ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Monday, April 20, 2015

ಮಣ್ಣಿನ ಹರಕೆಯ ಸಂಪ್ರದಯಾದ ವಿಶೇಷ ಸ್ಥಳ 'ಸುರ್ಯ '

ನಮ್ಮ ತುಳುನಾಡು ಹಲವು ವೈವಿಧ್ಯಗಳ ತವರು .ಎಲ್ಲ ದೇವಸ್ಥಾನಗಳಲ್ಲಿ ಬೆಳ್ಳಿ ,ಬಂಗಾರ ದ ಹರಕೆಗಳನ್ನು ಸಮರ್ಪಿಸಿದರೆ, ಮಣ್ಣಿನ ಹರಕೆಯ ಸಂಪ್ರದಾಯ ಮೂಲಕ ಪ್ರಸಿದ್ದವಾದ ಕ್ಷೇತ್ರ ಶ್ರೀ ಸದಾಶಿವರುದ್ರ ದೇವಸ್ಥಾನ  ಸುರ್ಯ . ಮೊನ್ನೆ ಈ ವಿಶೇಷ  ಕ್ಷೇತ್ರಕ್ಕೆ ನಾನು ಹೋಗಿದ್ದೆ . ಪ್ರಕೃತಿ ರಮಣೀಯ ವಾದ ಸಣ್ಣ ಹಳ್ಳಿಯೇ ಸುರ್ಯ .ಮಣ್ಣಿನ ಹರಕೆಯ ಕ್ಷೇತ್ರವೆಂದೇ  ಇದನ್ನು ಕರೆಯುತ್ತಾರೆ.
ಶ್ರೀ ಸದಾಶಿವರುದ್ರ ದೇವಸ್ಥಾನ , ಸುರ್ಯ

"ಸುರ್ಯ" ಹೆಸರಿನ ಹಿನ್ನೆಲೆ ಗೊತ್ತಾ?

"ಸುರ್ಯ" ಎಂಬ ಹೆಸರು ಬರಲು ಕಾರಣವಾದ ದಂತಕತೆ ಇದೆ . ಅದೇನೆಂದರೆ,  ಹಿಂದೆ ಒಬ್ಬಾಕೆ ತನ್ನ ಮಗ 'ಸುರೆಯ'ನ ಜೊತೆ ಆ ಪ್ರದೇಶದಲ್ಲಿ ಕಾಡಿಗೆ ಸೊಪ್ಪು ಕಡಿಯಲೆಂದು ಹೋಗಿದ್ದಳು. ಆಗ ಸೊಪ್ಪಿನ ಎಡೆಯಲ್ಲಿ  ಮರೆಯಾಗಿದ್ದ ಲಿಂಗರೂಪಿ  ಶಿಲೆಗೆ ಕತ್ತಿತಾಗಿ ರಕ್ತ  ಚಿಮ್ಮಿತಂತೆ . ಆಗ ಗಾಬರಿಗೊಂಡ ಆತನ ತಾಯಿ ತನ್ನ ಮಗನನ್ನು "ಓ ಸುರೆಯಾ..." ಎಂದು ಜೋರಾಗಿ ಕರೆದಳು .ಆ ಘಟನೆಯ ನಂತರ ಈ ಕ್ಷೇತ್ರಕ್ಕೆ ಸುರೆಯ ,ಸುರಿಯ ,ಸುರ್ಯ ಎಂಬ ಹೆಸರು ಬಂತು ಎಂದು  ಹೇಳಲಾಗುತ್ತಿದೆ. ಅದೇ ರೀತಿ ಆ ಲಿಂಗವನ್ನು ರೂಪಿ ಶಿಲೆಗೆ ಪೂಜೆ ನಡೆಸಿ ದೇವಾಲಯ ನಿರ್ಮಾಣ  ಮಾಡಲಾಯಿತೆಂದು ಪ್ರತೀತಿ .
ಮಣ್ಣಿನ ಹರಕೆಯ ಸಂಪ್ರದಾಯ 
ಭಕ್ತ ಜನರು  ತಮ್ಮ ಕಷ್ಟ ನಿವಾರಣೆಗೆ ಅಥವಾ ಕೆಲಸ  ಸಾರ್ಥಕ ಗೊಳ್ಳಲು  ಪ್ರಾರ್ಥನೆ ಮಾಡಿಕೊಂಡು  ತಮ್ಮ ಸಂಕಲ್ಪ ಸಿದ್ದಿಯಾದಾಗ ತಾವು ಪ್ರಾರ್ಥಿಸಿದ ರೀತಿಯ  ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ  ಅರ್ಪಿಸಬಹುದು . ಈ ಸಂಪ್ರದಾಯ ದ ಹಿನ್ನೆಲೆ ಬಗ್ಗೆ ನಿಖರವಾದ ಯಾವುದೇ ಮಾಹಿತಿ  ಸಿಗುತ್ತಿಲ್ಲ . ಶತಶತಮಾನಗಳಿಂದ ಈ ಮಣ್ಣಿನ ಸಂಪ್ರದಾಯ ನಿರಂತರವಾಗಿ ನಡೆದು  ಬರುತ್ತಿದ್ದು ,ಲಕ್ಷಾಂತರ ಭಕ್ತರ ಸಂಕಷ್ಟ  ನಿವಾರಣೆ ಆಗಿರುವುದಕ್ಕೆ ಇಲ್ಲಿ ಶೇಖರಣೆ ಯಾದ ಮಣ್ಣಿನ ಹರಕೆ ಗೊಂಬೆ ಗಳ ರಾಶಿಯೇ ಸಾಕ್ಷಿಯಾಗಿದೆ .
ಇಂದಿನ ವೈಭವದ ದೇವಸ್ಥಾನಗಳನ್ನು ಕಾಣುವಾಗ  ಈ ಮಣ್ಣಿನ ಹರಕೆಯ ಕಾರ್ಯ ಹೊಸ ಚಿಂತನೆಯನ್ನು ನೀಡುತ್ತದೆ .ಗದ್ದೆಯಲ್ಲಿ ದುಡಿದು ತಿನ್ನುವ ಶ್ರಮ ಜೀವಿಗಳ ಮೂಲಕ ಶುರುವಾಗಿರಬಹುದು  ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ . ಎಲ್ಲೆಡೆ ಬೆಳ್ಳಿ ಬಂಗಾರದ ಹರಕೆಗಳ  ಮಾತುಗಳನ್ನೇ  ಕೇಳುತ್ತಿದ್ದೆವೆ . ಈ ಮಣ್ಣಿನ ಹರಕೆ ಮಾತ್ರ ದೀನ ದುರ್ಬಲರಿಗೂ ಸಾಧ್ಯ ಎನ್ನುವದರಲ್ಲಿ ಎರಡು ಮಾತಿಲ್ಲ .
ನಾನು ಮೊನ್ನೆ ಹೋದಾಗ ನನ್ನ ಗಮನಕ್ಕೆ ಬಂದಿರುವ ಭಕ್ತರ ಹರಕೆಗಳು ಇಂತಿವೆ :-
ಸಂತಾನ ಪ್ರಾಪ್ತಿಗಾಗಿ ತೊಟ್ಟಿಲು ಮಗು ,ಮಾಡುವೆ ಭಾಗ್ಯಕಾಗಿ ಗಂಡು ಹೆಣ್ಣಿನ ಗೊಂಬೆ , ವಿಧ್ಯಾಭ್ಯಾಸದ ಸಫಲತೆಗಾಗಿ ಪುಸ್ತಕ ಪೆನ್ನು ದೇಹದ ಆರೋಗ್ಯಕ್ಕಾಗಿ ಮನುಷ್ಯನ ಆಕೃತಿ ಅಥವಾ ಸಬಂಧಪಟ್ಟ ಅಂಗಾಂಗಗಳು ,ವಾಹಾರ ಖರಿದಿಸುವಂತಾಗಲು  ವಾಹನಗಳ ಮೂರ್ತಿ ,ಒಳ್ಳೆಯ ಜಲಮೂಲಕ್ಕಾಗಿ ಬೋರ್ವೆಲ್ ಅಥವಾ ಬಾವಿ ಹರಕೆ.  ಜೀವನದ ಬೇರೆ ಬೇರೆ ಕಷ್ಟ ಗಳಿಗೆ ಇಲ್ಲಿ ಹರಕೆ ಒಪ್ಪಿಸಿರುವುದನ್ನು ನಾವು ಕಾಣಬಹದು . ಕಾರು , ಬಸ್ಸು ವಿಮಾನ ,ದೋಣಿ ,ಹೆಲಿಕಾಪ್ಟರ್ ,ಕಟ್ಟಡಗಳು ,ಕೈ ಕಾಲು ,ಹೃದಯ , ಕಿಡ್ನಿ  ಕಂಪ್ಯೂಟರ್ ,ಮೇಜು ,ಕುರ್ಚಿ, ದನ,ಕರು,ನಾಯಿ ಕೋಳಿ  ಹೀಗೆ ವಿಭಿನ್ನ ಮಣ್ಣಿನ ಮೂರ್ತಿಗಳನ್ನು ಹರಕೆಯ ರೂಪದಲ್ಲಿ ಅರ್ಪಿಸುವುದನ್ನು ಕಾಣಬಹುದು . ಈ ಮಣ್ಣಿನ ಗೊಂಬೆಗಳನ್ನು  ಆವೆ ಮಣ್ಣಿನಿಂದ ಮಾಡಿ ಕುಲುಮೆಯಲ್ಲಿ ಬೇಯಿಸಿ ತಯಾರಿಸಲಾಗುತ್ತದೆ . ದೇವರಿಗೆ ಅರ್ಪಿಸುವಾಗ ಈ ಗೊಂಬೆಗಳಲ್ಲಿ ಯಾವುದೇ ರೀತಿಯ ಬಿರುಕು,ಒಡಕು ಇರಬಾರದು . ದೂರದ ಊರಿಂದ ಬರುವ ಭಕಾದಿಗಳ ಅನುಕೂಲಕ್ಕಾಗಿ  ಈಗ ಎಲ್ಲಾ ರೀತಿಯ ಹರಕೆ ಗೊಂಬೆಗಳನ್ನು ಕುಂಬಾರ ರಿಂದ ಮಾಡಿಸಿ  ದೇವಸ್ಥಾನದಲ್ಲಿ ಸಿಗುವಂತೆ ಮಾಡಿದ್ದಾರೆ .

ಮೂಲ ಕ್ಷೇತ್ರ  ಹರಕೆ ಬನ 

ಲಿಂಗರೂಪಿ  ಶಿಲೆಗೆ ಕತ್ತಿತಾಗಿ  ರಕ್ತ  ಚಿಮ್ಮಿದ ಜಾಗದಲ್ಲಿ  ಹರಕೆ ಬನವಿದೆ . ಇದಕ್ಕೂ ಒಂದು ಐತಿಹ್ಯವಿದೆ . ಈ ಪ್ರದೇಶದಲ್ಲಿ ಭೃಗು ಮಹರ್ಷಿ ಯಾ ಶಿಷ್ಯ ರೊಬ್ಬರು ತಪಸ್ಸು ಮಾಡುತ್ತಿದ್ದು ,ಅವರ ತಪಸ್ಸಿಗೆ ಒಲಿದ ಶಿವಪಾರ್ವತಿಯರು  ಪ್ರತ್ಯಕ್ಷರಾಗಿ ಲಿಂಗ ರೂಪದಲ್ಲಿ ನೆಲೆಯಾದರು  ಎಂಬ ಹಿರಿಯರ ನ೦ಬಿಕೆ .ಇಂದಿಗೂ ಈ ಲಿಂಗ ರೂಪಿ ಶಿಲೆಗಳಿಗೆ  ನಿತ್ಯ ಪೂಜೆ ಸಲ್ಲಿಸಲಾಗುತ್ತದೆ . ಭಕ್ತರಿಂದ ಸಮರ್ಪಿತವಾದ ಹರಕೆಗೊ೦ಬೆಗಳನ್ನು ಈ ಲಿಂಗಗಳ ಸುತ್ತಾಲೂ ಜೋಡಿಸಿಡಲಾಗಿದೆ . ಇಲ್ಲಿಗೆ ಬರುವ ಭಾಕರಿಗೆ ಹಗಲು ವೇಳೆ ಮಾತ್ರ ಹರಕೆ ಬಣ ಸಂದರ್ಶನಕ್ಕೆ ಅವಕಾಶವಿದೆ .
 ಈ ಶ್ರೀ ಸದಾಶಿವ ರುದ್ರ ದೇವರ ಪಕ್ಕದಲ್ಲಿ ನೈರುತ್ಯಕ್ಕೆ ಪೌಳಿ ಯಲ್ಲಿ  ಗಣಪತಿ ಸಾನ್ನಿಧ್ಯವಿದೆ . ದೇವಸ್ಥಾನದ ಬಳಬಾಗದಲ್ಲಿ ನಾಗಬನ, ಇದರ ಜೊತೆಗೆ  ಪೌಳಿ ಯಲ್ಲಿ ಬಲಭಾಗದಲ್ಲಿ ಕೊಡಮಣಿತ್ತಾಯ ,ಪಿಳಿ ಚಾಮುಂಡಿ  ದೈವಗಳ ಸಾನ್ನಿಧ್ಯವಿದೆ  ಪ್ರತಿವರ್ಷವೂ  ಜಾತ್ರೆಯ ಸಂಭ್ರಮವಿದೆ .
ಈ ಕ್ಷೇತ್ರದ ಆನುವಷಿಕ ಆಡಳಿತ ಮೊಕ್ತೇಸರ  ಸುರ್ಯಗುತ್ತು  ಶ್ರೀ ಸುಭಾಶ್ಚ೦ದ್ರ . ಹೆಚ್ಚಿನ ಮಾಹಿತಿಗೆ ದೂರವಾಣಿ  ಸಂಖ್ಯೆ :-08256-202200
ಇಂತಹ ವಿಶೇಷ ಸ್ಥಳಕ್ಕೆ ನೀವೂ  ಹೋಗಿ ದೇವರ ದರುಶನ ಮಾಡಿ .

ಚಿತ್ರಸಂಗ್ರಹ :ಅಂತರ್ಜಾಲ ದಿಂದ
ಸಹಕಾರ :-ಧರ್ಮಪಾಲ ಕಡಬ
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.
                                                                    ವಂದನೆಗಳು 



No comments:

Post a Comment