ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Monday, July 27, 2015

ಬಡ, ದುರ್ಬಲ ವರ್ಗ ಮತ್ತು ನೊಂದದವರಿಗೆ ಸಾಂತ್ವನ ನೀಡುವ ’ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್(Prajna Counselling Centre)

ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳನ್ನು ಕೇಂದ್ರೀಕರಿಸಿ, ಜಾತ್ಯಾತೀತ ಮನೋಧರ್ಮದಿಂದ ಸಾಮಾಜಿಕ ಅಭಿವೃದ್ಧಿಗಾಗಿ ದುಡಿಯುತ್ತಿರುವ ನಿಸ್ವಾರ್ಥ ಸೇವಾ ಮನೋಭಾವ  ಹೊಂದಿದ ಕೆಲವೇ ಮಂದಿ ಮಹಿಳೆಯರ ಮುಂದಾಳತ್ವದಲ್ಲಿ ನಡೆಯಿತ್ತಿರುವ ನೋಂದಾಯಿತ ಸಮಾಜ ಸೇವಾ ಸಂಸ್ಥೆ. ಈ ಸಂಸ್ಥೆಯ ನಿರ್ದೇಶಕಿ ಫ್ರೊ.ಹಿಲ್ದಾ ರಾಯಪ್ಪನ್ .1987ರಲ್ಲಿ ಈ  ಸಂಸ್ಥೆ ಸ್ಥಾಪನೆಯಾಗಿದ್ದು ,ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಕಳೆದ 28 ವರ್ಷಗಳಿಂದ ಸಾರ್ಥಕ ಸೇವೆಯನ್ನು ನೀಡುತ್ತಾ ಬಂದಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 10ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು 24 ವಿಧದ ಬೇರೆ ಬೇರೆ ಯೋಜನೆಗಳಡಿಯಲ್ಲಿ ಸಂಪರ್ಕ ಹೊಂದಿ ಪರಿಹಾರ ಪಡೆದಿದ್ದಾರೆ.10 ಯೋಜನಾ ಕಛೇರಿಗಳು, ಮೂರು ಸಮೂಹ ಸಂಪನ್ಮೂಲ ಕೇಂದ್ರಗಳು,12 ಕೋಚಿಂಗ್ ಕ್ಲಾಸ್ ಕೇಂದ್ರಗಳು, 250 ಸ್ವಸಹಾಯ ಸಂಘಗಳು, 2 ಸ್ವಸಹಾಯ ಸಂಘಗಳ ಒಕ್ಕೂಟಗಳು ಮತ್ತು ಒಂದು ಪ್ರೇರಣಾ ಮಹಿಳಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ (1,000ಕ್ಕಿಂತ ಮಿಕ್ಕಿದ ಸದಸ್ಯತ್ವದೊಂದಿಗೆ) ಸದ್ಯ ಕಾರ್ಯನಿರತವಾಗಿವೆ.
ನಿರ್ದೇಶಕಿ ಫ್ರೊ.ಹಿಲ್ದಾ ರಾಯಪ್ಪನ್ 
 ಸಂಸ್ಥೆಯ ಕ್ರಿಯಾ ಕೇಂದ್ರ:
ಬಡ, ದುರ್ಬಲ ವರ್ಗ ಮತ್ತು ಅಂತ್ಯಸ್ತರದ ಜನರಿಗೆ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳು, ಯುವಕರು, ಮಾದಕ ವ್ಯಸನಿಗಳು, ವಿಕಲಚೇತನರು ಹಾಗೂ ಹೆಚ್.ಐ.ವಿ/ಏಡ್ಸ್ ಭಾದಿತ ವ್ಯಕ್ತಿಗಳ ಕ್ಷೇಮಾಭಿವೃದ್ಧಿ ಮತ್ತು  ಸಶಕ್ತತೆಗಾಗಿ ಸಮುಧಾಯ ಆಧರಿತ, ಕ್ರಿಯಾತ್ಮಕ ಹಾಗೂ ಜನ ಕೇಂದ್ರಿಕೃತ ಯೋಜನೆಗಳನ್ನು ಹಮ್ಮಿ ಕೊಂಡಿದೆ. 

ಸಂಸ್ಥೆಯ ದೃಷ್ಠಿಕೋನ ಮತ್ತು ಧ್ಯೇಯ:
ಪ್ರತಿಯೊಬ್ಬ ವ್ಯಕ್ತಿಯ ಮಾನವ ಹಕ್ಕುಗಳನ್ನು ಗೌರವಿಸುವ, ರಕ್ಷಿಸುವ ಮತ್ತು ಅವರು ಸ್ವಾಭಿಮಾನದಿಂದ ಬದುಕಲು ನೆರವಾಗುವ ಸಮಾಜವನ್ನು ನಿರ್ಮಾಣ ಮಾಡುವುದು. ಜಾಗೃತಿ ಮತ್ತು ಸಶಕ್ತತಾ ಕಾರ್ಯ ವಿಧಾನಗಳಿಂದ ಸಮಾಜದ ಅಂತ್ಯಸ್ತರದ, ಶೋೀಷಿತ ಮತ್ತು ಮಾನಸಿಕವಾಗಿ ಕ್ಷೋಭೆÉಗೊಳಗಾದ ವ್ಯಕ್ತಿಗಳ ಮಾನವ ಸ್ವಾಭಿಮಾನವನ್ನು ಕಾಪಾಡುವುದು.
                               ಗುರಿ ಮತ್ತು ಉದ್ದೇಶಗಳು:
* ತೀವ್ರತರದ ಮದ್ಯಪಾನ ಮತ್ತು ಮದ್ದಿನ ವ್ಯಸನಿಗಳಿಗೆ ತಡೆಗಟ್ಟಲು ಸಮಾಲೋಚನೆ,ಶುಶ್ರೂಷೆ ಮತ್ತುಪುನರ್ವಸತಿ
ಕಲ್ಪಿಸುವುದು ಮತ್ತು ವ್ಯಸನಿಗಳ ಕುಟುಂಬಗಳಿಗೆ ಬೆಂಬಲ ಸೇವೆಗಳನ್ನು ನೀಡುವುದು.
* ಮಾದಕ ವ್ಯಸನಿಗಳಿಗೆ ಪೂರ್ವಭಾವಿಯಾಗಿ ಸಲಹಾ ಕೇಂದ್ರಗಳನ್ನು ಸ್ಥಾಪಿಸಿ, ಶುಶ್ರೂಷೆಗೆ ವ್ಯವಸ್ಥೆಯನ್ನು. ತೀವ್ರ
ರೀತಿಯಲ್ಲಿ ಪೀಡಿತರಾದ ಮಾದಕ ವ್ಯಸನಿಗಳ ಕುಟುಂಬಕ್ಕೆ ಸೂಕ್ತ ರೀತಿಯ ಬೆಂಬಲ ಮತ್ತು ಆಧಾರವನ್ನು ನೀಡುವುದು.
* ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಲು ಸಾಮಾಜಿಕರಲ್ಲ ಜಾಗೃತಿ ಮೂಡಿಸುವುದು. ಅದಕ್ಕಾಗಿ ವ್ಯಕ್ತಿಗತವಾಗಿ, ಕೌಟುಂಬಿಕವಾಗಿ ಮತ್ತು ಸಾಮೂಹಿಕವಾಗಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಸುದೃಢ ಸಮಾಜ ರಚನೆಗೆ ಪ್ರೋತ್ಸಾಹಿಸುವುದು.
*  ಕೌಟುಂಬಿಕ ದೌರ್ಜನ್ಯಗಳಿಂದ ಪೀಡಿತರಾದ ಮಹಿಳೆ ಮತ್ತು ಕುಟುಂಬಕ್ಕೆ ಕಾನೂನು ನೆರವು ಮತ್ತು ಸೂಕ್ತ ರೀತಿಯ ಸಹಾಯದ ಸೇವೆಯನ್ನು ನೀಡುವುದು.
* ಮಕ್ಕಳ ಸರ್ವಾಂಗೀಣ ಅಭಿವೃದ್ಧಿ, ಹದಿಹರೆಯದ ಸಮಸ್ಯೆಗಳು, ತಾರುಣ್ಯದ ಬಿಕ್ಕಟ್ಟುಗಳು ಮುಂತಾದವುಗಳ ಬಗ್ಗೆ ಸಮಾಜ ಮತ್ತು ಹೆತ್ತವರಿಗೆಲ್ಲ ಅರಿವು ಮೂಡಿಸಿ ಸೂಕ್ತ ಮಾರ್ಗದರ್ಶನ ನೀಡುವುದು. ಅದಲ್ಲದೆ ದಾಂಪತ್ಯ ಜೀವನ, ಮಕ್ಕಳ ಪೋಷಣೆಗಳ ಬಗ್ಗೆ ಅರಿವು ಮೂಡಿಸಿ ಉತ್ತಮವಾದ ಸಮಾಜ ನಿರ್ಮಾಣದಲ್ಲಿ ಸಹಕರಿಸುವುದು ಹಿರಿಯ ನಾಗರಿಕರು ಮತ್ತು ವೃದ್ಧರೊಂದಿಗೆ ಹೊಂದಾಣಿಕೆಯಿಂದ  ಬಾಳುವಂತೆ ಸಮಾಜಕ್ಕೆ ಮಾರ್ಗದರ್ಶನ ಮಾಡುವುದು.
*  ಕೌಟುಂಬಿಕ ಭಾಂಧವ್ಯ, ಪರೀಕ್ಷಾ ಸಿದ್ಧತೆ, ವೃತ್ತಿ ಕೌಶ್ಯಲ್ಯಕ್ಕೆ ನಿರ್ದೇಶನ, ಮುಂತಾದವುಗಳ ಕುರಿತು ಕಾರ್ಯಕ್ರಮ ಸಂಘಟಿಸುವುದು. ಈ ಕಾರ್ಯಕ್ರಮಗಳನ್ನು ಶಾಲೆ ಮತ್ತ್ತಿತರ ಸಂಸ್ಥೆಗಳಿಗೂ ವಿಸ್ತರಿಸುವುದು.
* ವೃತ್ತಿಪರ ಕೌಶಲ್ಯ ಹೆಚ್ಚಿಸಲು ತರಭೇತಿ ನೀಡಿ ಮಾನವ ಸಂಪನ್ಮೂಲದ ಅಭಿವೃದ್ಧಿಯನ್ನು ವೃದ್ಧಿಸುವಂತೆ ಪ್ರಯತ್ನಿಸುವುದು
*  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂವಹನವನ್ನು ಊರ್ಜಿತಗೊಳಿಸುವುದು.
*ಮಹಿಳಾ ಸಂಬಂಧಿ ಸಮಸ್ಯೆಗಳು ಮತ್ತು ವಿವಾದಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗಳನ್ನು ಕೈಗೊಳ್ಳುವುದು ಕ್ರಿಯಾಶೀಲ ಮತ್ತು ಧೈರ್ಯಶಾಲಿ ಮಹಿಳೆಯರಿಗೆ ಸಹಾಯ ಮಾಡಲು ಮಹಿಳಾ ಕೇಂದ್ರವೊಂದನ್ನು ನಿರ್ಮಾಣ ಮಾಡುವುದು.

                               ಸಾಧನೆಯ ಮೈಲುಗಲ್ಲುಗಳು
1. ಮಾನಸಿಕ ಸ್ವಾಸ್ಥದ ರಕ್ಷಣೆಗಾಗಿ ವೃತ್ತಿಪರ ಸೇವೆಯನ್ನು ದೊಡ್ಡ ಮಟ್ಟದಲ್ಲಿ ಪ್ರಾರಂಭಿಸಿದ ಪ್ರಪ್ರಥಮ ಸಮಾಜ ಸೇವಾ ಸಂಸ್ಥೆ
2. ಶಾಲೆಗಳಲ್ಲಿ ಮಕ್ಕಳಿಗೆ ಸಮಾಲೋಚನಾ ಸಲಹಾ ಕೇಂದ್ರಗಳಿಂದ ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡದಲ್ಲಿ ಮೊತ್ತ ಮೊದಲು ಸಂಯೋಜನೆ ಮಾಡಿದ ಸಂಸ್ಥೆ
3. ಮನಶಾಸ್ತ್ರೀಯವಾಗಿ ಮಕ್ಕಳನ್ನು ಪರೀಕ್ಷಿಸಿ, ಮಕ್ಕಳಿಗೆ ಮಾರ್ಗದರ್ಶನ ನೀಡಿ ದಾರಿ ತೋರುವ ಕ್ಲಿನಿಕ್‍ನ್ನು ತೆರೆದ ಸಂಸ್ಥೆ
4. ಈವರೆಗೆ ಭಾವನಾತ್ಮಕ ಮತ್ತು ಮಾನಸಿಕ ಖಿನ್ನತೆಯಿಂದ ಭಾದಿತರಾದ 9,893 ಮಂದಿ ವಯಸ್ಕರು ಮತ್ತು ಮಕ್ಕಳ ಸಮಸ್ಯೆಗಳಿಗೆ ಪರಿಹಾರ ನೀಡಿದ ಸಂಸ್ಥೆ.
                    ಪ್ರಜ್ಞಾ ಕೌಟುಂಬಿಕ ಸಲಹಾ ಕೇಂದ್ರ
 1989ರಲ್ಲಿ ಪ್ರಾರಂಭ – ಭಾರತ ಸರಕಾರದ ಕೇಂದ್ರ ಸಮಾಜ ಕಲ್ಯಾಣ ಮಂಡಳಿಯಿಂದ  ಪ್ರಾಯೋಜಿತವಾಗಿದೆ
ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನೆದುರಿಸುತ್ತಿರುವ ಮಹಿಳೆ ಮತ್ತು ಕುಟುಂಬಗಳಿಗೆ ಸಮಾಲೋಚನೆ ಮತ್ತು ಸಹಾಯದ ಮೂಲಕ ಪರಿಹಾರ ದೊರಕಿಸಿಕೊಡುವುದು. ಸಾಮರಸ್ಯದಿಂದ ಬಾಳುವಂತೆ ಮಾರ್ಗದರ್ಶನ ನೀಡುವುದು.
 ಸಾಧನೆಗಳು:
1. ಈಗಾಗಲೇ 26 ವರ್ಷಗಳ ಸಾರ್ಥಕ ಸೇವೆಯನ್ನು ನೀಡಿದೆ
2. ಕುಬಂಬ ಸಲಹಾ ಕೇಂದ್ರದ ಸೇವಾ ವಿಭಾಗವನ್ನು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ   ಪ್ರಾರಂಭಿಸಲಾಗಿತ್ತು.
3. 1996 ರಲ್ಲಿ ವಿವಾಹಿತ ಮಹಿಳೆಯರು ಅನುಭವಿಸುವ ಹಿಂಸೆಯ ಬಗ್ಗೆ ಸಮಾಜೋ – ಮಾನಸಿಕ ಸಂಶೋಧನಾತ್ಮಕ ಅಧ್ಯಯನವನ್ನು ಕೈಗೊಳ್ಳಲಾಗಿದೆ.
4. ಸುಮಾರು 6,121 ಮಂದಿ ನೊಂದ ಮಹಿಳೆಯರು ಮತ್ತು ಕುಟುಂಬಗಳ ಸಮಸ್ಯೆಗಳನ್ನು ಈವರೆಗೆ ಕೈಗೆತ್ತಿಕೊಳ್ಳಲಾಗಿದ್ದು, ಪರಿಹಾರ, ಸಹಾಯ ಮತ್ತು ಮಾರ್ಗದರ್ಶನಗಳನ್ನು ನೀಡಲಾಗಿದೆ.
5. ಈವರೆಗೆ 50 ಕಾನೂನು ನೆರವು ಮತ್ತು ಕಾನೂನು ಸೇವಾ ಶಿಬಿರಗಳನ್ನು ಶಿಬಿರಗಳನ್ನು ಏರ್ಪಡಿಸಲಾಗಿದೆ. ಗ್ರಾಮಾಂತರ ಪ್ರದೇಶದ ಸುಮಾರು 4,935 ಮಂದಿ ಬಡವರು ಮತ್ತು ಮಹಿಳೆಯರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ್ನು ಏರ್ಪಡಿಸಲಾಗಿದೆ.
 ಮದ್ಯ ವರ್ಜನಾ ಚಿಕಿತ್ಸಾ ಕೇಂದ್ರ
1992 ರಲ್ಲಿ ಪ್ರಾರಂಭ:
ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವಾಲಯದಿಂಧ ಪ್ರಾಯೋಜಿತವಾಗಿದೆ. ಮದ್ಯವ್ಯಸನಿಗಳು ಮತ್ತು ಮಾದಕ ವಸ್ತು ಸೇವೆನೆಯಿಂದ ಪೀಡಿತರಾದ ರೋಗಿಗಳಿಗೆ ಬಹು ಪ್ರಕಾರಗಳ ಮಾನಸಿಕ ಮತ್ತು ದೈಹಿಕ ಚಿಕಿತ್ಸಾ ಸೇವೆಯನ್ನು ನೀಡಿ ಪುನರ್ವಸತಿ ಗೊಳಿಸಿ ಅವರು ಮತ್ತೆ ಮೊದಲಿನಂತೆ ಆರೋಗ್ಯ ಹೊಂದುವ ರಕ್ಷಣಾತ್ಮಕ ಸೇವೆ ನೀಡುವ ಗುರಿ ಹೊಂದಿದೆ.


20 ವರ್ಷಗಳ ಸಾರ್ಥಕ ಸೇವೆಯನ್ನು ವ್ಯಸನ ಪೀಡಿತ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ನೀಡಿದೆ.
 ಕರ್ನಾಟಕ ರಾಜ್ಯದಲ್ಲೇ ಮೊತ್ತ ಮೊದಲು ಮದ್ಯ ವಸ್ಯನಿಗಳಿಗೆ ಮದ್ಯವರ್ಜನಾ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿದ ಹೆಗ್ಗಳಿಕೆ ಇದಕ್ಕಿದೆ.
.ಗ್ರಾಮಾಂತರ ಪ್ರದೇಶ, ಕೊಳಚೆ ಪ್ರದೇಶಗಳ ಬಡ ಸಮುದಾಯದಲ್ಲಿರುವ ಮದ್ಯವ್ಯಸನಿಗಳಿಗಾಗಿ ಸಮುದಾಯ ಆಧಾರಿತ ಮದ್ಯದ ವರ್ಜನಾ ಶಿಬಿರ ಕರ್ನಾಟಕದಲ್ಲಿ ಮೊತ್ತ ಮೊದಲು ಸಂಘಟಿಸಿದ ಸಂಸ್ಥೆಯಿದು.
.ಮದ್ಯ ವ್ಯಸನಿ ಮಹಿಳೆಯರ ಬಗ್ಗೆ ಸಮಾಜ ಶಾಸ್ತೀಯವಾದ ಸಂಶೋಧನಾತ್ಮಕ ಅಧ್ಯಯನವನ್ನು ನಡೆಸಿದೆ. 
 ಮದ್ಯ ವ್ಯಸನದ ದುಷ್ಟರಿಣಾಮಗಳ ಕುರಿತು, 1995 ರಲ್ಲಿ ‘ಮದ್ಯವ್ಯಸನ ಮತ್ತು ಕುಟುಂಬ’ ಎಂಬ ಅಧ್ಯಯನವನ್ನು ಕೈಗೊಳ್ಳಲಾಗಿದೆ.
 ಈವರೆಗೆ ಸುಮಾರು 16651 ಮದ್ಯವ್ಯಸನಿಗಳನ್ನು ವ್ಯಸನ ಮುಕ್ತಗೊಳಿಸಲಾಗಿದೆ. ಅವರಲ್ಲಿ 18,318 ಮಂದಿ ಗಂಡಸು ಮತ್ತು 267 ಮಂದಿ ಹೆಂಗಸರು ಇದ್ದಾರೆ. 177 ಮಂದಿ ಮಾದಕ ವಸ್ತು ಸೇವನೆಯಿಂದ ಪೀಡಿತರಾದವರನ್ನು ವ್ಯಸನ ಮುಕ್ತಗೊಳಿಸಲಾಗಿದೆ. 4558 ಮಂದ ಮದ್ಯವ್ಯಸನ ಪೀಡಿತರನ್ನು ಪುನ: ಎರಡನೆಯ ಭಾರಿ ಶುಶ್ರೂಷೆಗೊಳಪಡಿಸಿ ಸೇವೆ ಸಲ್ಲಿಸಲಾಗಿದೆ.
 ಈವರೆಗೆ 59 ಮದ್ಯಮುಕ್ತ ಶಿಬಿರಗಳನ್ನು ಏರ್ಪಡಿಸಲಾಗಿದೆ. 10ದಿನಗಳ ಕಾಲ ನಡೆಸಿದ ಈ ಪ್ರತೀ ಶಿಬಿರಗಳಲ್ಲಿ ಜಾಗೃತಿ ಮೂಡಿಸಲಾಗಿದೆ. 1624 ವ್ಯಸನಿಗಳು ಭಾಗವಹಿಸಿದ್ದು ಸುಮಾರು 68349 ಮಂದಿಯಲ್ಲಿ ಅರಿವು ಮೂಡಿಸಿದೆ.

ಚೈಲ್ಡ್ ಫಂಡ್ ಇಂಡಿಯಾ

1997ರಲ್ಲಿ ಚೈಲ್ಡ್ ಫಂಡ್ ಇಂಡಿಯಾ ಯೋಜನೆಯನ್ನು ಪ್ರಜ್ಞಾ ಸಲಹಾ ಕೇಂದ್ರದಲ್ಲಿ ಸ್ಥಾಪಿಸಲಾಯಿತು. ಇದು ದಾನಿಗಳಿಂದ ಸಂಗ್ರಹಿತವಾದ ನಿಧಿ ಮಂಗಳೂರಿನ ಸುತ್ತಮುತ್ತಲಿನ ಗ್ರಾಮಾಂತರ ಮತ್ತು ಕೊಳಚೆ ಪ್ರದೇಶದ ಆರ್ಥಿಕವಾಗಿ ತೀರಾ ಹಿಂದುಳಿದವರ ಕುಟುಂಬದ ಮಕ್ಕಳ ಶಿಕ್ಷಣ ವೈದ್ಯಕೀಯ ಮತ್ತು ಕುಟುಂಬದ ಅಭಿವೃದ್ಧಿಗಾಗಿ ನೀಡುವ ಸಹಾಯವಾಗಿದೆ. ಸುಮಾರು 17 ಕೊಳಚೆ ಪ್ರದೇಶದ ಮಕ್ಕಳಿಗೆ ಈ ಸೇವೆ ಸಂದಾಯವಾಗಿದೆ. 
 ಸುಮಾರು 236 ಕುಟುಂಬಗಳಿಗೆ ಮನೆಕಟ್ಟಲು, ಸುಮಾರು 435 ಕುಟುಂಬಗಳಿಗೆ ಮನೆಯ ದುರಸ್ತಿಗೆ, ಸುಮಾರು 500 ಕುಟುಂಬಗಳಿಗೆ ಶೌಚಾಲಯ ನಿರ್ಮಾಣಕ್ಕೆ ನೆರವು ನೀಡಿದೆ. ಸುಮಾರು 1500 ಮಕ್ಕಳಿಗೆ ಶಿಕ್ಷಣದ ಮೂಲಭೂತ ಸದ್ರಿ ನಿದಿಯಡಿ ಅಗತ್ಯಗಳಿಗಾಗಿ ಆರ್ಥಿಕ ಸಹಾಯ ನೀಡಿದೆ. ಸುಮಾರು 500 ಮಂದಿ ಮಕ್ಕಳಿಗೆ ಉಚ್ಫ ಶಿಕ್ಷಣ, ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣಕ್ಕಾಗಿ ಸಹಾಯವನ್ನು ನೀಡಿದೆ.
ಸುಮಾರು 450 ಮಂದಿ ಮಹಿಳೆಯರಿಗೆ ಸ್ವಂತ ಗಳಿಕೆಯನ್ನು ಮಾಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉದ್ಯಮಶೀಲರನ್ನಾಗಿ ಮಾಡಲು ನೆರವನ್ನು ನೀಡಿದೆ. ಸುಮಾರು 150 ಸ್ವ-ಸಹಾಯ ಸಂಘಗಳನ್ನು ಸ್ಥಾಪಿಸಲಾಗಿದೆ. ಉಳಿತಾಯ ಮಾಡುವ ಅಭ್ಯಾಸವನ್ನು ಮೂಡಿಸಿದ್ದಲ್ಲದೆ ಮಿತವ್ಯಯ ಮಾಡುವಂತೆ ಸಲಹೆ ನೀಡುತ್ತಿದೆ. ಅಭ್ಯುದಯ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟವನ್ನು ರಚಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಆರ್ಥಿಕ ವ್ಯವಹಾರವು ರೂ. 32 ಲಕ್ಷ ದಾಟಿದೆ.
ಸುಮಾರು 5000 ಕುಟುಂಬಗಳಿಗೆ ಮಕ್ಕಳ ರಕ್ಷಣೆ ಮತ್ತು ಮಕ್ಕಳ ಭಾಗವಹಿಸುವಿಕೆಪೋಷಣೆಯ ಬಗ್ಗೆ ಸರಿಯಾದ ತಿಳುವಳಿಕೆಯನ್ನು ನೀಡಲಾಗಿದೆ. ಮುಖ್ಯವಾಗಿ ಬಾಲಕಾರ್ಮಿಕತೆ ಶಾಲೆ ತೊರೆಯುವ ಮಕ್ಕಳ ಬಗ್ಗೆ, ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಶೋಷಣೆಯ ಬಗ್ಗೆ ಅರಿವನ್ನು ಮೂಡಿಸಿದೆ. ಮಕ್ಕಳ ಹಕ್ಕುಗಳ ಬಗ್ಗೆಯೂ ಸಮಾಜದಲ್ಲಿ ತಿಳುವಳಿಕೆ ಮೂಡುವಂತೆ ಪ್ರಯತ್ನಿಸಿದೆ.

ಬಡ ಮಹಿಳೆಯರ ಸ್ವ-ಸಹಾಯ ಸಂಘಗಳು
ಸ್ವ-ಸಹಾಯ ಸಂಘಗಳ ರಚನೆ, ನಿರ್ವಹಣೆ ಮತ್ತು ಬ್ಯಾಂಕ್ ಲಿಂಕೇಜ್ ಚಟುವಟಿಕೆಯನ್ನು 1995ರಲ್ಲಿ ಪ್ರಾರಂಭಿಸಲಾಯಿತು ಇದಕ್ಕೆ ಓಂಃಂಖಆ, ಓಔಗಿIಃ, ಓಈSಂ, ಊUಐ, ಒSಅಆ, ಉಔಏ, ಏಏS ಮುಂತಾದುವು ಸಂಸ್ಥೆಗಳ ಸಹಯೊಗ ಲಭಿಸಿದೆ. ಆರ್ಥಿಕವಾಗಿ ದುರ್ಬಲವಾದ ಕುಟುಂಬಗಳನ್ನು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಶಕ್ತರಾಗುವಂತೆ ಮಾಡುವ ದ್ಯೋಯೊದ್ದೇಶ ಹೊಂದಿದೆ. 

ನಬಾರ್ಡ್ ಹಾಗೂ ದ.ಕ.ಜಿಲ್ಲಾ ಪಂಚಾಯತ್‍ನ ಮಹಿಳೆ ಮತ್ತು ನವೀಕರಿಸಿದ ಇಂದನ ಅಭಿವೃದ್ಧಿ ಯೋಜನೆಯಡಿ 60 ಸ್ವ-ಸಹಾಯ ಸಂಘಗಳ ಸ್ಥಾಪನೆ. ಓಔಗಿIಃ/ಓಇSಂ ಬೆಂಗಳೂರು ಮತ್ತು ಊUಐ ಸಂಸ್ಥೆಯ ಪ್ರಾಯೋಜಕತ್ವದಿಂದ 75 ಸ್ವ-ಸಹಾಯ ಸಂಘಗಳ ಸ್ಥಾಪನೆ. ಕರ್ನಾಟಕ ಸರಕಾರದ ಹಿರಿಯ ನಾಗರಿಕರು ಮತ್ತು ವಿಕಲ ಚೇತನರು ಸಚಿವಾಲಯದಿಂದ ಪ್ರಾಯೋಜಿಸಲ್ಪಟ್ಟ 10 ಸ್ವ-ಸಹಾಯ ಗುಂಪುಗಳ ರಚನೆ. ಅಭ್ಯುದಯ ಮತ್ತು ಪ್ರೇರಣಾ ಎಂಬ ಹೆಸರಿನ 2 ಪ್ರತ್ಯೇಕ ಸ್ವ ಸಹಾಯ ಸಂಘಗಳ ಒಕ್ಕೂಟಗಳನ್ನು ರಚಿಸಿ ನೋಂದಾಯಿಸಲಾಗಿದೆ. ಪ್ರಸ್ತುತ ಒಟ್ಟು 242 ಸ್ವ-ಸಹಾಯ ಗುಂಪುಗಳಲ್ಲಿ 2,432 ಮಂದಿ ಸದಸ್ಯರನ್ನು ಹೊಂದಿದೆ.  

ಪರಿತ್ಯಕ್ತ ಮಕ್ಕಳ ಗುಂಪು ಪೋಷಕ ರಕ್ಷಣಾ ಗೃಹ
 1999 ರಲ್ಲಿ ಸ್ಥಾಪನೆ - ಕರ್ನಾಟಕ ರಾಜ್ಯ ಶಿಶು ಕಲ್ಯಾಣ ಸಂಸ್ಥೆ ಬೆಂಗಳೂರು ಇದರ ಬೆಂಬಲದೊಂದಿಗೆ ವಿಘಚಿತ ಕುಟುಂಬಗಳಿಂದ ತಿರಸ್ಕøತರಾದ ಮಕ್ಕಳು, ಪರಿತ್ಯಕ್ತ ಮಕ್ಕಳು ಮತ್ತು ಶೋಷಿತ ಮಕ್ಕಳಿಗೆ ಪರ್ಯಾಯವಾದ ಗುಂಪು ಪೋಷಕ ರಕ್ಷಣಾ ಗೃಹವನ್ನು ನಿರ್ವಹಿಸುತ್ತಿದೆ. ಬಾಲನ್ಯಾಯ ಕಾಯ್ದೆ 2000 ಮತ್ತು ಪರಿಷ್ಕøತ ಕಾಯ್ದೆ 2006ರಡಿ ನೋಂದಾಯಿಸಲ್ಪಟ್ಟಿದೆ.

ಈ ಮಕ್ಕಳಿಗೆ ವಿಶೇಷ ರಕ್ಷಣೆ ಮತ್ತು ಸಹಾಯವನ್ನು ಈ ರಕ್ಷಣಾ ಧಾಮದ ಮಾತೆಯರಿಂದ ನೀಡಲಾಗಿದೆ. ಉಚಿತ ಶಿಕ್ಷಣದೊಂದಿಗೆ 75ಕ್ಕೂ ಮಕ್ಕಳಿಗೆ ಆಶ್ರಯ ಮತ್ತು ರಕ್ಷಣೆಯನ್ನು ನೀಡಿ ಕೌಟುಂಬಿಕ ಹಾಗೂ ಸಾಮಾಜಿಕ ಪುನರ್ವಸತಿ ಕಲ್ಪಿಸಿದೆ.  

 ಬಾಲಕಾರ್ಮಿಕರ ವಿಶೇಷ ಶಾಲೆ, ಸೇತುಬಂಧ ಕಾರ್ಯಕ್ರಮ, ಚಿಣ್ಣರ ತಂಗುಧಾಮಗಳು
1997ರಲ್ಲಿ ಸ್ಥಾಪನೆ – ಕರ್ನಾಟಕ ಸರಕಾರದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮುಂತಾದ ಇಲಾಖೆಗಳ ನೆರವು. ಶಿಕ್ಷಣದ ಮಹತ್ವನ್ನು ವಿಸ್ತಾರವಾಗಿ ಮನಗಾನಿಸುವುದು, ಬಾಲಕಾರ್ಮಿಕ ಪದ್ಧತಿಯನ್ನು ತಡೆಯುವುದು, ಶಾಲೆಯಿಂದ ಹೊರಗುಳಿಯುವ, ಶಾಲೆ ತ್ಯಜಿಸುವ ಮಕ್ಕಳಿಗೆ ವಸತಿಯುತ ಪ್ರೇರಣಾ ತರಭೇತಿ ನೀಡಿ ಮಕ್ಕಳನ್ನು ಸಾಮಾನ್ಯ ಶಾಲೆಗಳಿಗೆ ಪುನರ್ ದಾಖಲಾತಿ ಮಾಡಿಸಿ ಶೈಕ್ಷಣಿಕ ಪುನರ್ವಸತಿಯೊಂದಿಗೆ ಮುಖ್ಯವಾಹಿನಿಗೆ ಸೇರಿಸುವುದು.

ಕರ್ನಾಟಕದಲ್ಲಿ ಮೊತ್ತ ಮೊದಲು ಬಾಲ ಕಾರ್ಮಿಕರಿಗೆ ವಿಶೇಷ ಶಾಲೆಯನ್ನು ತೆರೆದ ಸಂಸ್ಥೆಯಿದು. ಪುನರ್ವಸತಿ ಕಲ್ಪಿಸಲಾದ ಬಾಲಕಾರ್ಮಿಕರ ವೇದಿಕೆಯನ್ನು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (I.ಐ.ಔ.) ನಿರ್ದೇಶಕರಾದ ಡಾ||ಮೇರಿ ಜಾನ್‍ಸನ್ 2000ರಲ್ಲಿ ಪ್ರಜ್ಞಾದಲ್ಲಿ ಉದ್ಫಾಟಿಸಿದರು.
ಈವರೆಗೆ 814 ಮಕ್ಕಳು (440 ಮಂದಿ ಗಂಡು ಮಕ್ಕಳು, 374 ಮಂದಿ ಹೆಣ್ಣು ಮಕ್ಕಳು)ಇಲ್ಲಿ ತರಭೇತು ಪಡೆದು ಸಾಮಾನ್ಯ ಶಾಲೆಗೆ ದಾಖಲಿಸುವ ಮೂಲಕ ಮುಖ್ಯವಾಹಿನಿಗೆ ಸೇರ್ಪಡೆಗೊಳಿಸಲಾಗಿದೆ.  

‘ಸಾಂತ್ವನ’ ಮಹಿಳಾ ಸಹಾಯವಾಣೆ
2001ರಲ್ಲಿ ಸ್ಥಾಪನೆ – ದಿನದ 24 ಗಂಟೆಗಳ ಕಾಲವೂ ಹಿಂಸೆ ಮತ್ತು ದೌರ್ಜನ್ಯಕ್ಕೊಳಗಾದ ಮಹಿಳೆಯರು ನೆರವಿಗಾಗಿ ಶುಲ್ಕ ಮುಕ್ತ ಕರೆ ಮಾಡುವ ಸೌಲಭ್ಯವಿದೆ. ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ ಸರಕಾರದ ಸಹಾಯದಿಂದ ನಡೆಯುತ್ತದೆ. ಮಾನಸಿಕ ಒತ್ತಡಕ್ಕೊಳಗಾದ ಮಹಿಳೆ, ವರದಕ್ಷಿಣೆಯ ಹಿಂಸೆ ಮತ್ತು ಕೌಟುಂಬಿಕ ಸಮಸ್ಯೆಗೊಳಗಾದ ಮಹಿಳೆ, ಲೈಂಗಿನ ದೌರ್ಜನ್ಯ ಮತ್ತು ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಸೂಕ್ತ ರೀತಿಯ ಸಲಹೆ ಮತ್ತು ಸಹಾಯ ನೀಡುತ್ತದೆ.

ಪೋಲೀಸರ ಸಹಾಯ ಮತ್ತು ಉಚಿತ ಕಾನೂನು ನೆರವು, ರಾಜ್ಯ ಸರಕಾರದಿಂದ ಮಾನ್ಯತೆ ಪಡೆದು ರಾಜ್ಯ ಮಟ್ಟದ ಸಮಾವೇಶ ಮತ್ತು ತರಭೇತಿ ಕಾರ್ಯಕ್ರಮವನ್ನು ಪ್ರಜ್ಞಾದಲ್ಲಿ ನೆರವೇರಿಸಿದೆ. ಈ ತರಭೇತಿಯಲ್ಲಿ 353 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರುಗಳಿಗೆ, ಸ್ವಯಂ ಸೇವಾ ಸಂಸ್ಥೆಗಳ ನಿರ್ದೇಶಕರಿಗೆ ಮತ್ತು ಸಾಂತ್ವನದ ಸಲಹೆಗಾರರಿಗೆ, ಸಮಾಜ ಸೇವಾ ಕಾರ್ಯಕರ್ತರಿಗೆ ತರಭೇತಿ ನೀಡಿದೆ.
ಈವರೆಗೆ 2,055 ಮಹಿಳಾ ಪ್ರಕರಣಗಳ ಸಮಸ್ಯೆಗಳನ್ನು ನೋಂದಾಯಿಸಿ ತುರ್ತು ಸಮಾಲೋಚನೆಯೊಂದಿಗೆ ಪೊಲೀಸ್ ಮತ್ತು ಕಾನೂನು ನೆರವು ಮತ್ತು ಬೆಂಬಲ ಸೇವೆ ನೀಡಿದೆ.

ಬಾಲಕಿಯರ ಅರ್ಹ ಸಂಸ್ಥೆ
2001ರಲ್ಲಿ ಸಂಸ್ಥೆಯನ್ನು ಪ್ರಾರಂಬಿಸಲಾಯಿತು– ಕರ್ನಾಟಕ ಸರಕಾರದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೆರವು. ನಿರ್ಲಕ್ಷಿತ, ನಿರ್ಗತಿಕ, ಪರಿತ್ಯಕ್ತರಾದ, ಶೋಷಣೆಗೊಳಗಾದ, ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳಿಗೆ ಆಶ್ರಯ ತಾಣ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ದಾಖಲಿಸಲ್ಪಟ್ಟ ಹೆಣ್ಣು ಮಕ್ಕಳಿಗೆ ಇಲ್ಲಿ ಆಶ್ರಯ ನೀಡಲಾಗುತ್ತದೆ. ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2000 ಮತ್ತು ತಿದ್ದುಪಡಿ ಕಾಯ್ದೆ 2006 ಕಾನೂನಿಗನುಸಾರವಾಗಿ ಇಲ್ಲಿ ಮಕ್ಕಳನ್ನು ಪೋಷಿಸಲಾಗುತ್ತದೆ. ಈವರೆಗೆ ಒಟ್ಟು 189 ನಿರ್ಲಕ್ಷಿತ, ಶೋಷಣೆಗೊಳಗಾದ, ನಿರ್ಗತಿಕ ಬಾಲಕಿಯರಿಗೆ ಅವಶ್ಯ ಆಶ್ರಯ, ರಕ್ಷಣೆ, ವಿದ್ಯಾಭ್ಯಾಸ, ವೃತ್ತಿಪರ ತರಭೇತಿ ಇನ್ನಿತರ ಅವಶ್ಯ ಸೇವೆ ನೀಡಿ ಕೌಟುಂಬಿಕ ಹಾಗೂ ಸಾಮಾಜಿಕ ಪುನರ್ವಸತಿ ಕಲ್ಪಿಸಿದೆ.

 ಸಾಧನೆಗಳು:
 ಕರ್ನಾಟಕ ಸರಕಾರದ ಮಾನ್ಯತೆ ಪಡೆದು 1986 ರ ಈ ಬಾಲನ್ಯಾಯ ಕಾಯ್ದೆ 1986ರಡಿಯಲ್ಲಿ ಮಾನ್ಯತೆಯನ್ನು ಪಡೆದಿದೆ. ನಂತರ ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2000 ಮತ್ತು ತಿದ್ದುಪಡಿ ಕಾಯ್ದೆ 2006 ಕಾಯ್ದೆಯಡಿ ನೊಂದಾಯಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿ ಸಂಕಷ್ಟಕ್ಕೊಳಗಾದ  ಹೆಣ್ಣು ಮಕ್ಕಳ ಪುನರ್ವಸತಿಗಾಗಿಯೇ ಇರುವ ಏಕೈಕ ಸಂಸ್ಥೆ ಈ ಅರ್ಹಸಂಸ್ಥೆ.
 ರಕ್ಷಣೆ, ಆಶ್ರಯ, ಶಿಕ್ಷಣ, ತರಭೇತಿ, ಕೌಟುಂಬಿಕ ಮತ್ತು ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಸಹಕರಿಸುತ್ತದೆ.
 200ಕ್ಕೂ ಹೆಚ್ಚಿನ ಪರಿತ್ಯಕ್ತ ಹುಡುಗಿಯರನ್ನು ಇಲ್ಲಿ ತರಭೇತುಗೊಳಿಸಿ ಉತ್ತಮ ಭವಿಷ್ಯ ರೂಪಿಸಿದೆ.
 ಇಲ್ಲಿರುವ ಹೆಣ್ಣು ಮಕ್ಕಳಲ್ಲಿ 6-12, 12-15 ಮತ್ತು 15-18 ವರ್ಷದವರೆಗಿನ ವಯಸ್ಸಿನ ಮೂರು ಗುಂಪುಗಳಾಗಿ ವಿಂಗಡಿಸಿ ಈ ಗುಂಪುಗಳಿಗೆ ಪ್ರತ್ಯೇಕ ರೀತಿಯಲ್ಲಿ ಆರೈಕೆಯನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ.

ನಿರ್ಗತಿಕ ಮಕ್ಕಳ ಕುಟೀರ

2002ರಲ್ಲಿ ಸ್ಥಾಪನೆ
ಕರ್ನಾಟಕದ ಸರಕಾರದ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ದ.ಕ.ಜಿಲ್ಲಾ ಪಂಚಾಯತ್ ಮುಖಾಂತರ ಅನುದಾನ ಪಡೆಯುತ್ತಿದೆ.
ಅನಾಥ, ನಿರ್ಗತಿಕ ಪರಿತ್ಯಕ್ತ, ಏಕಪೋಷಕರಿರುವ ಮಕ್ಕಳಿಗೆ ಉಚಿತ ಆಹಾರ, ಆರೈಕೆ, ವೈದ್ಯಕೀಯ ನೆರವು ಹಾಗೂ ವಿದ್ಯಾಭ್ಯಾಸ ನೀಡಿ ಪುನರ್ವಸತಿ ಕಲ್ಪಿಸುವ ಗುರಿ ಹೊಂದಿದೆ.
ಸಾಧನೆ:
ಒಂದು ಮನೆಯಲ್ಲಿ 8 ಮಂದಿ ಮಕ್ಕಳು ಇರುವ ಮೂರು ಪ್ರತ್ಯೇಕ ಮನೆಗಳಿಗೆ ಪ್ರತೀ ಮಕ್ಕಳಿಗೆ ವೈಯಕ್ತಿಕ ಗಮನ ನೀಡುವುದಕ್ಕಾಗಿ ಗೃಹಮಾತೆಯರಿಂದ ನೈಜ ಕುಟುಂಬ ವಾತವರಣದಲ್ಲಿ ಪ್ರೀತಿಯ ಆರೈಕೆ ಪಡೆದು ಸುಮಾರು 100ಕ್ಕೂ ಹೆಚ್ಚಿನ ಮಕ್ಕಳು ಈವರೆಗೆ ಇಂತಹ ಮನೆಗಳಲ್ಲಿ ಆಶ್ರಯ ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.

ನೊಂದ ಮಹಿಳೆಯರಿಗೆ ಅಲ್ಫಾವಧಿ ವಸತಿ ಗೃಹ:

2004ರಲ್ಲಿ ಸ್ಥಾಪನೆ
ಕೇಂದ್ರ ಸರಕಾರದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕೇಂದ್ರ ಸಮಾಜ ಕಲ್ಯಾಣ ಮಂಡಳಿ ಮುಖಾಂತರ ಅನುದಾನ ಪಡೆಯುತ್ತಿದ್ದು. ಕೌಟುಂಬಿಕ ಹಿಂಸೆ, ವೈವಾಹಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಲೈಂಗಿಕ ಹಿಂಸೆಗಳಿಗೊಳಗಾದ ಮಹಿಳೆ ಮತ್ತು ಬಾಲಕಿಯರಿಗೆ ಮಾನಸಿಕ ಅಭದ್ರತೆ ಕಾಡುವ ಸಂದರ್ಭದಲ್ಲಿ ಅವರಿಗೆ ರಕ್ಷಣೆಯ ಜೊತೆಗೆ ತತ್ಕಾಲಕ್ಕೆ ಒಂದು ಸ್ನೇಹಶೀಲ ವಾತಾವರಣದ ಅವಶ್ಯಕತೆ ಮತ್ತು  ಆಶ್ರಯವನ್ನು ಇದು ಪೂರೈಸುತ್ತದೆ.

ಸಾಧನೆಗಳು:
ರಕ್ಷಣೆ, ಆಶ್ರಯ, ಸಲಹೆ, ವೈದ್ಯಕೀಯ ನೆರವು, ವೃತ್ತಿಪರ ತರಭೇತಿ, ಉದ್ಯೋಗ ಕಲ್ಪಿಸುವುದು, ಪೊಲೀಸ್ ಮತ್ತು ಕಾನೂನು ನೆರವು ನೀಡುತ್ತದೆ. ನಿವಾಸಿಗಳಿಗೆ ಉಪಯುಕ್ತ ತರಭೇತಿ ನೀಡಿ ಅವರನ್ನು ಉದ್ಯೋಗಶೀಲರನ್ನಾಗಿ ಮಾಡಿದೆ. ಈವರೆಗೆ ದೈಹಿಕ ಮತ್ತು ಮಾನಸಿಕ ಹಿಂಸೆಗೊಳಗಾದ 1090 ಮಂದಿ ಹೆಂಗಸರು ಮತ್ತು ಬಾಲಕಿಯರನ್ನು ಪತಿ, ತಂದೆ-ತಾಯಿಗಳು, ಪೋಷಕರ ವಶಕ್ಕೆ ನೀಡುವ ಮೂಲಕ ಹಾಗೂ ಸಾಮಾಜಿಕವಾಗಿ ಪುನರ್ವಸತಿ ಕಲ್ಪಿಸಿದೆ. ಪರಿತ್ಯಕ್ತ ಮತ್ತು ನಿರ್ಗತಿಕ ಮಹಿಳೆಯರಿಗೆ ಉದ್ಯೋಗ ನೀಡುವಲ್ಲಿ ಸಹಕರಿಸಿದೆ. 10ಕ್ಕೂ ಹೆಚ್ಚು ಅವಿವಾಹಿತರಿಗೆ ವಿವಾಹದ ಮೂಲಕ ಶಾಶ್ವತ ಪುನರ್ವಸತಿ ಕಲ್ಪಿಸಿದೆ. ಸಂಸ್ಥೆಯ ವೃತ್ತಿಪರ ತರಭೇತಿ ಕೇಂದ್ರದಲ್ಲಿ ಕೈಕಸಬುಗಳ ತರಭೇತಿಯ ಜೊತೆಗೆ ಸಿದ್ಧವಸ್ತುಗಳ ಉತ್ಪಾದನೆಯನ್ನು ಮಹಿಳೆಯರಿಂದ ಮಾಡಲಾಗುತ್ತಿದೆ.

 ಸಂಕಷ್ಟಕ್ಕೊಳಗಾದ ಮಹಿಳೆಯರಿಗೆ ಸ್ವಾಧಾರ ಕೇಂದ್ರ

2005ರಲ್ಲಿ ಸ್ಥಾಪನೆ
ಕೇಂದ್ರ ಸರಕಾರದ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆರ್ಥಿಕ ನೆರವು ಪಡೆಯುತ್ತಿದೆ. ಸಂಕಷ್ಟಕ್ಕೊಳಗಾಗಿ ಅಸಹಾಯಕ ಪರಿಸ್ಥಿತಿಯಿರುವ ವಿಧವೆಯರು, ಪರಿತ್ಯಕ್ತ ಮಹಿಳೆಯರು, ಜೈಲಿನಿಂದ ಬಿಡುಗಡೆ ಹೊಂದಿದವರು. ಲೈಂಗಿಕ ದೌರ್ಜನ್ಯಕ್ಕೊಳಗಾದವರು, ಅಪರಾಧಿ ಪ್ರಜ್ಞೆಯಿಂದ ನರಳುವ ಮಹಿಳೆಯರು, ಮಾನವ ಸಾಗಾಣಿಕೆಯ ಜಾಲಕ್ಕೆ ಸಿಕ್ಕಿದವರು, ವಲಸಿಗರು, ನಿರಾಶ್ರಿತರು ಮುಂತಾದವರಿಗೆ ಒಂದು ಆಧಾರ ಕೇಂದ್ರವಾಗಿದೆ.

ಎಚ್.ಐ.ವಿ./ಏಡ್ಸ್ ನಿಯಂತ್ರಣ ಮತ್ತು ಪ್ರಚಾರ
 2006 ರಲ್ಲಿ ಸ್ಥಾಪನೆ
ಸ್ವೀಡನ್ನಿನ SIಆಂ ಸಂಸ್ಥೆಯ ಪ್ರಾಯೋಜಕತ್ವವಿದೆ. ಲೈಂಗಿಕ ಸ್ವಾಸ್ಥ ರಕ್ಷಣೆಯ ಹಕ್ಕು ಮತ್ತು ಪರಿಣಾಮಕಾರಿಯಾದ ಸಂತಾನೋತ್ಪತ್ತಿಯ ಆರೋಗ್ಯ ಅರಿವು ಮೂಡಿಸಿ ಆರೋಗ್ಯ ಪೂರ್ಣ ಸಮಾಜದ ರಚನೆಗೆ ಸಹಾಯ ನೀಡುವುದು. ಶಾಲಾ ಮಕ್ಕಳು, ಹದಿಹರೆಯದವರು, ಯುವಕರು ಮತ್ತು ಮಹಿಳೆಯರಲ್ಲಿ ಹಾಗೂ ಅಪಾಯಕಾರಿ ವರ್ತನೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಎಚ್.ಐ.ವಿ. ಮತ್ತು ಏಡ್ಸ್‍ಗಳ ಬಗ್ಗೆ ಅರಿವು ಮೂಡಿಸಿ ಅದನ್ನು ತಡೆಗಟ್ಟುವಲ್ಲಿ ಸಮಾಜದಲ್ಲಿ ಮೂಡಬೇಕಾದ ಎಚ್ಚರವನ್ನುಂಟು ಮಾಡುವುದು.

ಸಾಧನೆಗಳು:
ಸುಮಾರು 1050 ಕುಟುಂಬಗಳ 6300 ಮಂದಿಯನ್ನಲ್ಲದೆ ಸುಮಾರು 1000ಕ್ಕೂ ಹೆಚ್ಚು ಮಂದಿ ಮಕ್ಕಳನ್ನು ಈ ಯೋಜನೆಯಲ್ಲಿ ಸಂಪರ್ಕಿಸಲಾಗಿದೆ. 1050 ಬಡ ಕುಟುಂಬಗಳ ಮಹಿಳೆಯರನ್ನು ಒಳಗೊಂಡ 75 ಸ್ವ-ಸಹಾಯ ಗುಂಪುಗಳನ್ನು ರಚಿಸಲಾಗಿದೆ. 538 ಮಂದಿ ನಾಯಕಿಯರು, 390 ಮಂದಿ ಸದಸ್ಯೆಯರು ಸ್ವ-ಸಹಾಯ ಸಂಘಗಳಲ್ಲಿ ಪುಸ್ತಕ ಮತ್ತು ಲೆಕ್ಕ-ಪತ್ರ ನಿರ್ವಾಹಣೆ, ಮುಂದಾಳತ್ವ ಮತ್ತು ವ್ಯಕ್ತಿತ್ವ ವಿಕಸನ ತರಭೇತಿಯನ್ನು ಪಡೆದು ಸಮರ್ಥವಾಗಿ ನಿಭಾಯಿಸುವ ಸಾಮಥ್ರ್ಯವನ್ನು ಪಡೆದಿದ್ದಾರೆ.
ಪ್ರೇರಣಾ ಸ್ವ-ಸಹಾಯ ಸಂಘದ ಒಕ್ಕೂಟವನ್ನು ಯಶ್ವಸಿಯಾಗಿ ರಚಿಸಿ ನೋಂದಾಯಿಸಲ್ಪಟ್ಟಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಹಿಳೆಯರಿಗೆ ಸ್ವ-ಉದ್ಯೋಗ/ಸಣ್ಣ ಉದ್ದಿಮೆಗಾಗಿ ಸುಮಾರು 3 ಲಕ್ಷಕ್ಕಿಂತಲೂ ಅಧಿಕ ಸಾಲವನ್ನು ಕಿರು ಸಾಲವಾಗಿ ನೀಡಿದೆ. 15 ಸರಕಾರಿ/ಶಾಲೆಗಳಲ್ಲಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಟ್ಟು 750 ಸದಸ್ಯರನ್ನು ಒಳಗೊಂಡ ಹಕ್ಕುಗಳ ಕ್ಲಬ್ಬುಗಳನ್ನು ರಚನೆಯಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ 25 ಕೋಚಿಂಗ್ ಕ್ಲಾಸ್ ಸೆಂಟರುಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 625 ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ.
30 ಗ್ರಾಮಗಳಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಸಂಘಟಿಸಲಾಗಿದೆ. ಇದರಲ್ಲಿ 600 ಮಕ್ಕಳು ಭಾಗವಹಿಸಿದ್ದಾರೆ. ಸಮುದಾಯದಲ್ಲಿ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿ, ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ, ಜಾಥಾ ಮತ್ತು ಅಭಿಯಾನದಗಳ ಮೂಲಕ, ಐ.ಜಿ.ಪಿ ತರಭೇತಿಗಳ ಮೂಲಕ, ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸಹೃದಯವಂತ ನಾಗರಿಕರನ್ನಾಗಿ ರೂಪಿಸಲಾಗಿದೆ.ಸಾಧನೆ:
ವಸತಿ, ರಕ್ಷಣೆ, ಸಲಹೆ, ವೈದ್ಯಕೀಯ ಸಹಾಯ, ಗುಡಿ ಕೈಗಾರಿಕಾ ತರಭೇತಿ, ಸ್ವಂತ ಉದ್ಯೋಗ ಮಾಡುವ ಪ್ರೋತ್ಸಾಹ, ಕಾನೂನು ನೆರವು, ಪೊಲೀಸ್ ರಕ್ಷಣೆ ನೀಡುತ್ತಿದೆ.
ಸುಮಾರು 505 ಮಹಿಳೆಯರನ್ನು ಅವರ ಮಕ್ಕಳ ಸಹಿತ ಈ ಕೇಂದ್ರದಲ್ಲಿ ಆಶ್ರಯ ನೀಡಿದೆ. ಅವರಲ್ಲಿ ಹಲವರನ್ನು ಅವರ ಗಂಡನ ವಶಕ್ಕೆ, ಕೆಲವರನ್ನು ಪತಿಯೊಂದಿಗೆ, ಹೆತ್ತವರು ಮತ್ತು ಪೋಷಕರ ವಶಕ್ಕೆ, ಇನ್ನು ಕೆಲವು ಅವಿವಾಹಿತೆಯರನ್ನು ಹೆತ್ತವರ ವಶಕ್ಕೆ, ಇನ್ನು ಕೆಲವು ಅವಿವಾಹಿತೆಯರಿಗೆ ಯೋಗ್ಯ ವರನೊಂದಿಗೆ ವಿವಾಹ ಮಾಡಿ ಕೊಡುವ ಮೂಲಕ ಯಶಸ್ವಿ ಪುನರ್ವಸತಿ ಮಾಡಲಾಗಿದೆ. ಹಲವರಿಗೆ ಸ್ವಂತ ಉದ್ಯೋಗ ಮಾಡಿ ಆರ್ಥಿಕವಾಗಿ ಸಬಲರಾಗುವಂತೆ ಪ್ರೋತ್ಸಾಹ ನೀಡಲಾಗಿದೆ.
ಇಲ್ಲಿನ ಮಹಿಳೆಯರಿಗೆ ಗುಡಿ ಕೈಗಾರಿಕೆ ಮತ್ತು ಕರಕುಶಲ ವಸ್ತುಗಳ ತಯಾರಿಕೆಯ ಬಗ್ಗೆ ತರಭೇತಿ ನೀಡಿ ಸಿದ್ಧವಸ್ತುಗಳನ್ನು ಉತ್ಪನ್ನ ಮಾಡಲಾಗುತ್ತದೆ.
ವಲಸೆ ಬಂದವರು, ಕೊಳಚೆ ಪ್ರದೇಶದಲ್ಲಿರುವರು, ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ ದುಡಿಯುವರು, ಆರ್ಥಿಕವಾಗಿ ದುರ್ಬಲ ವರ್ಗದ ಸಮುದಾಯದಗಳಿಗೆ ಸೇರಿದ ಸುಮಾರು 60 ಸ್ಥಳಗಳನ್ನು ಸಂದರ್ಶಿಸಿ, ಗುಂಪು ಶಿಕ್ಷಣ, ಸಮಾಲೋಚನೆ, ವರ್ತನಾ ಬದಲಾವಣೆ ಅಧಿವೇಶನಗಳನ್ನು ನಡೆಸುವ ಮೂಲಕ ಲೈಂಗಿಕ ರೋಗ ಮತು ಹೆಚ್.ಐ ಏಡ್ಸ್‍ನಿಂದ ರಕ್ಷಣೆ ಹೊಂದಿ ಆರೋಗ್ಯ ಪೂರ್ಣ ಸಮಾಜದ ರಚನೆಯ ಬಗ್ಗೆ ತಿಳುವಳಿಕೆ ನೀಡಿದೆ. ಸುಮಾರು 30,000 ಮಂದಿ ಗೃಹಸ್ಥರನ್ನು ಮತ್ತು 1,500 ಸಮುದಾಯ ಆಧಾರಿತ ಸಂಘಗಳ ಮುಖಂಡರು ಮತ್ತು ಸದಸ್ಯರನ್ನು ಸಂಪರ್ಕಿಸಿ, ಸಂದರ್ಶಿಸಿ ಪರಿಸ್ಥಿತಿಯ ಬಗ್ಗೆ ಸರ್ವೇ ಮಾಡಲಾಗಿದೆ.
628 ಸಂಘ-ಸಂಸ್ಥೆಗಳ ಮೂಲಕ 5,399 ಮಂದಿ ಮುಖ್ಯಸ್ಥರಿಗೆ ಎಚ್.ಐ.ವಿ. ಮತ್ತು ಏಡ್ಸ್‍ಗಳ ಬಗ್ಗೆ ಅರಿವು ಮೂಡಿಸಿದೆ. ಸುಮಾರು 100 ಶಾಲೆಗಳ ಸುಮಾರು 18,000 ವಿದ್ಯಾರ್ಥಿಗಳಿಗೆ ಹದಿಹರೆಯದ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಶಿಕ್ಷಣ ಮತ್ತು ಲೈಂಗಿಕ ಸ್ವಾಸ್ಯದ ಬಗ್ಗೆ ಅರಿವು ಮೂಡಿಸಿದೆ. ಅಲ್ಲದೆ ಸುಮಾರು 5,000 ಮಂದಿ ಹದಿಹರೆಯದವರಿಗೆ, 3,000 ಮಂದಿ ಯುವಕರಿಗೆ, 5,000 ಗೃಹಿಣೆಯರಿಗೆ ಮತ್ತು ಗರ್ಭಿಣಿ ಸ್ತೀಯರಿಗೆ, 1000 ಮಂದಿ ಹೆತ್ತವರಿಗೆ, 3,000 ಮಂದಿ ಸಮುದಾಯದ ಗಂಡಸರಿಗೆ, 2000 ಮಂದಿ ವಲಸೆ ಕಾರ್ಮಿಕರಿಗೆ 2000 ಮಂದಿ ಮದ್ಯ ವ್ಯಸನಿಗಳಿಗೆ ಎಚ್.ಐ.ವಿ.ಏಡ್ಸ್ ಬಗ್ಗೆ ಯಶ್ವಸಿ ಜಾಗೃತಿ ಮೂಡಿಸಿದೆ.
ಕಳೆದ 3 ವರ್ಷಗಳಿಂದ ಹೆಚ್.ಐ.ವಿ/ಏಡ್ಸ್ ಬಾದಿತ ಮಕ್ಕಳು ಮತ್ತು ವಯಸ್ಕರಿಗೆ ಮನೋ ಸಾಮಾಜಿಕ ಬೆಂಬಲದೊಂದಿಗೆ ಪೌಷ್ಠಿಕ ಆಹಾರ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಸತತವಾಗಿ ನೀಡಲಾಗುತ್ತಿದೆ. ಸಮಾಜದಲ್ಲಿ ಕಳಂಕ ಮತ್ತು ತಾರತಮ್ಯ ಮುಕ್ತ ಪರಿಸರ ನಿರ್ಮಿಸುವಲ್ಲಿ ವ್ಯಾಪಕ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ಅವರ ಜೀವನ ಮಟ್ಟ ಸುಧಾರಿಸುವಲ್ಲಿ ಅವರಿಗೆ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಕೃಷಿ ಉತ್ಪನ್ನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.  

 ಮಹಿಳೆಯ ಸಶಕ್ತೀಕರಣ ಮತ್ತು ಸಹಭಾಗಿತ್ವ ಮತ್ತು ದಕ್ಷಿಣ ಭಾರತದ ಮಕ್ಕಳು 2009ರಲ್ಲಿ ಸ್ಥಾಪನೆ
 ಜರ್ಮನಿ, ಪ್ರಾಯೋಜಕತ್ವ ಮತ್ತು ನೆರವಿನಿಂದ, ಮಂಗಳೂರಿನ ಸುಮಾರು 20 ಗ್ರಾಮ ಮತ್ತು ಮಂಗಳೂರು ಮಹಾನಗರ ಪಾಲಿಕೆಯ 10 ವಾರ್ಡ್‍ಗಳಲ್ಲಿ ಅಂಚಿಗೆ ತಳ್ಳಲ್ಪಟ್ಟ, ದುರ್ಬಲ ವರ್ಗದ ಕುಟುಂಬದ ಮಹಿಳೆ ಮತ್ತು ಮಕ್ಕಳನ್ನು ಸಬಲೀಕರಣಗೊಳಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
  
ಪ್ರಶಸ್ತಿಗಳು

1. ಶೋಷಿತ ಮಹಿಳೆಯರಿಗೆ ನೀಡಿದ ಗಣನೀಯ ಸೇವೆಗೆ ಸಂದೇಶ ವಿಶೇಷ ಮಾನ್ಯತಾ ಪ್ರಶಸ್ತಿ - 1997
2. ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಮಾಡಿದ ಸೇವೆಗೆ ಕರ್ನಾಟಕ ಸರಕಾರದಿಂದ ಮಕ್ಕಳ ಕಲ್ಯಾಣ ಪ್ರಶಸ್ತಿ – 2001
3. ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಸೇವಗೆ ಪ್ರತಿಷ್ಠಿತ ಪ್ರಶಸ್ತಿ 2003 ಇಂಡಿಯನ್ ಸೈಕಾಟ್ರಿಕ್ ಸೊಸೈಟಿಯ 
4. ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸಲ್ಲಿಸಿದ ಸೇವೆಗೆ ಕರ್ನಾಟಕ ಸರಕಾರದಿಂದ ಗಣರಾಜೋತ್ಸವ ಪ್ರಶಸ್ತಿ – 2006


2015ರಲ್ಲಿ 28 ವರ್ಷಗಳ ಸಾರ್ಥಕ ಸೇವೆ - ನೊಂದ ಮತ್ತು ಭಾವನಾತ್ಮಕ ಸಮಸ್ಯೆಗಳಿಂದ ಪೀಡಿತರಾದ ವ್ಯಕ್ತಿ ಮತ್ತು ಕುಟುಂಬಗಳಿಗೆ ಸಲಹೆ ಮತ್ತು ಬೆಂಬಲ ಸೇವೆಯನ್ನು ನೀಡುವುದೇ ಮುಖ್ಯ ಉದ್ದೇಶ.



No comments:

Post a Comment