ನಿರೂಪಕರೆ೦ದರೆ ನೇರ ಪ್ರಸಾರದ ಕೋಣೆಯೊಳಗೆ ಕೂತು ಮಾತಾಡೋದು ಮಾಮೂಲಿ . ಆದ್ರೆ ಇಲ್ಲೊಬ್ಬ ನಿರೂಪಕ ಮೈಕ್ ಜೊತೆ ಗದ್ದೆಗೆ ಇಳಿದಿದ್ದಾರೆ !
ಸುಮಾರು ಒಂದು ವರ್ಷಗಳಿಂದ ರೇಡಿಯೋ ಸಾರಂಗ್ ನಿಮ್ಮೂರೀಗೆ ನಮ್ಮ ಸಾರಂಗ್ ವಿಶೇಷ ನೇರಪ್ರಸಾರವನ್ನು ಪ್ರತಿ ಶನಿವಾರ 4 ರಿಂದ 5 ವರೆಗೆ ಪ್ರಸಾರ ಮಾಡುತ್ತಿದೆ .ಈಗಾಗಲೆ ಸರಿ ಸುಮಾರು 45 ಊರುಗಳನ್ನು ಸುತ್ತಿಯಾಗಿದೆ . ನಮ್ಮ ತುಳುನಾಡಿನ ಬಹುತೇಕ ಕಡೆಗಳಲ್ಲಿ ಗದ್ದೆಯ ಕೆಲಸ ಕಾರ್ಯಗಳನ್ನು ನೋಡಬಹುದು .ಇತ್ತೀಚೆಗೆ ಬಜಪೆಯಿ೦ದ ನೇರಪ್ರಸಾರವನ್ನು ಹಮ್ಮಿಕೊಂಡಿತ್ತು .ಅದು ಕೂಡ ಗದ್ದೆಯಿಂದ ನೇರಪ್ರಸಾರ ! ಕಾರ್ಯಕ್ರಮದ ನಿರೂಪಣೆಯನ್ನು ಎಡ್ವರ್ಡ್ ಲೋಬೋ ಮಾಡುತ್ತಿದ್ದಾರೆ.
ಗದ್ದೆ ಕೆಲಸ ಮಾಡುವ ಅನುಭವ ,ನಡುವ ಕ್ರಮ ,ಆ ಸಮಯದಲ್ಲಿ ಹಾಡುವ ಹಾಡುಗಳು ಎಲ್ಲವೂ ಕೇಳುಗನ ಮಾನೆಬಾಗಿಲಿಗೆ ತಲುಪಿದಾಗ ಅದೇನೋ ಸಂಭ್ರಮ . ನೇಜಿ ನಡುವ ಸಮಯದಲ್ಲಿನ ಹಾಡುಗಳಂತೂ ಒಂದಕ್ಕೊಂದು ಮಿಗಿಲಾಗಿತ್ತು. ನಿಜವಾಗಿಯು ಈ ನೈಜ ಗದ್ದೆ ಕೆಲಸ ದ ಚಿತ್ರಣ ಸಿಕ್ಕಾಗ ಕೇಳುವ ಮನಸ್ಸಿಗೂ ಏನೋ ಒಂದು ಹುಮ್ಮಸು . ಹಳ್ಳಿಯ ಹೆಂಗಸರು ಈ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡದ್ದು ವಿಶೇಷ ವೇ ಸರಿ . ಗದ್ದೆಯ ಲ್ಲಿನ ಕೆಸರಿನೊಳಗೆ ನಿರೂಪಕರ ಕಾಲು ಹೂತು ಹೋಗಿ ಕೊನೆಗೆ ಒಂದು ಹಾಡಿನ ತುಣುಕನ್ನು ಕಾರ್ಯಕ್ರದ ನಡುವೆ ಪ್ರಸಾರ ಮಾಡಬೇಕಾಯಿತು . ಮಳೆಯ ಕಿರಿ ಕಿರಿಯ ನಡುವೆ ಇಂಥಹ ಕಾರ್ಯಕ್ರಮ ಮಾಡೋದು ಒಂದು ಸಾಹಸವೇ ಸರಿ . ಸಮುದಾಯದ ಒಂದು ಭಾಗವಾಗಿ ರೇಡಿಯೋ ಸಾರಂಗ್ ಈ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದೆ . ಅಂದಹಾಗೆ ಈ ಕಾರ್ಯಕ್ರಮಕ್ಕೆ ಸಿಂಚನಾ ಶ್ಯಾಮ್ ತಾಂತ್ರಿಕ ನೆರವನ್ನು ನೀಡುತ್ತಿದ್ದಾರೆ . ಗದ್ದೆ ಹೊರತು ಪಡಿಸಿ ಅನೇಕ ಸಮ್ಮೇಳನಗಳಿಗೆ ಜೊತೆಗೆ ಬೇರೆ ಬೇರೆ ಹಳ್ಳಿಗಳಿಗೆ ಹೋಗಿ ಕಾರ್ಯಕ್ರಮವನ್ನೂ ಮಾಡುತ್ತಾ ಬಂದಿದೆ .
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.

V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.
No comments:
Post a Comment