ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Saturday, January 31, 2015

ವಿದ್ಯಾರ್ಥಿ ವೈದ್ಯರ ಚಿಕಿತ್ಸೆ ಯಿಂದ ಎರಡು ಕಣ್ಣು ಕಳೆದು ಕೊಂಡ ಯುವಕ

ಮಾನವನ ಜೀವನವೇ ಒಂದು ರೀತಿಯ ವಿಚಿತ್ರ .ಈ ಜೀವನದ ಎಲ್ಲಾ ವಿಚಾರಗಳನ್ನು ದೇವರೆ ಮಾಡಿದ್ದು ಅಥವಾ ದೇವರೇ ಕೊಟ್ಟದ್ದು ಎಂಬುದಾಗಿ ನಾವು ಭಾವಿಸುತ್ತಾ ಇರುತ್ತೇವೆ. ಹೌದು ಸ್ನೇಹಿತರೆ ಒಬ್ಬೊಬ್ಬರ ಜೀವನದ ನೈಜತೆಯನ್ನು ಕಂಡಾಗ ಅವರಿಗಿಂತ ನಾವೇ ಗ್ರೇಟ್ ಅಂತ ಅಂದ್ಕೊಳ್ತಿವಿ .ನನ್ನ ನೇರಪ್ರಸಾರದ ಕಾರ್ಯಕ್ರಮಕ್ಕೆ ಒಂದು ಕರೆ ಬರುತಿತ್ತು . ನನ್ನ ಕಾರ್ಯಕ್ರಮದಲ್ಲಿ  ಒಂದು ಸಾಲು ಹಾಡು ಹಾಡಿ ಅಂತ ಹೇಳಿದ್ರೆ ಸುಮಧುರವಾಗಿ ಹಾಡುತಿದ್ರು .ಅವರು ಬೇರೆಯಾರು ಅಲ್ಲ ದಾಮೋದರ್ ವರ್ಕಾಡಿ .ಅವರ ಹಾಡನ್ನು ಕೇಳಿದ ನಾನು ದಯವಿಟ್ಟು ನಮ್ಮ ಸ್ಟುಡಿಯೋ ಗೆ ಒಮ್ಮೆ ಬನ್ನಿ ಅಂತ ಹೇಳಿದಾಗ ಸಾರ್ ನನಗೆ ಕಣ್ಣು ಕಾಣಿಸುವುದಿಲ್ಲ ಅಂದರು .ನನ್ನಹರುಷದ ಆ ಕ್ಷಣ ಒಮ್ಮೆಲೇ ಮಾಯವಾಯಿತು .ನಂತರ ನನ್ನ ಕಾರ್ಯಕ್ರಮಕ್ಕಾಗಿ ಅವರನ್ನು ಭೇಟಿ ಮಾಡಿ  ಅವರ ಕಣ್ಣು ಕಳೆದುಕೊಂಡ ಕತೆಗೆ ಕಿವಿಯಾದೆ
ಸಣ್ಣ ಪ್ರಾಯದಲ್ಲಿ ಇರುವಾಗ ಮುಖಕ್ಕೆ ಪೌಡರ್ ಹಾಕಿದ್ದರು .ಒಂದು ದಿನ ಇದ್ದಕ್ಕಿದ್ದಂತೆ ಕಣ್ಣು ನೋವಿರುವ ಬಗ್ಗೆ ಅವರ ತಾಯಿಗೆ ತಿಳಿಯಿತು .ಆಸ್ಪತ್ರೆಯಲ್ಲಿ  ಡಾ .ಕಲಿಯಲು ಬಂದ ವಿಧ್ಯಾರ್ಥಿ ಡಾಕ್ಟರ್ ಗಳು ಕಣ್ಣಿನ ನರದ ಶಸ್ತ್ರ ಚಿಕಿತ್ಸೆ ಯನ್ನು ಮಾಡಿದರು .ಅದೇನೂ ಆಕಸ್ಮಿಕ ಎಂಬಂತೆ ಎರಡು ಕಣ್ಣುಗಳು ಮುಚ್ಚಿಹೋದವು .ಅನೇಕ ವೈದ್ಯರ ಬಳಿ ಹೋದರೂ  ನರದ ತೊಂದರೆಯಿಂದ ಅಸಾಧ್ಯ ಎಂಬ ಮಾತು ಬಂತು .

ಶ್ರೀ ದಾಮೋದರ್ ವರ್ಕಾಡಿಯವರು ಐದನೇ ತರಗತಿವರೆಗೆ ಓದಿದ್ದಾರೆ. ಕಾಲಕ್ರಮೇಣ ಇವರು ಅಂಧರ ಚಲನವಲನ ಕೇಂದ್ರದಲ್ಲಿ ತರಬೇತಿಯನ್ನು ಪಡೆದರು .ಯಕ್ಷಗಾನವೆಂದರೆ ಇವರಿಗೆ ಅಚ್ಚುಮೆಚ್ಚು ಮತ್ತೆ ಯಕ್ಷಗಾನದ ಹಾಡುಗಳನ್ನು ಬಹಳ ಮಧುರವಾಗಿ ಹಾಡುತ್ತಾರೆ .ಈಗ ತಮ್ಮ ಕೆಲಸವನ್ನು ತಾವೇ ಮಾಡುತ್ತಾರೆ .ಬಟ್ಟೆ ಒಗೆಯುವುದು ನೀರು ತರುವುದು ಎಲ್ಲವನ್ನು ಉತ್ಸಾಹದಿಂದ ಮಾಡುತ್ತಾರೆ .ಪೂನ೦ ರಾಮದಾಸ್ ರವರು ತರಬೇತಿ ಸಮಯದಲ್ಲಿ ಶಿಕ್ಷಕಿಯಾಗಿದ್ದರು . ಯಾವುದೇ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿದರೆ ಉತ್ತರವನ್ನು ಬೇಗನೆ ಕೊಡುವುದರಲ್ಲಿ ಇವರು ಮೊದಲಿಗರು .
ಡಾ. ರಾಜ್ ಕುಮಾರ್ ಅಭಿಮಾನಿ :-
ದಾಮೋದರ್ ವರ್ಕಾಡಿಯವರು ಡಾ. ರಾಜ್ ಕುಮಾರ್  ರವನ್ನು ದೇವರಂತೆ ಕಾಣುವವರು .ಅವರ ಯಾವುದೇ ಹಾಡುಗಳನ್ನು ತಪ್ಪಿಲ್ಲದೆ ಪೂರ್ತಿಯಾಗಿ ಹಾಡುತ್ತಾರೆ . ಭಕ್ತಿ ಸಂಗೀತವನ್ನು ಇವರು ನಿತ್ಯವೂ ಕೇಳಿಯೇ ಅಭ್ಯಾಸ ಮಾಡುತ್ತಿದ್ದು ,ದೇವರ ಕೊಡುಗೆಯೆಂದೆ ಹೇಳಬಹುದು. ದಾಮೋದರ್ ವರ್ಕಾಡಿ ಹಾಡಿರುವ ಹಾಡು ಕೇಳಿ :-ಹಾಲಲ್ಲದರೂ ಹಾಕು .
ಯಕ್ಷಗಾನದ ಒಂದು ತುಳು ಹಾಡು  ಬಲೆ ಬಲೆಯ  ಬೋಂಟೆ ದೇರ್ಯರ 
ಕಣ್ಣು ಕಳೆದುಕೊಂಡರೂ  ಅಂತರಂಗದ ಒಳಗಿನ ಕಣ್ಣು ತೆರೆದೇ ಇದೆ . ಕಣ್ಣು  ಇದ್ದವನಿಗೂ ಇಲ್ಲದಿದ್ದವನಿಗೂ ಕನಸು ಕಾಣುತ್ತೆ  ಅನ್ನೋ ಮಾತು ಈ ಸಮಯಕ್ಕೆ ನೆನಪಾಯಿತು . ಮನೆಯ ಕೆಲಸದಲ್ಲಿ ಸದಾ ತೊಡಗಿಕೊಂಡಿರುವ ಇವರು ಅಡಿಕೆ ಸುಳಿಯುವುದರಲ್ಲಿ ಎತ್ತಿದ ಕೈ . ಸ್ವಂತ ಯಾವುದಾದರು ಉದ್ಯೋಗ ಮಾಡಬೆಕೇ೦ಬುದು ಇವರ ಆಸೆ .ಯಾರಾದರು  ಮುಂದೆ ಬಂದಲ್ಲಿ ಕೆಲಸ ಮಾಡಲು ರಡಿ ಎನ್ನುತ್ತಾರೆ ವರ್ಕಾಡಿಯವರು . ಇವರನ್ನು ಭೇಟಿ ಮಾಡಲು ನನ್ನ ಜೊತೆ ಇದ್ದು  ಸಹಾಯ ಮಾಡಿದವರು ಸಿಂಚನಾ ಶ್ಯಾಂ 
ದಾಮೋದರ್ ವರ್ಕಾಡಿ ರವರು ಪ್ರಾಮಾಣಿಕ  ಹಾಡುಗಾರ ,ಅಂಧ ಕಲಾವಿದ ವೆಂದರೆ ತಪ್ಪಾಗಲಾರದು .ಒಳ್ಳೆಯ ಮನಸ್ಸಿನಿಂದ ಇವರಿಗೆ ಸಹಾಯ ಮಾಡಿ :-ದಾಮೋದರ್ ವರ್ಕಾಡಿ 09388018969


ಇನ್ನಷ್ಟು  ಚಿತ್ರಗಳು :-
ಊಟದ ಸಮಯದಲ್ಲಿ ನನ್ನೊಂದಿಗೆ ದಾಮೋದರ್ 
ದಾಮೋದರ್ ರವರ ತಾಯಿ 

ದಾಮೋದರ್ ರವರ ಅಕ್ಕ 

ಸಿಂಚನಾ ಶ್ಯಾಂ  ಜೊತೆಗೆ 



No comments:

Post a Comment