ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Friday, August 7, 2015

ರೇಡಿಯೋ ಸಾರಂಗ್ 107. 8 ಎಫ್. ಎಮ್

ಸಮುದಾಯ ಬಾನುಲಿ ರೇಡಿಯೋ  ಸಾರಂಗ್ ೧೦೭. ಏಫ್. ಎಂ  ಕಳೆದ ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸಮುದಾಯಕ್ಕೆ  ಶಿಕ್ಷಣ, ಆರೋಗ್ಯ, ಸಾಮಾಜಿಕ ಮಾಹಿತಿ  ಜೊತೆಗೆ ಮನೋರಂಜನಾ ಕಾರ್ಯಕ್ರಮಗಳನ್ನು  ನೀಡುತ್ತಿದೆ .
* ಬೆಳಿಗ್ಗೆ  ಘಂಟೆಯಿಂದ ರಾತ್ರಿ ೧೦ ಘಂಟೆಯವರೆಗೆ  ಕಾರ್ಯಕ್ರಮಗಳು ಪ್ರಸಾರವಾಗುತಿದ್ದು, ಪ್ರತಿ ದಿನ ಬೆಳಿಗ್ಗೆ ಒಂದು ಗಂಟೆಗಳ ಕಾಲ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಭಕ್ತಿ ಸಾರಂಗ ಎಂಬ ಕಾರ್ಯಕ್ರಮವಾಗಿ ಪ್ರಸಾರ ಮಾಡುತ್ತಿದೆ.  ಸ್ಥಳೀಯ ಕಲಾವಿದರು ಹಾಡಿರುವ ಭಕ್ತಿ ಗೀತೆಗಳನ್ನು, ಸರ್ವ ಧರ್ಮ ಸಮನ್ವಯಕ್ಕೆ ಒತ್ತು ಕೊಟ್ಟು ಹಿಂದೂ, ಕ್ರೈಸ್ತ, ಮತ್ತು ಇಸ್ಲಾಂ ಧರ್ಮದ ಭಕ್ತಿಗೀತೆಗಳನ್ನು ಪ್ರಸಾರ ಮಾಡುಲಾಗುತ್ತಿದೆ.  
*ಬೆಳಿಗ್ಗೆ ಘಂಟೆಗೆ ಮಾರ್ನಿಂಗ್ ಮಂತ್ರ ಕಾರ್ಯಕ್ರಮದಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳ ಪರಿಚಯ ಅವರ ವಿಚಾರಧಾರೆಗಳನ್ನು (ಉದಾಹರಣೆಗೆ ಸ್ವಾಮಿ ವೀವೇಕಾನಂದ ,ಮಹಾತ್ಮ ಗಾಂಧೀ) ಸೇರಿಸಿಕೊಂಡು  ಭಾವಗೀತೆಗಳ ಜೊತೆ ಪ್ರಸಾರ ಮಾಡಲಾಗುತ್ತಿದೆಜ಼ೊತೆಗೆ ಪುರಾಣದ ಕೆಲವು ಉತ್ತಮ ವಿಚಾರಗಳನ್ನು ಮಂಡಿಸಲಾಗುತ್ತಿದೆ .
* ಪ್ರತಿ ದಿನ ಬೆಳಿಗ್ಗೆ   ಘಂಟೆಗೆ ಮಾಧ್ಯಮ ಹರಟೆ ಎಂಬ ಶೀರ್ಷಿಕೆಯಡಿಯಲ್ಲಿ  ಸ್ಥಳಿಯ ವಿವಿಧ  ಪತ್ರಿಕೆಗಳು ಮಾಡಿರುವ ಸುದ್ದಿಗಳನ್ನು, ಸಾರ್ವಜನಿಕ ಪ್ರಕಟಣೆಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಆಕಾಶವಾಣಿಯಿಂದ ಬರುವ ಪ್ರದೇಶ ಸಮಾಚಾರದ ಸುದ್ದಿಗಳನ್ನು ಬಿತ್ತರಿಸುತ್ತೇವೆ
* ಪ್ರತಿ ದಿನ :೧೫ ಕ್ಕೆ ಮಹಿಳಾ  ಆರೋಗ್ಯ ಸಾರಂಗ್ ಎಂಬ ಕಾರ್ಯಕ್ರಮದಲ್ಲಿ  ಮಹಿಳೆಯರಿಗೆ ಸಂಬಧಿಸಿದ ಆರೋಗ್ಯ ಮಾಹಿತಿ, ಚರ್ಚೆಗಳನ್ನೂ ಮಾಡುತ್ತೇವೆ. ಮಂಗಳೂರಿನ ಹೆಸರಾಂತ ವಿವಿಧ ಆಸ್ಪತ್ರೆಗಳ ನುರಿತ ತಜ್ಞರು ಕಾರ್ಯಕ್ರದಲ್ಲಿ ಭಾಗವಹಿಸುತ್ತಿದ್ದಾರೆ .
* :೩೦ಕ್ಕೆ ಸ್ಥಳೀಯ ಕಲಾವಿದರು ಹಾಡಿರುವ ಕನ್ನಡ, ಕೊಂಕಣಿ, ತುಳು, ಬ್ಯಾರಿ ಭಾಷೆಯ ಮಿಶ್ರ ಭಾಷೆಯ ಹಾಡುಗಳು ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿವೆ.  
*. ಪ್ರತಿ ದಿನ ಬೆಳಿಗ್ಗೆ ೯ಘಂಟೆಗೆ ಕನ್ನಡ ಪ್ರಸಾರದಲ್ಲಿ ಮಂಗಳೂರಿನ  ಸುತ್ತ ಮುತ್ತ ನಡೆದ ವಿಚಾರ ಸಂಕೀರ್ಣದ ಆಯ್ದ ಭಾಗಗಳು ಹಾಗೂ ಸಂದರ್ಶನಗಳು ಪ್ರಸಾರವಾಗುತ್ತಿದೆ. ಇದೇ ಸಮಯದಲ್ಲಿ ವಾರದಲ್ಲಿ ಮೂರು ದಿನ ಭಾವ ಲಹರಿ ಭಾವಗೀತೆಗಳನ್ನು ಪ್ರಸಾರ ಮಾಡುತ್ತಿದ್ದೇವೆ .
*:೩೦ ಕ್ಕೆ ಕೊಂಕಣಿ ಭಾಷಾ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರ ಸಂದರ್ಶನ, ಹಾಡುಗಳು, ನಾಟಕ, ಕ್ರೈಸ್ತ ಕೊಂಕಣಿಗರ, ಗೌಡ ಸರಸ್ವತ ಕೊಂಕಣರ ಹಾಗೂ ಕುಡುಮಿ ಕೊಂಕಣಿಗಳ  ಸಂಸ್ಕೃತಿ ಮಾಹಿತಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ.
ಪ್ರತೀ ದಿನ ಬೆಳಿಗ್ಗೆ ೧೦  ಘಂಟೆಗೆ ಜನದನಿ ನೇರ ಫೋನ್ ಇನ್  ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಸ್ಥಳೀಯ ಸಮಸ್ಯೆ,ಗಳ ಬಗ್ಗೆ ಚರ್ಚೆ, ವಿಶೇಷವಾಗಿ  ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳ ಮುಖ್ಯಸ್ಥರನ್ನು ಕರೆಸಿ ಜನರು ಪಡೆಯಬೇಕಾದ ಸವಲತ್ತು, ಸೌಲಭ್ಯಗಳ ಕುರಿತ ಮಾಹಿತಿಯೊಂದಿಗೆ ಇಲಾಖೆಗಳ ಕಾರ್ಯಗಳ ಕುರಿತಾಗಿ ಮಾಹಿತಿ ಕಾರ್ಯಕ್ರಮ ನೀಡುತ್ತಿದ್ದೇವೆ.
*೧೧:೦೦ಘಂಟೆಗೆ  ವರ್ಷದ ೩೫೦ ದಿನಗಳಲ್ಲಿ  ಮಂಗಳೂರಿನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯರ ಜಾನಪದ ಸಿರಿಯಾಗಿರುವ ಕನ್ನಡ ಮತ್ತು ತುಳು ಯಕ್ಷಗಾನವನ್ನು ಪ್ರಸಾರ ಮಾಡುತ್ತಿದ್ದು, ಯಕ್ಷಗಾನ ಕಲಾವಿದರ ಸಹಕಾರದಿಂದ ಉತ್ತಮವಾಗಿ ಮೂಡಿಬರುತ್ತಿದೆ
* ೧೧:೩೦ಕ್ಕೆ ತುಳು ಪ್ರಸಾರದಲ್ಲಿ  ಸಂದರ್ಶನ, ನಾಟಕ, ಸ್ಥಳೀಯ ಪ್ರತಿಭೆಗಳ ಕಾರ್ಯಕ್ರಮ, ತುಳು ಕತೆಗಳು, ತುಳು ಜನಪದ ಹಾಗೂ ಭಾವಗೀತೆಗಳು, ಸ್ಥಳೀಯ ಸಿನೆಮಾ ರಚನೆಗಾರರು ಒದಗಿಸಿದ  ತುಳು ಸಿನೇಮಾ  ಹಾಡುಗಳನ್ನು ಪ್ರಸಾರ ಮಾಡುತ್ತೇವೆ.
*೧೨:೩೦ಕ್ಕೆ ವಾರಕ್ಕೆ ಒಂದು ದಿನ ಮಕ್ಕಳೆಡೆಗೆ ಸಾರಂಗ್ ಮಕ್ಕಳ ಕಾರ್ಯಕ್ರಮ, ವಾರದಲ್ಲಿ ಮೂರು ದಿನ ಎಂದೂ ಮರೆಯದ ಹಾಡು -ಹಳೆಯ ಕನ್ನಡ ಚಿತ್ರಗೀತೆ, ವಾರದಲ್ಲಿ ಮೂರು ದಿನ ಜನಪದ ಲೋಕ, ಜನಪದ ಗೀತೆಗಳ ಸ೦ಯ್ಯೋಜಿತ ಕಾರ್ಯಕ್ರಮ ಗಳು ಪ್ರಸಾರವಾಗುತ್ತಿದೆ .
* . ೦೦ಘಂಟೆಗೆ ಬ್ಯಾರಿ ಭಾಷಾ ಕಾರ್ಯಕ್ರಮದಲ್ಲಿ ಮೊಯಿಲಾಂಜಿ ಬ್ಯಾರಿ ಭಾಷೆಯ ಹಾಡುಗಳ ಸ೦ಯ್ಯೋಜಿತ ಕಾರ್ಯಕ್ರಮ, ಚರ್ಚೆ ,ನಾಟಕ ,ಭಾಷಣ ,ಆರೋಗ್ಯ ಮಾಹಿತಿ ಪ್ರಸಾರವಾಗುತ್ತಿದೆ .
* :೩೦ರಿಂದ ಕ್ರಮವಾಗಿ ಮಾಧ್ಯಮ ಹರಟೆ ೧೧:೪೫ ಕ್ಕೆ ಮಹಿಳಾ ಆರೋಗ್ಯ ಸಾರಂಗ್, :೦೦ ಕೊಂಕಣಿ ಹಾಡುಗಳು .:೩೦ ಕ್ಕೆ ಮಿಶ್ರ ಭಾಷೆಯ ಹಾಡುಗಳು ಮರು ಪ್ರಸಾರಗೊಳ್ಳುತ್ತವೆ .
* ಮದ್ಯಾಹ್ನ ೦ ರಿಂದ ವೆರೆಗೆ ಒಲವಿನ ಹಾಡು ನೇರ ಪ್ರಸಾರ ಕಾರ್ಯಕ್ರಮವಿದ್ದು   ಸ್ಥಳೀಯ ಭಾಷೆಗಳ  ಹಾಡುಗಳನ್ನು ಕರೆ ಮಾಡಿದ ಕೇಳುಗರ ಕೋರಿಕೆ ಮೇರೆಗೆ ಪ್ರಸಾರ ಮಾಡುತ್ತೇವೆ. ಶುಕ್ರವಾರದಂದು ಎಸ್  ಎಮ್  ಎಸ್  ಆಧಾರಿತ ಕೋರಿಕೆಗಳಿಗೆ ಅವಕಾಶ ನೀಡಲಾಗುತ್ತಿದೆ. ಇದೇ ಸಮಯದಲ್ಲಿ ಶನಿವಾರ ತುಳು ಚಾವಡಿ -ತುಳುನಾಡಿನ ಸಂಸ್ಕೃತಿ ,ಆಚಾರ ವಿಚಾರಗಳ ಬಗ್ಗೆ ನೇರ ಪೋನ್ ಇನ್ ಕಾರ್ಯಕ್ರಮ ತುಳುವಿನಲ್ಲಿ ಪ್ರಸಾರವಾಗುತ್ತಿದೆ.  ಆದಿತ್ಯವಾರದಂದು ಕಲಾವಿದ ಎಂಬ ಚಿತ್ರರಂಗ ದಿಗ್ಗಜರ ಕುರಿತ ಕಾರ್ಯಕ್ರಮದ ಮರುಪ್ರಸಾರ ವಾಗುತ್ತಿದೆ .
ಪ್ರತಿ ದಿನ  ದಿನ ಘಂಟೆಗೆ  ಹೃದಯರಾಗ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ,ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರ ಪರಿಚಾಯತ್ಮಕ ಕಾರ್ಯಕ್ರಮವಾಗಿದ್ದು,ನೇರ ಫೋನ್ ಇನ್ ಕಾರ್ಯಕ್ರಮವಾಗಿದೆ . ಶುಕ್ರವಾರದಂದು ಇದೇ ಸಮಯಕ್ಕೆ ತಾಲೋ ಉಮಾಲೊ  ಕೊಂಕಣಿ ಭಾಷಾ  ನೇರ ಫೋನ್ ಇನ್ ಕಾರ್ಯ ಕ್ರಮವಿದ್ದು ,ಕೊಂಕಣಿ ಸಾಧಕರ ವ್ಯಕ್ತಿ ಪರಿಚಯ ಕಾರ್ಯಕ್ರಮವಾಗಿದೆ . ಶನಿವಾರದಂದು ನಿಮ್ಮೂರಿಗ ನಮ್ಮ ಸಾರಂಗ್ ಕಾರ್ಯಕ್ರಮದಲ್ಲಿ  ಊರೂ ರಿಗೆ ಹೋಗಿ ಅಲ್ಲಿನ ಜೀವನ ಕ್ರಮ ,ಸಂಸ್ಕೃತಿ ,ಸಮಸ್ಯೆ ,ಗ್ರಾಮದಲ್ಲಿರುವ ಸವಲತ್ತುಗಳು ,ಬೇಕಾಗಿರುವ ಸೌಲಭ್ಯ ಗಳ ಕುರಿತಾಗಿ ಸಮುದಾಯದ ಜನರ ಜೊತೆ ಕಾರ್ಯಕ್ರಮ ನಿರೂಪಕರು  ಬೆರೆತು ನಡೆಸಿಕೊಡುವ ಕಾರ್ಯಕ್ರಮ . ಇದು ನೇರ ಫೋನ್ ಇನ್ ಕಾರ್ಯಕ್ರಮ ವಾಗಿದೆ
ಪ್ರತಿದಿನ ಸಂಜೆ೫ ಕ್ಕೆ ಕೊಂಕಣಿ ಭಾಷಾ ಕಾರ್ಯಕ್ರಮದ ಮರುಪ್ರಸಾರವಿದ್ದು ,ಮಂಗಳವಾರದಂದು ಇದೇ ಸಮಯಕ್ಕೆ ಕಲಾವಿದ ಚಿತ್ರರಂಗ ದಿಗ್ಗಜರ ಕುರಿತ ಕಾರ್ಯಕ್ರಮ ಪ್ರಸಾರವಾಗಲಿದೆ . ಶುಕ್ರವಾರದಂದು  ಮೈಕಲ್ತೋ  ಪಲ್ಕ  ಬ್ಯಾರಿ ಭಾಷಾ  ನೇರ ಫೋನ್ ಇನ್ ಕಾರ್ಯ ಕ್ರಮ ಪ್ರಸಾರವಾಗುತ್ತಿದ್ದು , ಬ್ಯಾರಿ ಸಮುದಾಯದ ಸಂಸ್ಕೃತಿ ,ಇತಿಹಾಸ ,ಸಂಪ್ರದಾಯ ಕುರಿತ ಕಾರ್ಯಕ್ರಮ ಇದಾಗಿದೆ . ಸಾಯಂಕಾಲ ಘಂಟೆಗೆ  ಆಡು ಆಟ ಆಡು ನೇರ ಫೋನ್ ಇನ್ ಕಾರ್ಯ ಕ್ರಮವಿದ್ದು  ತರ್ಲೆ ಪ್ರಶ್ನೆಗಳು ,ಜೋಕುಗಳು ,ಸ್ವಾರಸ್ಯಕರ ಸುದ್ದಿಗಳು ಇಲ್ಲಿವೆ . ಸಂಜೆ ರಿಂದ ಬಳಿಗ್ಗೆ ಪ್ರಸಾರಗೊಂಡ ಕೆಲವು ಕಾರ್ಯಕ್ರಮಗಳು ರಾತ್ರಿ ೧೦ರ ವರಗೆ ಮರು ಪ್ರಸಾರವಾಗಲಿದೆ .ಪ್ರತಿ ಶುಕ್ರವಾರ ರಾತ್ರಿ ;೩೦
ರಿಂದ :೩೦ ವರಗೆ ಇಡೀ ವಾರ ಪ್ರಸಾರಗೊಂಡ ಕಾರ್ಯಕ್ರಮಗಳ ಕುರಿತ ವಿಮಾರ್ಶತ್ಮಕ  ಕಾರ್ಯಕ್ರಮ ಸಾರಂಗ್ ಸಂಗಮ  ಪತ್ರಗಳು ,ಕರೆಗಳು .ಸಂದೇಶಗಳನ್ನು ಸೇ ರಿಸಿಕೊಳ್ಳುತ್ತೇವೆ .



No comments:

Post a Comment