ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Thursday, February 5, 2015

ನಿಮ್ಮ ಮನೆಯಲ್ಲಿ ಬಜೆ ಇದೆಯಾ?

@ಮಗು ಹುಟ್ಟಿದ ತಕ್ಷಣ ಒಂದಲ್ಲ ಒಂದು ರೀತಿಯಲ್ಲಿ ಮದ್ದುಗಳನ್ನು ನೀಡುತ್ತಲೇ ಇರುತ್ತಾರೆ . ಈ ಮದ್ದುಗಳ ಪೈಕಿ ಬಜೆಯು ಒಂದು .ಮುಖ್ಯವಾಗಿ ಮಕ್ಕಳಲ್ಲಿ ತೊದಲುವಿಕೆ ಸಮಸ್ಯೆ ಕಂಡುಬಂದಾಗ ಅಂದರೆ ವಾಕ್ ಶಕ್ತಿಯನ್ನು ಹೆಚ್ಚಿಸಲು ಈ ಒಣ ಬಜೆಯನ್ನು ಅರೆದು ಕೊಡುತ್ತಾರೆ . ಸಂಸ್ಕೃತ ದಲ್ಲಿ ವಜಾ ಎಂಬುದಾಗಿ ಕರೆಯುತ್ತಾರೆ. ನಾನು ಓದಿದ ಮಾಹಿತಿಯಂತೆ ಬಜೆಯ ಶಾಸ್ತ್ರೀಯ ಹೆಸರು `ಅಕೊರಸ್ ಕ್ಯಲಾಮಸ್.ಬಜೆಯನ್ನು ಆಯುರ್ವೇದ ಔಷಧದಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ . ಈ ಬಜೆಯನ್ನು ಸೀಮಿತವಾಗಿ ವಾಗಿ ಅರೆದು ಕೊಡುತ್ತಾರೆ . ಒಂದುವೇಳೆ ಜಾಸ್ತಿಯಾದರೆ ವಾಂತಿಯಾಗುತ್ತದೆ
                 
  ಒಣ ಬಜೆ
ಭೇದಿಯ ಶಮನಕ್ಕಾಗಿ ಹಸಿ ಬಜೆಯನ್ನು ಅರೆದು ಕೊಡುತ್ತಾರೆ . ಮತ್ತೊಂದು ವಿಶೇಷ ವೆಂದರೆ ಇದನ್ನು ಸುಟ್ಟು ಇದ್ದಿಲು (ಮಸಿ) ಮಾಡಿ ಕೊಟ್ಟರೆ ಮಲಬದ್ದತೆ ನಿವಾರಣೆ ಯೂ ಆಗುತ್ತದೆ .ಮನೆಯ ಹಿರಿಯರಲ್ಲಿ ಬಜೆಯ ಬಗ್ಗೆ ಸಾಮಾನ್ಯ ವಾಗಿ ಹೆಚ್ಚಾಗಿ ಗೊತ್ತಿರುತ್ತದೆ . ನನಗೂ ಬಜೆ ತಿನ್ನಿಸಿದರಂತೆ ಆಗ ನಾನು ಸಣ್ಣ ಪಾಪು ! ಬಜೆಯನ್ನು ಈಗ ನೋಡುವ ಅವಕಾಶವಾಯ್ತು . ಹಸಿ ಬಜೆಗಾಗಿ ತುಂಬಾ ಕಡೆ ಹುಡುಕಾಡಿದೆ ಆದರೆ ಎಲ್ಲೂ ಸಿಕ್ಕಿಲ್ಲ . ನನ್ನ ನೆರೆ ಮನೆಯ ಹಿರಿಯರು ಹೇಳುವಂತೆ ಮಕ್ಕಳಿಗೆ ಅತಿಸಾರ,ಕೆಮ್ಮು ,ನೆಗಡಿಯಾದಾಗ ಬಜೆಯನ್ನು ಪುಡಿಮಾಡಿ ಜೇನುತುಪ್ಪ ದೊಂದಿಗೆ ನೀಡಿದರೆ ಗುಣ ಮುಖವಾಗುತ್ತದೆಯಂತೆ . ಮತ್ತೆ ಗರ್ಭಿಣಿ ಯಾರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಕ್ಕಾಗಿ ವಜಾಮೋದಕ ತಯಾರಿಸಿ ನೀಡುತ್ತಾರೆ . ಮತ್ತೆ ಮಕ್ಕಳಲ್ಲಿ ಕಿವಿ ನೋವು ಸಮಸ್ಯೆ ಉಂಟಾದಾಗ ಬಜೆಯ ತುಂಡಿನ ರಸವನ್ನು ಕಿವಿಗೆ ಬಿಡಬಹುದು . ಬಜೆಯ ಬಗ್ಗೆ ನಿಮಗೂ ಹೆಚ್ಚು ಗೊತ್ತಿದ್ದರೆ ತಿಳಿಸಿ ಆಯ್ತಾ ?
ನನ್ನ ಇನ್ನೊಂದು ಬ್ಲಾಗ್ https://thimmappavk1.wordpress.com/

No comments:

Post a Comment