ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Monday, March 16, 2015

ಹಿರಿಯರ ಆಪ್ತಮಿತ್ರ "ಜಿಡ್ಡೆ ಕಲ್ಲ್ "

ವೇಗದಿಂದ ಸಾಗುವ ಈ ಪೇಟೆಯ ಬದುಕಿನಲ್ಲಿ ಮೌಲ್ಯಗಳಿಗೆ ಏನೋ ಕೊರತೆ ಇದ್ದಂತೆ ಕಾಣುತ್ತದೆ. ಆದರೆ ಹಳ್ಳಿ ಬದುಕಿನಲ್ಲಿ ಪ್ರತಿಯೊಂದು ಜೀವಿಗೂ ,ವಸ್ತುವಿಗೂ ಅದರದ್ದೇ ಆದ  ಮಹತ್ವವಿದೆ.ಅದೇನೇ ಇರಲಿ  ಮನೆಯಲ್ಲಿ ಹಿರಿಯರಿದ್ದರೆ ಬೆಳಿಗ್ಗೆ 4 ಘಂಟೆಗೆ ಡಮ್ ,ಡಮ್  ಶಬ್ದ ಕೇಳಿಬರುತ್ತದೆ . ಅದು ಎಲೆ ಅಡಿಕೆ ಗುದ್ದುವ ಶಬ್ದ ! ಹೌದು ಈ ಎಲೆ ಅಡಿಕೆ ಗುದ್ದುವ ಕಲ್ಲಿಗೆ ತುಳುವಿನಲ್ಲಿ
"ಜಿಡ್ಡೆ ಕಲ್ಲ್" ಎಂಬುದಾಗಿ ಕರೆಯುತ್ತಾರೆ .
ಜಿಡ್ಡೆ ಕಲ್ಲ್
ನಾನು  ಸಣ್ಣವನಿರುವಾಗ ಅಜ್ಜಿ ನನಗೆ ಅಡಿಕೆಯ ಹುಡಿಯನ್ನು ಸಲ್ಪ ಬಾಯಿಗೆ ಕೊಡುತ್ತಿದ್ದರು . ಕೆಲವೊಮ್ಮೆ  ನಾನೇ ಅಜ್ಜಿಗೆ ಎಲೆ ಅಡಿಕೆ ಗುದ್ದಿ ಕೊಡುತ್ತಿದ್ದೆ . ಹಾಗೆಯೇ  ಈ ಜಿಡ್ಡೆ ಕಲ್ಲಿನ ಜೊತೆಗೆ  ಉಗುಳುವ ಪಡ್ಯ ಇರುತ್ತಿತ್ತು . ಬೆಳಿಗ್ಗೆ ,ಮಧ್ಯಾಹ್ನ ,ಸಂಜೆ ಈ ಮೂರು ಹೊತ್ತು ಎಲೆ ಅಡಿಕೆ ಗುದ್ದುವ ಶಬ್ದ ಕೇಳಿಯೇ ಕೇಳುತ್ತದೆ. ಹಿಂದೆ ಪಕ್ಕದ ಮನೆಯಲ್ಲಿ ಅಡುಗೆಯ ತಯಾರಿಯ  ಬಗ್ಗೆ ಅರಸಿನ ಕೊಂಬು ಗುದ್ದುವ ಶಬ್ದ ದಿಂದ ಗೊತ್ತಾಗುತ್ತಿತ್ತು . ಹಾಗೆಯೇ ಮನೆಯಲ್ಲಿ ಹಿರಿಯರು ಎಲೆ ಅಡಿಕೆ ತಿನ್ನುವವರಿದ್ದರೆ ಈ ಗುದ್ದುವ ಶಬ್ದದಿಂದ ಗೊತ್ತಾಗುತ್ತಿತ್ತು . ಈಗಿನ ಜಾಯಮಾನದಲ್ಲಿ ಅಷ್ಟೇನೂ  ಕಂಡು ಬರುವುದಿಲ್ಲ .  ಯಾಕೆಂದರೆ ಈಗ  ಗುಟ್ಕಗಳ  ಹಾವಳಿ . ಸಣ್ಣ ಪ್ಯಾಕ್ ನಲ್ಲಿ ಗರಿ ಗರಿಯಾಗಿ ಇರುತ್ತದೆ . ಈ ಕಲ್ಲಿನಿಂದ ತಯಾರಿಸುವ ಪಾನ ಮಸಾಲೆ ಆರೋಗ್ಯಕ್ಕೂ(ಹೊಗೆ ಸೊಪ್ಪು ಸೇರಿಸಬಾರದು ) ಒಳ್ಳೆಯದು . ಜೊತೆಗೆ ಮೈ ಕೈಗೂ ವ್ಯಾಯಾಮ ಸಿಗುತ್ತದೆ .ನನ್ನ ಅಜ್ಜಿ  ಈ ಕಲ್ಲಿನಲ್ಲಿ ಚಕ್ಕುಲಿ ಮತ್ತೆ ಎಳ್ಳುಂಡೆ ಗುದ್ದಿ ತಿನ್ನುತಿದ್ದರು .
ಈ  ಜಿಡ್ಡೆ ಕಲ್ಲ್  ಕಡೆಯುವ ಕಲ್ಲಿನ ಆಕಾರದಲ್ಲಿ ಇರಬೇಕೆ೦ದೆನೂ  ಇಲ್ಲ ಕೆಲವೊಂದು ಚೌಕಕಾರದಲ್ಲಿ ಇರುತ್ತದೆ . ನಮ್ಮ ನೆರೆ ಮನೆಯ ಹಿರಿಯರೋರ್ವರು ನಮ್ಮೂರಿನ ಪಕ್ಕದ ನದಿಗೆ  ಹೋಗಿ ಅಲ್ಲಿಂದ ಸಣ್ಣ ಗಾತ್ರದ ಕಲ್ಲುಗಳನ್ನು ಜೋಡಿಸಿ ಆಯ್ಕೆಮಾಡಿ ತರುತ್ತಿದ್ದರು . ಅಂದಹಾಗೆ ಈ ಚಿತ್ರದಲ್ಲಿರುವ ಜಿಡ್ಡೆಕಲ್ಲಿಗೆ ಸುಮಾರು 150 ವರ್ಷ ಕಳೆದಿದೆ. ಮೊನ್ನೆ ನನ್ನ  ಸ್ನೇಹಿತರೋರ್ವರ ಜೊತೆ ಸುಳ್ಯದ ಕೇನಾಜೆ ಎಂಬಲ್ಲಿಗೆ ಹೋಗಿದ್ದೆ . ಅಲ್ಲಿ ಚಂದ್ರಶೇಕರ ಎಂಬವರ ಮನೆಯಲ್ಲಿ ಈ  "ಜಿಡ್ಡೆ ಕಲ್ಲ್ " ಇತ್ತು . ನಾನು  ಒಮ್ಮೆ ಎಲೆ ಅಡಿಕೆ ಹಾಕಿ ಗುದ್ದಿ ನೋಡಿದೆ. ಮುಂದೊಂದು ದಿನ ನನಗೂ ಉಪಯೋಗಕ್ಕೆ ಬಂದಿತ್ತು ಬಿಡಿ! ಇದು ಹಿರಿಯರ ಆಪ್ತಮಿತ್ರ ಎಂದರೆ ತಪ್ಪಾಗಲಾರದು .ನನ್ನ ಈ ಲೇಖನ ಓದಿ ನಿಮ್ಮ ಮನೆಯಲ್ಲಿರುವ ಕಲ್ಲು ಅಥವಾ ಈ ಕಲ್ಲಿನ ಬಗ್ಗೆ ಕೇಳಿದ ನೆನಪು ಇದ್ದರೆ ಅದನ್ನು ನನ್ನ ಜೊತೆ ಹಂಚಿಕೊಳ್ಳಿ :-
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.


No comments:

Post a Comment