ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Thursday, April 16, 2015

ಅತ್ತಾವರದ ದೆಯ್ಯೊಂಗುಳು - ಯುವ ಸಂಶೋಧಕ ಪ್ರಶಾಂತ್ ರಾಮ್ ಕೊಟ್ಟಾರಿ ರವರ ಸಂಶೋಧನ ಕೃತಿ

ನಮ್ಮ ತುಳುನಾಡಿನ ಧಾರ್ಮಿಕ ರಂಗಭೂಮಿಯಾದ ಭೂತಾರಾಧನೆ ಬಗ್ಗೆ ಅನೇಕ ವಿದ್ವಾಂಸರು ತುಳು ಜಾನಪದ ರೂಪ ಸ್ವರೂಪಗಳ  ಕುರಿತ ಹಾಗೆ ಗಂಭೀರ ಅಧ್ಯನಗಳು ನಡೆದಿವೆ . ಪ್ರಾಮಾಣಿಕ ಮತ್ತು ಪರಿಶ್ರಮದಿಂದ ಅತ್ತಾವರದ  ದೆಯ್ಯೊಂಗುಳು  ಕೃತಿಯನ್ನು ಹೊರತಂದಿರುವ ಪ್ರಶಾಂತ್ ರಾಮ್ ಕೊಟ್ಟಾರಿ  ಯುವ ಸಂಶೋಧಕ .ವೃತ್ತಿಯಲ್ಲಿ ಸಾಫ್ಟ್ ವೇರ್  ಎಂಜಿನಿಯರಾಗಿದ್ದುಕೊಂಡು  ಜಾನಪದದಲ್ಲಿ ವಿಶೇಷ  ಆಸಕ್ತಿ ಹೊಂದಿರುವ ಪ್ರಶಾಂತ್ ರಾಮ್ ಕೊಟ್ಟಾರಿ  ನಮ್ಮ ಮಂಗಳೂರಿನ  ಅತ್ತಾವರದವರು . ಕಂಪ್ಯೂಟರ್  ಎಂಜಿನಿಯರಿಂಗ್ ನಲ್ಲಿ ಬಿ ಇ ಪದವಿ ಪಡೆದಿರುವ ಇವರು ಅಮೇರಿಕಾದ ಹೆಸರಾಂತ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದಾರೆ.
ಪ್ರಶಾಂತ್ ರಾಮ್ ಕೊಟ್ಟಾರಿ
"ಅತ್ತಾವರದ ದೆಯ್ಯೊಂಗುಳು " ಕೃತಿ ಸರಳ ಶೈಲಿಯಲ್ಲಿ  ಮತ್ತು ಶಿಸ್ತು ಬದ್ಧವಾಗಿ ಬಹಳ ಅರ್ಥಪೂರ್ಣವಾಗಿ ಮೂಡಿ ಬಂದಿದೆ . ಶ್ರೀ ಯುತ  ಪ್ರಶಾಂತ್ ರಾಮ್ ಕೊಟ್ಟಾರಿ ಯವರು ಯಾವುದೇ ಪದವಿ ಅಥವಾ ಪ್ರಚಾರಕ್ಕಾಗಿ ಈ ಕೆಲಸ ಮಾಡಿಲ್ಲ . ತುಳು  ನಾಡಿನ ಬಗೆಗೆ ಮತ್ತು ಜಾನಪದದ ಬಗೆಗೆ ಅವರಿಗಿರುವ ಕಾಳಜಿ ಮತ್ತು ಶ್ರಮದಿನದ ಮಾಡಿದ್ದಾರೆ.ಮಂಗಳೂರಿನ  ಮುಖ್ಯ ಭಾಗವಾದ ಅತ್ತಾವಾರ ಮಾಗಣೆ ದೈವಗಳ ಅಧ್ಯಯನವನ್ನು ಪ್ರಮಾಣಿಕವಾಗಿ ಮಾಡಿರುವ ಯುವ ಸಂಶೋಧಕ ಎಂದರೆ ತಪ್ಪಾಗಲಾರದು . ಮತ್ತೊಂದು ಗಮನಿಸಬೇಕಾದ  ಅಂಶವೆಂದರೆ  ಅತ್ತಾವರದ ಸಾಂಪ್ರದಾಯಿಕ ಆಚರಣೆಗಳ ಸುಗಮ ನಿರ್ವಹಣೆಗೆ ದುಡಿದಿರುವ ಕಲಾವಿದರ ಮತ್ತು ಸಂಬಂಧಿತ  ಇತರರ ಕುರಿತಾಗಿ ಬಹಳ ಚೆನ್ನಾಗಿ ಉಲ್ಲೇಖ ಮಾಡಿರುವದು ಇಲ್ಲಿ ಗಮನಾರ್ಹ. ಕೆಲಸದ ನಿಮಿತ್ತಾ ಅಮೇರಿಕಾದಲ್ಲಿ ನೆಲೆಸಿದ್ದರೂ  ತುಳುನಾಡಿನ ಮತ್ತು ಇಲ್ಲಿನ ಸಂಸ್ಕೃತಿಯ ಬಗೆಗೆ ಅಪಾರವಾದ ಕಾಳಜಿ  ಇದೆ .ಇತ್ತೀಚಿಗೆ ಶ್ರೀಯುತರು ಕುಡ್ಲಕ್ಕೆ ಬಂದಾಗ  ನನ್ನ ವಾರದ ವಿಶೇಷ  "ಬಿನ್ನೆರೆ ಪಾತೆರಕತೆ "ಕಾರ್ಯಕ್ರಮದಲ್ಲಿ ತಮ್ಮ ಅನುಭವದ ಮಾತುಗಳನ್ನು ಬಿಚ್ಚಿಟ್ಟರು .
ತುಳುನಾಡಿನಲ್ಲಿ ಪ್ರಸಿದ್ದ ವಾಗಿರುವ ಅತ್ತಾವರ ಮೊಸರುಕುಡಿಕೆ ಉತ್ಸವ ೨೦೦೯ ರಲ್ಲಿ ೧೦೦ನೇ ವರ್ಷದ ಕಾರ್ಯಕ್ರಮ ನಡೆದಾಗ  ಆ ಶತಮಾನೋತ್ಸವ ಸಮಿತಿಯ ಸದಸ್ಯರಾಗಿದ್ದರು . ಅ ಸಮಯದಲ್ಲಿ ಸ್ಮರಣ ಸಂಚಿಕೆಯಲ್ಲಿ  ಅತ್ತಾವರದ ದೈವಗಳ ಬಗ್ಗೆ ಕಿರು ಲೇಖನ ಬರೆಯಲು ಹೊರಟರು .ಆದ್ರೆ ದೊಡ್ದ ಲೇಖನ ಆದಕಾರಣ ಅದು ಪ್ರಕಟವಾಗಿಲ್ಲ . ಮುಂದೆ  ಕೃತಿಯೊಂದನ್ನು ಹೊರತರುವ ಯೋಚನೆ ಮಾಡಿದರು . ಅಮೇರಿಕಾ ದಿಂದ ಊರಿಗೆ ಬರುವಾಗ ಕೆಲವು ತಿಂಗಳು ಬಿಡುವು ಸಿಗುತ್ತಿತ್ತು.  ಆ ಸಮಯವನ್ನು ಬಳಸಿಕೊಂಡು ಇಷ್ಟು ದೊಡ್ಡ ಪುಸ್ತಕ ಬರೆಯಲು ಸಾಧ್ಯವಾಯ್ತು ಎಂಬುದನ್ನು ನಗು ಮುಖದಿಂದ ಹೇಳುತ್ತಾರೆ.ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ೩೧೪ ಪುಟಗಳ  ಈ ಪುಸ್ತಕವನ್ನು ಇವರೇ ಟೈಪ್ ಮಾಡಿದ್ದಾರೆ .ಹಾಗೆಯೇ " ಅತ್ತಾವರದ ದೆಯ್ಯೊಂಗಳು" ಈ ಕೃತಿ ಇಂಗ್ಲಿಷ್ ಗೆ ಅನುವಾದವನ್ನು ಇವರೇ ಮಾಡುತ್ತಿದ್ದು , ಈ ಕೆಲಸ ಪ್ರಗತಿಯಲ್ಲಿದೆ. ಈ ಕಾರ್ಯ ಪೂರ್ಣ ಗೊಂಡ  ಬೆನ್ನಲ್ಲೇ ವೇಣೂರಿನ  ಅಜಿಲ ಸೀಮೆ ಅರಸರ ಕುರಿತಾಗಿ ಇನ್ನೊಂದು ಕೃತಿಯನ್ನು ಹೊರತರಲಿದ್ದಾರೆ . ತುಳು ಭಾಷೆಯ ಅಭಿಮಾನದಿಂದ ಅಮೇರಿಕಾದಲ್ಲಿ ನಡೆಯುವ ತುಳು ಕಾರ್ಯಕ್ರಮಗಳಿಗೆ ತಪ್ಪದೆ ಹೋಗುತ್ತಾರೆ . ಇವರಿಂದ ಇನ್ನಷ್ಟು  ಬರಹಗಳು ಹೊರ ಬರಲಿ ಎಂಬುದೇ ನನ್ನ ಆಶಯ .
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.

No comments:

Post a Comment