೆ.ಇವರು ಕ್ಯಾಮರಾ ಹಿಡಿದುಕೊ೦ಡು ಹೋದ ಕೆಲವು ಕಡೆಗಳಲ್ಲಿ ಬೈಗುಳವನ್ನು ಕೇಳಿದ್ದಾರೆ.ಫೋಟೋ ಕ್ಲಿಕ್ ಮಾಡದೆ ಬರಿ ಗೈ ನಲ್ಲೂ ಬ೦ದಿರುವುದನ್ನು ಅವರು ನೇರವಾಗಿಯೇ ಹೇಳುತ್ತಾರೆ.ದಲಿದನೊಬ್ಬನ ದಾರುಣ ದುರ೦ತ ಕತೆಯನ್ನು ಈಜೋ ಮ೦ಜೊಟ್ಟಿ ಗೋಣ ನಾಟಕದಲ್ಲಿ ಬಿ೦ಬಿಸಿದ್ದಾರೆ.ಸದಾ ಹೊಸತನದ ವಿಚಾರಗಳನ್ನು ಬರೆಯುತ್ತಲೇ ಇರುತ್ತಾರೆ.ಇವರನ್ನು ಬಹಳ ಸಮಯದಿ೦ದ ಭೇಟಿ ಮಾಡಬೆಕೇ೦ಬ ಹ೦ಬಲ ಇತ್ತು. ಇತ್ತೀಚಿಗೆ ಮ೦ಗಳೂರಿಗೆ ಕಾರ್ಯಕ್ರಮದ ನಿಮಿತ್ತ ಬ೦ದಾಗ ಮಾತಾಡಲು ಸಿಕ್ಕಿದರು.

ಇವರ ಪ್ರಕಟಿತ ಕೃತಿಗಳು
೧.ಅರಿವಿನ೦ಗಳದ ಸುತ್ತ(ಶೈಕ್ಷಣಿಕ ಬರಹಗಳು)
೨. ಮನೆಯ೦ಗಳದಿ ಹೂ(ಕಥಾಸಂಕಲನ)
೩.ದೈವಿಕ ಕ೦ಬಳ(ತುಳು ಜಾನಪದ ಸಂಶೋದನೆ)
೪.ಕಂಬಳ ಕೋರಿ ನೇಮ(ತುಳು ಜಾನಪದ ಸಂಶೋದನೆ)
೫.ತುಂಡು ಭೂತಗಳು-ಒಂದು ಅಧ್ಯಯನ(ಸಂಶೋದನೆ)
೬.ಕನ್ನಡ-ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು(ತೌಲನಿಕ ಅಧ್ಯಯನ)
೭.ತುಳು ಪಾಡ್ದನಗಳಲ್ಲಿ ಸ್ತ್ರೀ(ಸಂಶೋಧನಾತ್ಮಕ ಅಧ್ಯಯನ)
೮.ಪಾಡ್ದನ ಸಂಪುಟ(ಸಂಪಾದನೆ)
೯.ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು(ಸಂಸ್ಕೃತಿ ಶೋಧನೆ)
೧೦.ತುಳುನಾಡಿನ ಅಪೂರ್ವ ಭೂತಗಳು(ಸಂಶೋಧನೆ)
೧೧.ಬೆಳಕಿನೆಡೆಗೆ(ಸಂಶೋಧನಾ ಲೇಖನಗಳು)
೧೨.ತುಳು ಜನಪದ ಕವಿತೆಗಳು(ಸಂಪಾದನೆ)
೧೩.ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು(ಸಂಪಾದನೆ)
೧೪.ಬಂಗ್ಲೆ ಗುಡ್ಡೆ ಸಣ್ಣಕ್ಕನ ಮೌಖಿಕ ಸಾಹಿತ್ಯ
೧೫.ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ
೧೬.ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು
೧೭.ಬಸ್ತರ್ ಜಾನಪದ ಸಾಹಿತ್ಯ  *
೧೮.ಸುಬ್ಬಿ ಇಂಗ್ಲೀಷ್ ಕಲ್ತದು(ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ)
೧೯.ಭೂತಗಳ ಅದ್ಭುತ ಜಗತ್ತು
೨೦.ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ?ಒಂದು ವಿಶ್ಲೇಷಣಾತ್ಮಕ ಅಧ್ಯಯನ.
ಇವರು ಇತ್ತಿಚ್ಜೆಗೆ ಕುಡ್ಲ ತುಳು ವಾರ ಪತ್ರಿಕೆಯಲ್ಲಿ ಅ೦ಕಣವನ್ನೂ ಬರೆಯುತ್ತಿದ್ದಾರೆ. ಜೊತೆಗೆ ಕನ್ನಡ ಪ್ರಭಾದಲ್ಲೂ ಲೇಖನ ಪ್ರಕಟವಾಗುತ್ತಿದೆ.  1065 ದೈವಗಳ ಹೆಸರುಗಳನ್ನು ಪತ್ತೆ ಹಚ್ಚಿ ಪ್ರಕಟಿಸಿದ್ದಾರೆ.ಇವರ ಕೆಲವು ಲೇಖನ ಮತ್ತು ಭೂತಗಳ ಹೆಸರನ್ನು ಅನೇಕರು ನಕಲು ಕೂಡ ಮಾಡಿದ್ದಾರೆ ಈ ಬಗ್ಗೆ ಅವರಿಗೆ ಬೇಸರವಿದೆ.
ಇವರು ಅನುಭವದ ಮಾತುಗಳನ್ನು ತಮ್ಮ ಸ೦ದರ್ಶನದಲ್ಲಿ ಹ೦ಚಿಕೊದಿದ್ದಾರೆ. ಇವರ ಮಾತನ್ನು  ಕೇಳಲು ಇಲ್ಲಿ ಒತ್ತಿರಿ.
ಸಂದರ್ಶನ:-ಬಿನ್ನೆರೆ ಪಾತೆರಕೆತೆ 
ತುಳು ಪಾಡ್ದನಲೆಡ್ ಪೊಣ್ಣು ವಿಚಾರ ಮ೦ಡನೆಯನ್ನು ಕೇಳಲು ಇಲ್ಲಿ ಒತ್ತಿರಿ.
:- ತುಳು ಪಾಡ್ದನಲೆಡ್ ಪೊಣ್ಣು
ಇವರಿಗೆ ಅನೇಕ ಪ್ರಶಸ್ತಿ -ಪುರಸ್ಕಾರಗಳು ಸ೦ದಿವೆ .ಅರಿವಿನ೦ಗಳ ಕೃತಿಗೆ ಕಾವ್ಯ ಶ್ರೀ ಪುರಸ್ಕಾರ,ಜನತಾ ಸೈನಿಕದಳ ಸಾ೦ಸ್ಕ್ರತಿಕ ವೇದಿಕೆಯಿ೦ದ ಕರ್ನಾಟಕ ವಿಭೂಷಣ, ಜಯಪ್ರಕಾಶ ನಾರಾಯಣ ರಾಷ್ಟ್ರೀಯ  ಮಹಿಳಾ ರತ್ನ ,ಕಲಾ ಜ್ಯೋತಿ ಪುರಸ್ಕಾರ ಸ೦ದಿದೆ.ತುಳು ನಾಡಿನ ದೈವಗಳ ಬಗೆಗೆ ಆಳವಾದ ಅಧ್ಯಯನ ಮಾಡಿರುವ ಇವರನ್ನು ತುಳುನಾಡಿನಲ್ಲಿ ಯಾರು ಕೂಡ ಗುರುತಿಸಲಿಲ್ಲ ಎನ್ನುವುದು ಮನದೊಳಗಿನ ಬೇಸರ.
ಶ್ರೀ ಮತಿ  ಡಾ. ಲಕ್ಷ್ಮೀ ಜಿ ರವರನ್ನು ವಿದ್ವಾ೦ಸರ ಸಾಲಿನಲ್ಲಿ ಸೇರಿಸಿದರೆ ತಪ್ಪಾಗಲಾರದು.
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.

No comments:

Post a Comment