ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Tuesday, May 12, 2015

ಭಸ್ಮ ಕೊಟ್ಟು ಹತ್ತಿ ಮರದ ಬುಡಕ್ಕೆ ಅಗ್ಗದಲ್ಲಿ ಕಟ್ಟಲು ಹೇಳಿದ ಅಪರಿಚಿತ "ಜ್ಯೋತಿಷಿ'

ನಾವು ನಮ್ಮ ಜೀವನದಲ್ಲಿ ಒಂದಲ್ಲ ಒಂದು ವಿಷಯದಲ್ಲಿ ಮೋಸ ,ವಂಚನೆಗೆ ಸಿಲುಕಿಕೊಳ್ಳುತ್ತೆವೆ ನಾಲ್ಕು ವರ್ಷಗಳ ಹಿಂದೆ ನನಗೆ ಮತ್ತು ನನ ಸ್ನೇಹಿತನಿಗಾದ ಒಂದು ಅನುಭವವನ್ನುನಿಮ್ಮ ಮುಂದೆ ಸಾದರಪಡಿಸಲೇ ?

ನಿಮ್ಮ ಅಪ್ಪಣೆ ... !!
ಅಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಯ ಸಂಭ್ರಮ .ನಾನು ಆ ಸಮಯದಲ್ಲಿ  ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯದಲ್ಲಿ ಅಂತಿಮ ಪದವಿ ಓದುತ್ತಿದ್ದೆ . ನಾನು ನನ್ನ ಸ್ನೇಹಿತ ಧರ್ಮಪಾಲ ಒಟ್ಟಿಗೆ ಸೇರಿ ಷಷ್ಠಿ ಜಾತ್ರೆಯ ಸಂಭ್ರಮವನ್ನು ಸವಿಯುತ್ತಿದ್ದೆವು . ಮಾರ್ಗದ ಬದಿಯಲ್ಲಿ ವೈವಿಧ್ಯಮಯ ತಿನಸುಗಳ ಜೊತೆಗೆ ವಿಭಿನ್ನ ಸ್ವಭಾವದ ಜನರು ಕೂಡ ಇದ್ದರು . ನೂಕು ನುಗ್ಗಲು ಜನರ ಮಧ್ಯೆ ಬರುವಾಗ ಮಾರ್ಗದ ಬದಿಯಲ್ಲಿ ಕವಡೆಯ ಜೊತೆಗೆ ಅಯ್ಯಪ್ಪ ಮಾಲೆ ಧರಿಸಿದ ಅಪರಿಚಿತ ಜೋತಿಷ್ಯ ನನ್ನ ಸ್ನೇಹಿತನನ್ನು ಕರೆದರು . ಯಾಕೆ ಎಂದು ಕೇಳಿದಾಗ ಆತ  ನೀವು ದೊಡ್ಡ ಸಮಸ್ಯೆ ಯಲ್ಲಿ ಇದ್ದಿರಿ . ಕೈ ಯಲ್ಲಿ ಹಣ ನಿಲ್ಲೋದಿಲ್ಲ .ಅದಕ್ಕೆ ದೊಡ್ಡ ಕಾರಣವಿದೆ. ಅದನ್ನು ನಾನು ಹೇಳ್ತಿನಿ  ಒಂದು ನಿಮಿಷ ಕೇಳಿ ಅಂದ . ನಾವಿಬ್ಬರೂ  ಅಪರಿಚಿತ ಜೋತಿಷ್ಯನ ಬಳಿ ಕುಳಿತೆವು . ಸರ್ ನಿಮ್ಮ ಬಳಿ  ಹಣ ಉಳಿಯುತ್ತಿಲ್ಲ  ಹೌದಲ್ಲವೇ ಎಂದು ನನ್ನ ಸ್ನೇಹಿತನಲ್ಲಿ ಕೇಳಿದ . ನೀಜವಾಗಿಯು ಹೌದು ! ದಿನದ ಸಂಪಾದನೆ ದಿನ ದಿನ ಖರ್ಚು ಆಗುತ್ತಿದೆ ಎಂದು ನನ್ನ ಸ್ನೇಹಿತ ಮರು ಉತ್ತರಿಸಿದರು . ಅಷ್ಟರಲ್ಲಿ  ನೀವು  ನೂರು ರುಪಾಯಿ ತಟ್ಟೆಯಲ್ಲಿ ಹಾಕಿ ಮನೆಯ ಬಗ್ಗೆ ಹೇಳಲು ಇದೆ ಅಂದ ! ನನ್ನ ಸ್ನೇಹಿತ ಅವನು ಹೇಳಿದಂತೆ ಮಾಡಿದ ಮನೆಯ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ ನನ್ನ ಸ್ನೇಹಿತನ ಜೊತೆ ನಾನು ಸತ್ಯವೆಂದು ನಂಬಿದೆ .
ನನ್ನನ್ನು ನೋಡಿ ನಿಮ್ಮ ಬಗ್ಗೆ ಒಂದು ಗುಡ್ ನ್ಯೂಸ್ ಹೇಳಲು ಇದೆ ಅಂದ ! ಸರ್ ಹಣ ಕೊಡಲ್ಲ ಅಂದೆ  ಪರವಾಗಿಲ್ಲ  ಎಂದು ಹೇಳಿ ನನ್ನ ವಿಧ್ಯಾಭ್ಯಾಸದ ಬಗ್ಗೆ ತಿಳಿದು ಕೊಂಡ.  ಈ ಬಾರಿಯ ಪರೀಕ್ಷೆಯಲ್ಲಿ  ನಿಮಗೆ ಉನ್ನತ ಜಯವಿದೆ.  ಜೊತೆಗೆ ನಿಮ್ಮನ್ನು ಪ್ರೀತಿಸುವ ಹುಡುಗಿಯು ನಿಮಗೆ ಕೆಲವೇ  ದಿನದಲ್ಲಿ  ಮಾತನಾಡಲು ಸಿಗುತ್ತಾಳೆ  ಅಂದ .ನನ್ನ ಮನಸಿನಲ್ಲಿ ಅದೇನೋ  ತಳಮಳ !!
ಚಿತ್ರ ಒದಗಿಸಿದವರು:- ಸಿಂಚನಾ ಶ್ಯಾಮ್
 ಮತ್ತೆ ನನ್ನ ಸ್ನೇಹಿತನನ್ನು  ಕರೆದು  ನೋಡಿ  ನಿಮ್ಮ  ಕೈಯಲ್ಲಿ  ಹಣ ನಿಲ್ಲಬೇಕಾದರೆ ನಾನು ಹೇಳಿದಂತೆ ಮಾಡಿ ಅಂದ . ನಾವು ಎಲ್ಲದಕ್ಕೂ ಸೈ ಎಂದೆವು . ಇನ್ನೂರು ರೂಪಾಯಿ  ತಟ್ಟೆಗೆ ಹಾಕಿ ಎಂದು ಆ ಅಪರಿಚಿತ ಜೋತಿಷ್ಯ ಹೇಳಿದ ತಕ್ಷಣ  ನನ್ನ ಸ್ನೇಹಿತ ಇನ್ನೂರು ಕೊಟ್ಟ.  ಆಗ ಕೆಂಪು ಭಸ್ಮವನ್ನು ಕೊಟ್ಟು ಇದನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ ಮತ್ತೆ  ಯಾರಿಗೂ ತೋರಿಸಬೇಡಿ .ನಾಳೆ ಮುಂಜಾನೆ ಎಲ್ಲರು ಏಳುವ ಮೊದಲು ನಿಮಗೆ ಪರಿಚಯವಿರುವ ಹತ್ತಿ ಮರದ ಬುಡದಲ್ಲಿ ಕಟ್ಟಿ ಬನ್ನಿ. ವಾರದ ಒಳಗೆ ಫಲಿತಾ೦ಶ  ಅಂದ. ನಾವು  ಇದನ್ನು ನಂಬಿದೆವು . ಮತ್ತೆ  ಇನ್ನು ಕೇವಲ ನೂರು ಕೊಟ್ಟರೆ ವಶೀಕರಣದ ಭಸ್ಮ ಕೊಡುತ್ತೇನೆ ಅಂದ !! ಆಗ ನಮಗಿಬ್ಬರಿಗೂ  ಭಯ ಶುರುವಾಯಿತು. "ಉಂದು ಪೆಟ್ಟ್ ತಿನ್ಪಿನ  ಬೇಲೆ" ಎಂದು ತುಳುವಿನಲ್ಲಿ ಮಾತು ಮುಂದುವರೆಸಿದೆ. ಪುಣ್ಯಕ್ಕೆ ಆ  ಅಪರಿಚಿತ ಜೋತಿಷ್ಯನಿಗೆ ತುಳು ಬರೋದಿಲ್ಲ !! ಅದೆಲ್ಲ ಯಾವುದು ಬೇಡ ಎಂದೆವು .ಕೊನೆಗೆ ಆತನ ದೂರವಾಣಿ ಸಂಖ್ಯೆಯನ್ನು ನೀಡಿದ . ಈತನ ಮಾತಿನ ಮೋಡಿಗೆ  ಮರುಳಾಗಿ ರಾತ್ರಿಯೇ  ಮನೆಗೆ ಬಂದೆವು .ನಮ್ಮ ಮನೆಗೆ ಹೋಗಿ  ಆ ಭಸ್ಮವನ್ನು ಮನೆಯಹೊರಗೆ ಇಟ್ಟೆವು . ಮರುದಿನ ಮುಂಜಾನೆ 5 ಘಂಟೆಯ ಸಮಯದಲ್ಲಿ  ಹೋಗಿ  ನನಗೆ ಪರಿಚಯವಿದ್ದ ಹತ್ತಿ ಮರದತ್ತ ಹೋದೆವು . ಹೇಗೂ ಕಟ್ಟಿಬಂದಾಯಿತು .
* ಮರುದಿನ ಅದೇ ದಾರಿಯಲ್ಲಿ ಅನಿವಾರ್ಯವಾಗಿ ಹೋಗಬೇಕಿತ್ತು . ಆಗ ನಾವು ಕಟ್ಟಿದ ಭಸ್ಮದ ಕಟ್ಟು ಇದೆಯಾ ಅಂತ ಕಣ್ಣು ಹಾಯಿಸಿದಾಗ ನಗುವಿನ ಲೋಕಕ್ಕೆ ಜಾರಿಹೊದೆವು . ಯಾಕೆಂದರೆ ಈ ಭಸ್ಮದ ಕಟ್ಟನ್ನು ಕಟ್ಟಿರೋದು  ಹತ್ತಿ ಮರಕ್ಕಲ್ಲ ,ನಿದ್ದೆಯ ಗುಂಗಿನಲ್ಲಿ ಸಂಪಿಗೆ ಮರಕ್ಕೆ!! ಈ ವಿಷಯವನ್ನು ಮನೆಯಲ್ಲಿ ಹೇಳಿದಾಗ ನಮಗೆ ಬೈಗುಳದ ಸುರಿಮಳೆ . ನಾನು ಮತ್ತು ನನ್ನ ಸ್ನೇಹಿತ ಈ ಮೋಸಕ್ಕೆ ಸಿಲುಕಿದ ನಂತರ ಅದೇ ನಮಗೆ ಪಾಠವಾಯಿತು .ಮತ್ತೆ ಆ  ಅಪರಿಚಿತ ಜೋತಿಷ್ಯ  ಕೊಟ್ಟ ಫೋನ್ ನಂಬರಿಗೆ ಕರೆಮಾಡಿ ಬೈಯೋಣವೆಂದರೆ ಆ ನಂಬರ್ ಸ್ವಿಚ್ ಆಫ್.ಈಗ ಯಾವುದೇ ಜೋತಿಷ್ಯ ರನ್ನು ನಾನು ನಂಬುವುದಿಲ್ಲ  ಇನ್ನು ನೀವು?

1 comment:

  1. ಇತರರಿಗೂ ತಿಳಿಸಿ ಒಳ್ಳೆ ಕೆಲಸ ಮಾಡಿದ್ದೀರಿ ,ನಿರೂಪಣೆ ಸೊಗಸಾಗಿದೆ

    ReplyDelete