"ಹಲ್ಲು ಇದ್ದವನಿಗೆ ಕಡಲೆ ಇಲ್ಲ ಕಡಲೆ ಇದ್ದವನಿಗೆ ಹಲ್ಲಿಲ್ಲ" ಈ ಮಾತನ್ನು ಬಹಳ ಹಿಂದಿನಿಂದಲೂ ಕೇಳಿಕೊಂಡು ಬಂದಿದ್ದೇವೆ .ಈ ವಿಚಾರ ನಮ್ಮ ಜೀವನದಲ್ಲಿ ಬೇರೆ ಬೇರೆ ಹಂತಗಳಲ್ಲಿ ನಮ್ಮ ಅನುಭವಕ್ಕೂ ಬಂದಿರುತ್ತದೆ . ನನ್ನ ಬದುಕೇ ಒಂದು ವಿಚಿತ್ರ ! ಹೌದು ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ನನ್ನ ಮನೆಯವರು ಕಾರಣ .ನಾನು ಹೆಸ್ಕೂಲು ಓದುವಾಗ ಒಮ್ಮೆ 8 ನೇ ತರಗತಿಯಲ್ಲಿ ಫೈಲಾದೆ . ಗಣಿತ ಶಿಕ್ಷಕರೋರ್ವರ ಬಿಸಿ ಬಿಸಿ ಪೆಟ್ಟಿಗೆ ನಾನು ದಿನ ತಪ್ಪಿಸಿ "ಫೈಲ್ "ಎಂಬ ದೊಡ್ಡ ನಾಮಧೇಯ. ಆಗ ನನಗೆ ತುಂಬಾ ಬೇಜಾರಾಯಿತು. ಕೊನೆಗೂ ನನ್ನ ತಾಯಿಯ ಒತ್ತಾಯಕ್ಕೆ ಮತ್ತೆ ಶಾಲೆ ಮುಂದುವರೆಸಿದೆ. ಹೇಗೋ ಎಸ್.ಎಸ್.ಎಲ್.ಸಿ ಮುಗಿಯಿತು . ಪಿ .ಯು. ಸಿ ಯು ಮುಗಿಯಿತು . ಕೊನೆಗೆ ಡಿಗ್ರಿ ಮಾಡಬೇಕೆಂಬ ಆಸೆ ನನಗೆ ಇತ್ತು. ಆಗ ನನ್ನ ತಾಯಿ ಹೇಗೊ ದುಡ್ಡಿನ ವ್ಯವಸ್ಥೆ ಮಾಡಿದರು . ನಾನು ಡಿಗ್ರಿ ಓದುವಾಗಲೇ ಕೆಲಸವನ್ನು ಮಾಡುತ್ತಿದ್ದೆ . ಮಾಡಿರುವ ಕೆಲಸದ ಬಗ್ಗೆ ಹೆಚ್ಚು ವಿವರಣೆ ನಾನು ಸದ್ಯಕ್ಕೆ ಕೊಡುವುದಿಲ್ಲ . ಆಗಲೇ ಕವನ ಬರೆಯುವ ಹುಚ್ಚು ಜ಼ೊತೆಗೆ ರೇಡಿಯೊ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆತುರ ಬೇರೆ .ಹೆಚ್ಚಾಗಿ ಹೇಳುವುದಾದರೆ ಒಂದು ರೀತಿಯ "ಮಾರ್ಲ್" !
ನನ್ನ ರಜೆ ಸಮಯವೆಲ್ಲ ದುಡಿತ್ತಕ್ಕೆ ಮೀಸಲು . ನನ್ನ ತಾಯಿ ಜೊತೆಗೆ ನನಗೆ ಸಹಾಯ ಮತ್ತು ಮಾರ್ಗದರ್ಶನ ಮಾಡಿದವರು ಪಾದೆ ಕೃಷ್ಟ್ಣಯ್ಯ ಭಟ್ ಮತ್ತು ಅವರ ಮನೆಯವರು .ಕಷ್ಟ ಗಳ ನಡುವೆ ಬೆಳೆದು ಬ೦ದ ಇವರಿಗೆ ಮತ್ತೂಬ್ಬರ ಕಷ್ಟವೂ ಅರ್ಥವಾಗುತ್ತಿತ್ತು . ಬಿ .ಎಡ್ ಮಾಡುವಂತೆ ಅವರ ಮಗ ರಾಮಚಂದ್ರ ಭಟ್ ಪಾದೆ ಸಲಹೆ ನೀಡಿದರು . ರಾಮಚಂದ್ರ ಭಟ್ ರವರು ಎಲ್ಲವನ್ನೂ ಕೂಲಂಕಷ ವಾಗಿ ನೋಡುವವರು . ಪ್ರಾಮಾಣಿಕ ಕೆಲಸ ಮತ್ತು ಮಾತಿಗೆ ಅವರ ಮೊದಲ ಪ್ರಾಶಸ್ತ್ಯ . ನಾನು ಕೆಲಸ ಮಾಡುತ್ತಿದ್ದ ಹಣವೆಲ್ಲ ಬೇರೆ ಬೇರೆ ಕಾರಣಕ್ಕಾಗಿಯೇ ಖರ್ಚು ಆಗುತ್ತಿತ್ತು .ಸಂಬಳ ತೆಗೆದುಕೊಳ್ಳುವಾಗ 300ಅಥವಾ 500ಹೆಚ್ಚು ತೆಗೆದು ಕೊಳ್ಳುತ್ತಿದ್ದೆ . ನನ್ನ B .E d ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಇವರು ಭರಿಸಿದರು . ಸೋತವರಿಗೆ ಸದಾ ಹಸ್ತ ನೀಡುತ್ತ ಬಂದವರಲ್ಲಿ ಇವರು ಒಬ್ಬರು . ಅವರಿಗೆ ಸುಳ್ಳು ಹೇಳಿದರೆ ಆಗವುದಿಲ್ಲ ! ನಮ್ಮ ಮೆನೆಯವರ ಮೇಲೂ ಅಷ್ಟೇ ವಿಶ್ವಾಸ ಇಟ್ಟಿದಾರೆ .ನನ್ನ ತಾಯಿ ಜೊತೆಗೆ ಅನೇಕ ಬಾರಿ ಕೆಲಸವನ್ನೂ ಮಾಡಿದ್ದೆ .ಈಗ ಬರೇ ನೆನಪು ಮಾತ್ರ. ನನ್ನಲ್ಲಿ ವಿಷಯ ನಿಷ್ಟತೆ ಇತ್ತು ಹೊರತು ಬಂಡವಾಳ ಇರಲಿಲ್ಲ . ನಾನೀಗ ಎಂ. ಎ ಪದವಿಯನ್ನು ಮುಗಿಸಿದೆ . ಇದರ ಬೆನ್ನಲ್ಲೇ ಪತ್ರಿಕೊಧ್ಯಮ ವನ್ನು ಕಲಿಯುತ್ತಿದ್ದೇನೆ . ಇವತ್ತು ನಾನು ಯಾವುದೇ ಕಾರ್ಯ ಮಾಡುವುದಾದರೂ ಅದಕೆಲ್ಲ ಈ ಕಾಣದ ಕೈಗಳೇ ಸಾಕ್ಷಿ . ನನ್ನ ತಮ್ಮ ,ನನ್ನ ತಂದೆ ,ನನ್ನ ತಾಯಿ .ನನ್ನ ಅಕ್ಕ ,ಜೊತೆಗೆ ಕೃಷ್ಟ್ಣಯ್ಯ ಭಟ್ ಮತ್ತು ಅವರ ಮನೆಯವರು ಹಾಗೆಯೇ ನನ್ನ ಮತ್ತೋರ್ವ ಸ್ನೇಹಿತ ಧರ್ಮಪಾಲ.ಈಗ ಶಿಕ್ಷಕ ಕೆಲಸದತ್ತ ಯೋಚಿಸದೆ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದೆನೆ.

No comments:
Post a Comment