ಇದು208 ರಲ್ಲಿ ಬರೆದ ಕಥೆ ಓದಿ ಅಭಿಪ್ರಾಯ ತಿಳಿಸಿ.
ಅದು ಮುಂಜಾನೆಯ ಸಮಯ ರಾಜೀವ್ ಕಡಲ ತೀರದ ಸುಂದರ ಸೊಬಗನ್ನು ಸವಿಯುತ್ತಾ ಕುಳಿತಿದ್ದಾನೆ. ಕಡಲ ತಡಿಗೆ ಅಪ್ಪಳಿಸುವ ಅಲೆಗಳ ನರ್ತನ ನೋಡಿ ರಾಜೀವನ ಮನಸಿನಲ್ಲೂ ಹೊಸ ಭಾವದ ಅಂಕುರ. ಎಲ್ಲೋ ದೂರದಿಂದ “ಸಂಜೆಯ ರಾಗಕೆ ಬಾನು ಕೆಂಪೇರಿದೆ” ಎಂಬ ಭಾವಗೀತೆಯೊಂದು ಇಂಪಾಗಿ ಗಾಳಿಯ ನಡುವೆ ಆತನ ಕಿವಿಯನ್ನು ಹೊಕ್ಕಿತು. ರಾಜೀವ್ ಕುಳಿತಲ್ಲಿಯೆ ಯಾವುದೊ ವಿಚಾರದತ್ತ ಚಿಂತಿಸತೊಡಗಿದ. ಹೌದು ಪ್ರಕೃತಿಗೂ ಮಾನವನಿಗೂ ನಿಕಟವಾದ ಸಂಬಂಧವಿದೆ. ಅದು ಎಲ್ಲಾ ವಿಚಾರದಲ್ಲೂ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ ಪ್ರಕೃತಿಯ ಸಹಜ ಸ್ಪಂದನಕ್ಕಾಗಿ ಮನಸು ಕಾಯುತ್ತಿದೆ. ಪ್ರಕೃತಿಯ ಗುಣ ಮನುಷ್ಯನನ್ನು ಸಂತೋಷಪಡಿಸುತ್ತದೆ; ದುಃಖ ಪಡಿಸುತ್ತದೆ ಅಷ್ಟಲ್ಲದೆ ಆತ್ಮೀಯ ಸ್ನೇಹಿತನೂ ಈ ಪ್ರಕೃತಿಯೇ. ಹುಟ್ಟು ಸಾವಿನ ನಡುವೆ ಒಂದಿಷ್ಟು ಸಂತೋಷವನ್ನು ಅನುಭವಿಸಲು ಎಲ್ಲರಿಗೂ ಸಾಧ್ಯವಾಗದು. ರಾಜೀವನ ಮನಸಿನ ಯೋಚನೆ ಯಾಕೋ ವಿಶಾಲ ವಿಷಯದೊಳಗೆ ಹೋಗಿತ್ತು. ತನ್ನ ಕಲ್ಪನೆಯ ಲೋಕದಿಂದ ಒಮ್ಮೆ ಹೊರ ಬಂದ ರಾಜೀವ್‍ಗೆ ಹೃದಯದಲ್ಲಿ ನಡುಕ ಉಂಟಾಯಿತು. ಸುತ್ತಲು ಕತ್ತಲು ಆವರಿಸಿರುವ ಸನ್ನಿವೇಶ. ಒಂದೆಡೆ ಚಂದಿರನ ಆಗಮನ ಅತಿಯ ಅಬ್ಬರದಂತೆ ತನ್ನ ಮನಸಿನಲ್ಲೂ ಒಂದು ರೀತಿಯ ಏರಿಳಿತ ಹತ್ತಿರದಲ್ಲೇ ರಾಶಿ ಹಾಕಿದ್ದ ಮರಳಿನಿಂದ ಎದ್ದು ನಿಂತನು. ಅಷ್ಟರಲ್ಲಿ ತನ್ನ ಹಿಂದೆ ಯಾರೊ ನಿಂತಂತೆ ಕಾಣಿಸಿತು. ಬೆಳದಿಂಗಳಿನಲ್ಲೂ ಒಮ್ಮೆ ಆತಂಕಗೊಂಡು, ಇಲ್ಲಿ ಯಾರು ಇಲ್ಲವಲ್ಲ ಎನ್ನುತ್ತಾ ಮನೆಯ ದಾರಿಯತ್ತ ಹೆಜ್ಜೆ ಹಾಕಿದ ರಾಜೀವ್
****************
ಹೌದು, ಇದು ನನ್ನ ಒಂಟಿ ಪಯಣ. ನನ್ನೊಂದಿಗೆ ಯಾರು ಇಲ್ಲ ಎಂದು ಒಂದು ಕ್ಷಣ ಆಲೋಚಿಸಿದರೆ, ಮರುಕ್ಷಣದಲ್ಲಿ ನನ್ನೊಂದಿಗೆ ಜೀವ ಜಗತ್ತೆ ಇರುವಾಗ ಯಾಕೆ ಭಯ ಎನ್ನುವ ಮತ್ತೊಂದು ಆಲೋಚನೆ ಮಾಡುತ್ತಾ ಮನಸಿನ ಮಾತುಗಳಿಗೆ ಬಣ್ಣ ಹಚ್ಚುತ್ತ ತನ್ನ ಮನೆಯ ಕಾಡು ದಾರಿಯತ್ತ ರಾಜೀವ್ ನಡೆದ. ಯಾರೋ ಹಿಂದೆ ಕಪ್ಪಗೆ ಕಾಣಿಸಿದಂತೆ ಆಯಿತು! ಒಂದು ಕ್ಷಣ ನಿಂತು ನಿಟ್ಟುಸಿರು ಬಿಡುತ್ತಾ ಸುತ್ತಲೂ ನೋಡಿದ... ನಿಶಬ್ದ... ಮತ್ತೆ ಒಂದೆಜ್ಜೆ ಮುಂದೆ ಇಟ್ಟಾಗ ಆಗಲೂ ಒಂದು ರೀತಿಯ ನಡುಗೆಯ ಸದ್ದು! ಹಿಂದೆ ಪೂರ್ತಿ ತಿರುಗದೆ ಸ್ವಲ್ಪ ತಿರುಗಿ ನೋಡಿದ... ಯಾವುದೋ ಪ್ರತಿಬಿಂಬ ಕಂಡಿತು. ಕಾಲಿಗೆ ಹಾಕಿ ಕೊಂಡ ಚಪ್ಪಳನ್ನು ಕೈಯಲ್ಲಿ ಹಿಡಿದುಕೊಂಡು ಮತ್ತೆ ಹೆಜ್ಜೆ ಹಾಕಿದ. ಪ್ರತಿ ಹೆಜ್ಜೆಗೂ ಎದೆಯಲ್ಲಿ ಏನೋ ನಡುಕ. ಅಂದೊಮ್ಮೆ ರಾತ್ರಿ ವೇಳೆ ಮುತ್ತಜ್ಜಿ ಹೇಳಿದ ಭೂತ ಮತ್ತು ದೆವ್ವದ ಕತೆ ಹಾಗೆ ಒಮ್ಮೆ ಕಣ್ಣ ಮುಂದೆ ತೇಲಿ ಬಂದವು. ಈಗ ಸದ್ದು ಇಲ್ಲವೇ ಇಲ್ಲ.. ತನ್ನ ಕಾಲಿನ ಚಪ್ಪಲಿಯ ಶಬ್ದವೇ ನನ್ನನ್ನು ಬೆರಗುಗೊಳಿಸಿದೆ ಎಂದು ಮನದೊಳಗೆ ಗುನುಗುಡುತ್ತಾ ತನ್ನ ಮೂರ್ಖತನ ಅರಿವಾಗಿ ತನ್ನೊಳಗೆ ತಾನೇ ನಕ್ಕು ಬಿಟ್ಟ. ಮತ್ತೆ ದಾರಿಯುದ್ದಕ್ಕೂ ಎನೋ ಯೋಚನ ಲಹರಿ. ಹೌದು ಈ ಒ೦ಟಿ ಪಯಣ ಎಷ್ಟು ಬೇಸರ ಯಾರು ಅಷ್ಟೆ ಒಂಟಿಯಾಗಿ ಬದುಕಲು ಇಷ್ಟಪಡುವುದಿಲ್ಲ. ಮನುಷ್ಯ ಪ್ರತಿಯೊಂದು ಕಾರ್ಯಕ್ಕೊ ಯಾವುದನ್ನಾದರೂ ಅವಲಂಬಿಸಿಯೇ ಇರುತ್ತಾನೆ. ರಾಜೀವನ ಒಂಟಿ ಪಯಣ ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತೆ ಏನೇನೊ ವಿಷಯಗಳು ಬಂದವು. ಬಂದಿರುವ ದಾರಿಯನು ಲೆಕ್ಕ ಹಾಕುತ್ತ ತನ್ನ ಪಯಣ ಮುಂದುವರಿಸಿದ.
****************
ಬಾನ ಚಂದಿರ ಮೋಡದಾಚೆಗೆ ಒಮ್ಮೆ ಮುಳುಗಿ ಮತ್ತೆ ನಗುತ್ತಿದ್ದಾನೆ. ಆದರೆ ರಾಜೀವ್‍ನ ಮುಖದಲ್ಲಿ ಮಂದಹಾಸದ ನಗೆಯೇ ಇಲ್ಲ. ತನ್ನ ಹಿಂದೆ ಯಾರೋ ಬರುತ್ತಿದ್ದಾರೆ ಎನ್ನುವ ಅನುಮಾನ ಅವನನ್ನು ಬಿಡಲೇ ಇಲ್ಲ.
ಮನುಷ್ಯ ಪ್ರಕೃತಿಯ ಒಂದು ಭಾಗವಷ್ಟೆ ಹುಟ್ಟುವಾಗ ಆತ ಏನನ್ನು ತೆಗೆದುಕೊಂಡು ಬರುವುದಿಲ್ಲ ಹೋಗುವಾಗಲೂ ಏನನ್ನು ಕೊಂಡು ಹೋಗುವುದಿಲ್ಲ ಆದರೂ ತನ್ನ ಸ್ಥಿರ ಇರುವಿಕೆಯಲ್ಲಿ ಹಣ, ಆಸ್ತಿ ಸಂಪತ್ತಿಗಾಗಿ ಹಂಬಲಿಸುತ್ತಾ ಇರುತ್ತಾನೆ. ಪ್ರತಿಯೊಬ್ಬ ಮನುಷ್ಯ ಒಂದಲ್ಲ ಒಂದು ದಿನ ಮಣ್ಣಿನ ಕಣವಾಗುತ್ತಾನೆ. ಒಂದು ದಿನ ಹೆಚ್ಚು ಕಡಿಮೆಯಷ್ಟೆ ಹಾಗಂತ ಆತ್ಮಹತ್ಯೆಗೆ ಈ ಜೀವಂತ ಅವಧಿಯಲ್ಲಿ ಪ್ರಯತ್ನಿಸುವುದು ಬುದ್ಧಿಜೀವಿ ಎಂದು ಕರೆದುಕೊಳ್ಳುವ ನಮಗೆ ಅರ್ಹವಲ್ಲ. ಈ ರಾಜೀವನ ಯೋಚನೆ ಎಲ್ಲಿಂದಲೋ ಶುರುವಾಗಿ ಗುರಿ ಇಲ್ಲದೆ ಇನ್ನೊಂದು ಕಡೆಗೆ ಬಂತು. ತನ್ನ ಒಂಟಿ ಪಯಣದಲಿ ಹುಟ್ಟು ಸಾವು - ಬದುಕು - ಸಾವು ಎಲ್ಲವೂ ತನ್ನ ಸ್ಮøತಿ ಪಟಲಕ್ಕೆ ಹೇಗೆ ಬಂದು ಎಂಬುದು ಪ್ರಶ್ನೆಯೇ ಸರಿ.
ರಾಜೀವನಿಗೆ ನಡೆದು, ನಡೆದು ಸುಸ್ತೊ ಸುಸ್ತು... ಒಮ್ಮೆ ವಿಶ್ರಾಂತಿ ಪಡೆಯಬೇಕೆಂದು ದಾರಿ ಮದ್ಯೆಯಿಂದ ಬಂಡೆ ಕಲ್ಲಿನ ಮೇಲೆ ಮೆಲ್ಲನೆ ಕುಳಿತ. ಕುಳಿತುಕೊಂಡ ರಾಜೀವ್‍ಗೆ ಮತ್ತೆ ತನ್ನ ಹಿಂದೆ ಯಾರೊ ಇದ್ದಂತೆ ಭಾಸವಾಯಿತು! ಬಹುಶಃ ನಾನು ಮೌನ ಇದ್ದದಕ್ಕೆ ನನ್ನ ಹಿಂದೆ ಏನೋ ಕಾಣದ ಅಶರೀರವಾಣಿ ಬರುತ್ತದೆ ಎಂದು ಯೋಜಿಸಿ ರೋಷಗೊಂಡು ಕೇಳಿಯೇ ಬಿಟ್ಟ “ಯಾರು ನೀನು? ನನ್ನ ಹಿಂದೆ ಸುತ್ತುವ ಅಗತ್ಯ ನಿನಗೇಕೆ? ಧೈರ್ಯವಿದ್ದರೆ ನನ್ನ ಮಾತಿಗೆ ಉತ್ತರ ಕೊಡು...” ರಾಜೀವನ ಪ್ರಶ್ನೆ ಪ್ರಶ್ನೆಯಾಗಿ ಉಳಿಯಿತು. ಮೌನ ವಾತಾವರಣ ಛೇ... ಬಂಡೆಕಲ್ಲು ಜೀವಂತ ಇರುತ್ತಿದ್ದರೆ ಅದಾದರೂ ಉತ್ತರಿಸುತ್ತಿತ್ತು!
****************
ರಾಜೀವ್ ಮತ್ತೆ ತನ್ನ ಯಾನವನು ಮುಂದುವರೆಸಿದ. ಒಂಟಿಯಾಗಿ ಹೆಜ್ಜೆ ಹಾಕುವಾಗ ಪ್ರತಿ ಸಂದರ್ಭದಲ್ಲೂ ಏನೋ ವಿಭಿನ್ನ ವಿಷಯಗಳತ್ತ ಯೋಚನೆ. ಈ ಜೀವನ ಎಂಬುದು ಎಷ್ಟು ವಿಶಾಲ ಏನು ಬೇಕು ಅದೆಲ್ಲವನ್ನು ಪಡೆಯಬಹುದು. ನಮ್ಮೊಳಗಿನ ಬ್ರಹ್ಮಂಡದೊಳಗೆ ಯಾರು ಸಣ್ಣವರಲ್ಲ ಯಾರು ದೊಡ್ಡವರಲ್ಲ. ಜಾತಿ - ಭೇದ ಏನಿದ್ದರೂ ಜೀವಂತ ಅವಧಿಗೆ ಸೀಮಿತ. ಸತ್ತ ಮೇಲೆ ಆದರ್ಶ ಗುಣಗಳು ಮಾತ್ರ ಉಳಿದು ಬಿಡುತ್ತವೆ. ರಾಜೀವ್‍ನ ಒಂಟಿ ಪಯಣವಾದರೂ ಆತನ ಯೋಚನೆಗೆ ಏನು ಕೊರತೆ ಇರಲಿಲ್ಲ. ತನ್ನನ್ನೂ ತಾನು ಮರೆತು ದಾರಿಯುದ್ದ ನಡೆಯುತ್ತಿದ್ದಾನೆ.
****************
ಬರು ಬರುತ್ತಾ ಕಾಡು ದಾರಿ ದೂರವಾಯಿತು. ಈಗ ಬಾನ ಚಂದಿರ ನಡು ನೆತ್ತಿಯ ಮೇಲಿದ್ದಾನೆ. ಒಂದು ಕ್ಷಣ ನಿಂತು ಮತ್ತೆ ಹಿಂದೆ ತಿರುಗಿ ನೋಡಿದ. ತನ್ನ ಹಿಂದೆ ಕಾಣುತ್ತಿದ್ದ ಯಾವುದೊ ಪ್ರತಿಬಿಂಬ ಈಗ ರಾಜೀವನ ಎಡಗಡೆಯಿಂದ ಬರುತ್ತಿರುವುದು ಕಾಣತೊಡಗಿತು. ಒಮ್ಮೆ ಓರೆಗಣ್ಣಿನಿಂದ ನೋಡಿ ಪಿಶಾಚಿ ಎಂದು ಭಾವಿಸಿ ಮನೆಯತ್ತ ವೇಗವಾಗಿ ಓಡುತ್ತಾ ಬಂದ.
ಹೋಗಿ ಹೋಗಿ ನಾನೇ ಸಿಗಬೇಕೆ ಬೇರೆ ಯಾರು ಈ ದಾರಿಯಲ್ಲಿ ಸಿಗಲಿಲ್ಲವೆ... ಪುಣ್ಯಕ್ಕೆ ನನ್ನ ಜೀವ ಹೋಗದಿದ್ದ ಸಾಕು ಎನ್ನುತ್ತಾ ಮನೆ ಸಮೀಪದ ಮರದಡಿಯಲ್ಲಿ ಬಂದು ಕುಳಿತ. ಹಿಂಬಾಲಿಸುಕೊಂಡು ಬರುತ್ತಿದ್ದ ಪ್ರತಿಬಿಂಬ ಈಗ ಮಾಯ...!
ಸುಂದರ ಬೆಳದಿಂಗಳಿಗೆ ಮರದ ನೆರಳು ಅಲಕೃತವಾಗಿ ಚಿತ್ತಾರ ಬಿಡಿಸಿದಂತೆ ಕಾಣುತ್ತಿತ್ತು.
ರಾಜೀವ್ ಮತ್ತೆ ಅಲ್ಲೇ ಕೂತು ಯಾವುದೋ ವಿಚಾರದತ್ತ ಚಿಂತಿಸತೊಡಗಿದ ...ಮನುಷ್ಯ ನಂಬಿಕೆಯಿಂದ ಬಾಳುತ್ತಾನೆ. ಸುಳ್ಳು ಮೋಸ ವಂಚನೆ ಎಲ್ಲವೂ ಮಾಮೂಲಿ. ಒಂದೆಡೆ ಭೂತ, ಪ್ರೇತ, ಪಿಶಾಚಿ ಹಿರಿಯರು ಮಾಡಿದ ಕಟ್ಟುಕಟ್ಟಳೆ ಎಂದು ಭಾವಿಸಲೆ? ಅಥವಾ ಇದು ಪ್ರಕೃತಿಯ ಸಹಜವಾದ ಕಾಲ್ಪನಿಕ ಮಾಯೆ ಎನ್ನಬೇಕೆ? ಯಾವುದನ್ನು ನಂಬುವುದು ಯಾವುದನ್ನು ಬಿಡುವುದು ಎನ್ನುವಷ್ಟರಲ್ಲಿ ಆತನ ತಲೆಯ ಮೇಲೆ ಹಣ್ಣು ಎಲೆಯೊಂದು ಬಿತ್ತು. ಆ ಎಲೆಯನ್ನು ಕೈಯಲ್ಲಿ ಹಿಡಿದುಕೊಂಡು ಒಬ್ಬನೇ ಮಾತಿಗೆ ಆರಂಭಿಸಿದ. ಪಾಪ ಈ ಹಣ್ಣು ಎಲೆ ಚಿಗುರಿದ ಸಮಯದಲ್ಲಿ ಇಬ್ಬನಿಯನು ತಬ್ಬಿ ಎಷ್ಟೊಂದು ಸುಖ ಅನುಭವಿಸಿರಬಹುದು.
ಮನುಷ್ಯನೂ ಅಷ್ಟೆ ಎನ್ನುತ್ತಾ ಎದ್ದು ಮತ್ತೆ ತನ್ನ ಮನೆದಾರಿಯನ್ನು ಹಿಡಿದ. ಮತ್ತೆ ವಿಚಿತ್ರ ಯೋಚನೆ... ಮನುಷ್ಯನ ಹುಟ್ಟು ನಿಗೂಢ ಸಾವು ಕೂಡ ಹಾಗೆಯೇ. ಸಾವಿನ ಸುಳಿಯೊಳಗೆ ಬಿದ್ದಾಗ ಯಾರಿಂದಲೂ ತಪ್ಪಿಸಲು ಆಗುವುದಿಲ್ಲ. ಈ ಒಂಟಿ ಜೀವನದಲ್ಲಿ ಯಾವ ವಿಷಯವನ್ನು ಯಾರಲ್ಲಿ ಹೇಳಿಕೊಳ್ಳಲಿ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ.
ತನ್ನ ಮನೆಯ ಅಂಗಳಕ್ಕೆ ಕಾಲಿಟ್ಟ. ಒಂದು ಕ್ಷಣ ಗಾಢವಾಗಿ ಯೋಚಿಸಿದ. ನನ್ನ ಜೀವನದ ಈ ಅವಧಿಯಲ್ಲಿ ಇದೊಂದು ಹೊಸ ಅನುಭವ ಎಂದು ಮನದಲ್ಲೆ ಮಾತಾಡುತ್ತಾ ನನ್ನ ಕಡಲ ತೀರದಿಂದ ನನ್ನ ಮನೆ ತನಕ ಬಂದಿರುವ ಆ ಕಾಣದ ವ್ಯಕ್ತಿ ಯಾರು ಎಂಬುದನ್ನು ಈಗ ಸ್ಪಷ್ಟಪಡಿಸಿಕೊಂಡ....!
ಈ ಮುಖದಲ್ಲಿ ಸ್ವಲ್ಪ ನಗು... ಇದುವರೆಗೆ ನನ್ನೊಂದಿಗೆ ಬಂದದ್ದು ಭೂತ, ಪ್ರೇತ, ಪಿಶಾಚಿ ಯಾವುದು ಅಲ್ಲ ನನ್ನ ಬೆನ್ನ ಹಿಂದಿನ ನೆರಳು...! ಹೌದು ರಾಜೀವ್ ಈವರೆಗೆ ಒಂಟಿ ಎಂದು ನಂಬಿದ್ದ. ಮನುಷ್ಯ ಯಾರು ಕೂಡ ಒಂಟಿ ಅಲ್ಲವೇ ಅಲ್ಲ. ನಮ್ಮ ಪ್ರತಿ ಸಂದರ್ಭದಲ್ಲೂ ನೆರಳು ನಮ್ಮೊಂದಿಗೆ ಸದಾ ಇರುತ್ತದೆ. ನೆರಳು ನಮ್ಮ ಪ್ರತಿಬಿಂಬವಾದರೂ ಅದು ನಮ್ಮನ್ನು ಕೈ ಬಿಡುವುದಿಲ್ಲ. ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಹೊಸ ದಾರಿಯನ್ನು ತೋರಿಸುತ್ತದೆ. ನೆರಳು ನಮ್ಮನ್ನು ಪ್ರೀತಿಸುತ್ತದೆ. ನೆರಳೇ ನಮ್ಮನ್ನು ಅನೈತಿಕತೆಗೂ ಒಮ್ಮೆಮ್ಮೆ ಕೊಂಡೊಯ್ಯುತ್ತದೆ. ನಮ್ಮ ಜೀವನದ ದಾರಿಯನ್ನು ತೋರಿಸುವುದು ನಮ್ಮ ನೆರಳು ಹೊರತು ಬೇರೆ ಯಾವುದು ಅಲ್ಲ ಮನುಷ್ಯನ ರೂಪ ಬೆಳ್ಳಗೆ ಇದ್ದರೂ ನೆರಳು ಮಾತ್ರ ಕಪ್ಪು....! ಮರದ ನೆರಳು ಅನೇಕ ಜೀವರಾಶಿಗಳಿಗೆ ವಿಶ್ರಾಂತಿಯನ್ನು ಕೊಡುತ್ತದೆ. ಆದರೆ ಮನುಷ್ಯ ತನ್ನ ನೆರಳಲ್ಲಿ ಯಾರಿಗಾದರೂ ಆಸರೆ ಕೊಟ್ಟಿದ್ದಾನೆಯೇ? ಆತ ಹಣ, ಆಸ್ತಿ, ಸಂಪತ್ತುಗಾಗಿಯೆ ಕಾದು ಕುಳಿತು ಸಮಯ ಹಾಳು ಮಾಡಿದ. ಒಳ್ಳೆಯ ವಿಚಾರ ನಮ್ಮನ್ನು ಭದ್ರಗೊಳಿಸುತ್ತದೆ. ನೆರಳು ನಮ್ಮ ಬದುಕಿನ ಸುತ್ತ ಇರುತ್ತದೆ. ನಾವು ಗಮನ ಕೊಡದಿದ್ದರೂ ಅದು ನಮ್ಮನ್ನು, ನಮ್ಮ ಚಟುವಟಿಕೆಯನ್ನು ಗಮನಿಸುತ್ತಲೇ ಇರುತ್ತದೆ. ರಾಜೀವ್ ತನ್ನ ಯೋಚನೆಗೆ ವಿರಾಮ ನೀಡಿ ಮನೆಯ ಕೋಣೆಯತ್ತ ನಡೆದ.
**************
- ವಿ.ಕೆ. ಕಡಬ
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.

No comments:
Post a Comment