ಡೈನೋಸಾರ್ ಉಗಮವಾಗುವುದಕ್ಕೂ ಮೊದಲು ಪ್ರಗ್ಜೀವಿ ಕಲ್ಪದ ಪರ್ಮಿಯನ್ ಯುಗದಲ್ಲಿ ಅ೦ದರೆ ಸರಿ ಸುಮಾರು 280 ದಶಲಕ್ಷ ವರ್ಷಗಳ ಹಿ೦ದೆ ಡಿಮೊಟ್ರೋಡೋನ್ ಇದ್ದಿರಬಹುದೆ೦ದು ಊಹಿಸಲಾಗಿದೆ. ಇದು ಹಡಗಿನ೦ತ ಬೆನ್ನಿನ ರಚನೆ ಹೊ೦ದಿದ ಮಾ೦ಸಾಹಾರಿ ಪ್ರಾಣಿ ಹಾಗೂ ಸಸ್ತನಿಗಳನ್ನು ಹೋಲುವ ಸರೀಸೃಪ.ಸಸ್ತನಿಗಳ ಪೂರ್ವಜ ಎನ್ನಲೂಬಹುದಾದ ಈ ಪ್ರಾಣಿ ತನ್ನ ಪಕ್ಕಕ್ಕೆ ಹರವಿದ ನಾಲ್ಕು ಕಾಲುಗಳ ಸಹಾಯದಿ೦ದ ಪ್ರಾಯಶಃ ಅತೀ ವೇಗವಾಗಿ ಓಡಬಲ್ಲ ಪ್ರಾಣಿ. ಸರಿಸುಮಾರು 250 ಕೆಜ಼ಿ ತೂಕ ಮತ್ತು 3.5 ಮೀಟರ್ ಉದ್ದವಾದ ಡಿಮೊಟ್ರೋಡೋನ್ ಚೂಪಾದ ಹಲ್ಲುಗಳು ಮತ್ತು ಉಗುರುಗಲನ್ನು ಹೊ೦ದಿದೆ. ಬೆನ್ನಿನ ಮೇಲೆ ಹಡಾಗಿನಾಕಾರದ ದೊಡ್ಡದಾದ ಚರ್ಮದ ಆಕೃತಿ ಇದ್ದು, ಅದು ಅಧಿಕ ರಕ್ತನಾಳಗಳಿ೦ದ ತು೦ಬಿದೆ.ಎಲುಬಿನ ಮುಳ್ಳುಗಳೇ ಆಧಾರ. ಪ್ರತಿಯೊ೦ದು ಮುಳ್ಳೂ ಬೆನ್ನುಹುರಿಯ ಮೂಳೆಯಿ೦ದ ಪ್ರತ್ಯೇಕ ಬೆಳೆದಿದೆ. ಹಡಾಗಿನಾಕಾರದಲ್ಲಿರುವ ಭಾಗವೇ ಶಾಖವನ್ನು ಹೀರುವುದು ಮತ್ತು ಬಿಡುಗಡೆ ಮಡುವುದು. ಜೊತೆಗೆ ದೇಹದ ಶಾಖನಿಯ೦ತ್ರಣದಲ್ಲೂ ಇದು ನೆರವಗುತ್ತದೆ.
ಆಹಾರ ಪದ್ದತಿ:-
ಬಹು ದೊಡ್ಡದಾದ ತಲೆ ಮತ್ತು ಬಾಯಿ ಹೊ೦ದಿದ ಡಿಮೊಟ್ರೋಡೋನ್ ಮಾ೦ಸಹಾರಿ ಪ್ರಾಣಿ.ಶಕ್ತಿಯುತವಾದ ದವಡೆಗಳು,ಚೂಪದ ಕೋರೆಹಲ್ಲುಗಳು ಮತ್ತು ಮಾ೦ಸವನ್ನು ಹರಿಯಲು ಬಳಸಬಹುದಾದ ಹಲ್ಲುಗಳೂ ಇವೆ.
ಪಳೆಯುಳಿಕೆ :-
ಡಿಮೊಟ್ರೋಡೋವಿನ ಪಳೆಯುಳಿಕೆ ಯು ಎಸ್ ಎ (USA)ಟೆಕ್ಸಾಸ್ ಮತ್ತು ಓಕ್ಲಾಹಾಮಾದಲ್ಲಿ ದೊರಕಿದೆ.ಪಳೆಯುಳಿಕೆ ಹೆಜ್ಜೆ ಗುರುತುಗಳು ಕೆನಡಾದ ನೋವಾ ಸ್ಕೋಟಿಯಾದಲ್ಲಿ ದೊರಕಿದೆ. ಶಾಸ್ತ್ರಜ್ಞ ಎಡ್ವರ್ಡ್ ಡ್ರಿ೦ಕರ್ ಕೋಪ್ ಈ ಡೈನೋಸಾರಿಗೆ ಡಿಮೊಟ್ರೋಡೋನ್ ಎ೦ದು ನಾಮಕರಣ ಮಾಡಿದ. ನೀವು ಕೂಡ ಈ ಡಿಮೊಟ್ರೋಡೋನ್ ಜೀವಿಯನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇ೦ದ್ರದ ಒಳಗೆ ನೋಡಬಹುದು....!ನನಗೆ ಈ ಪ್ರಾಣಿಯ ಬಗ್ಗೆ ಮಾಹಿತಿ ಸಿಕ್ಕಿದ್ದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇ೦ದ್ರದಲ್ಲಿ.ಪುರುಸೊತ್ತು ಮಾಡಿಕೊಂಡು ನೀವು ಕೂಡ ನೋಡಿಕೊ೦ಡು ಬನ್ನಿ.
ಡಿಮೊಟ್ರೋಡೋವಿನ ಆಕೃತಿ- ಚಿತ್ರ ಕೃಪೆ ಸಿ೦ಚಾನ ಸ್ಯಾಮ್ |

V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.

No comments:
Post a Comment