ಇತ್ತೀಚೆಗೆ ಸಿರಿ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡ ಸ್ಟೀವನ್ ರೇಗೊ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಉಪ ಸಂಪಾದಕರಾಗಿ ಮತ್ತು ವರದಿಗಾರರಾಗಿ ಎಲ್ಲರಿಗೂ ಚಿರಪರಿಚಿತರು. ಮೂಲತ: ಪುತ್ತೂರು ತಾಲೂಕಿನ ದಾರ೦ದಕುಕ್ಕು ನಿವಾಸಿ ತಾಯಿ ಹಿಲ್ಡಾ ರೇಗೊ ತಂದೆ ಇಗ್ನೇಶಿಯಸ್ ರೇಗೋ.
ಬಾಲ್ಯದಲ್ಲಿಯೇ ಪುತ್ತೂರಿನ ಸುದ್ದಿ ಪತ್ರಿಕೆಗೆ ಸಣ್ಣ ಕವನ, ಲೇಖನಗಳನ್ನು ಬರೆಯುವ ಮೂಲಕ ಶುರುವಾದ ಬರವಣಿಗೆ ಇಂದು ಉಪಸಂಪಾದಕ ಹುದ್ದೆಯ ವರೆಗೆ ತಲುಪಿಸಿದೆ. ರೇಗೊರವರಿಗೆ ತಾನು ಮಾಧ್ಯಮ ವರದಿಗಾರನಾಗಬೇಕೆಂದು ಎಳೆ ವಯಸ್ಸಿನಲ್ಲೆ ಕನಸು ಕಂಡವರಲ್ಲ .ಏನಾದರೊಂದು ಹೊಸ ಲೇಖನ ಬರೆಯಬೇಕು ಎಂದು ಆಲೋಚಿಸಿದಾಗ ಇವರಿಗೆ ನೆನಪಿಗೆ ಬಂದದ್ದು ಪುತ್ತೂರಿನ ಬಿಸಿ ನೀರಿನ ಬುಗ್ಗೆ. ಇದು ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಬುಗ್ಗೆಯಾಗಿದ್ದು ಅಂದು ಪ್ರಜವಾಣಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕರ್ನಾಟಕ ದರ್ಶನ ಅಂಕಣದಲ್ಲಿ ಮುಖಪುಟದಲ್ಲಿ ಲೇಖನ ಪ್ರಕಟವಾಗಿದ್ದೆ ಹೊಸ ತಿರುವನ್ನು ಪಡೆದು ಕೊಂಡಿತು. ಸ್ಟೀವನ್ ರೇಗೊ ಎಂಬ ಹೆಸರು ಎಲ್ಲೆಡೆ ಹರಡಿತು.
ಇನ್ನೊಂದು ವಿಶೇಷವೆಂದರೆ ಕನ್ನಡ ಸಿನಿಮಾ ಚಿತ್ರರಂಗಕ್ಕೆ ಈಗಾಗಲೇ sandalwood ಎಂಬ ಹೆಸರು ಜಗದೆಲ್ಲೆಡೆ ಹೋಗಿತ್ತು. ಆಗ ತುಳು ಚಿತ್ರರಂಗಕ್ಕೂ ಒಂದು ಹೆಸರು ಇದ್ದರೆ ಚಂದ ಎನ್ನುವುದು ಇವರ ಆಲೋಚನೆಯಾಗಿತ್ತು. ಆ ಸಮಯದಲ್ಲಿ 40 ಸಿನಿಮಾ ದಾಟಿದರೂ ಕರಾವಳಿ ತೀರದ ಸಿನಿಮಕ್ಕೊಂದು ನಾಮಕರಣ ಬೇಕೆ ಬೇಕು ಎನ್ನುವಾಗ ಇವರಿಗೆ ಹೊಳೆದದ್ದೆ “ಕೊಸ್ಟಲ್ ವುಡ್"ಈಗ ಈ coastalwood ಪದ ದೇಶದೆಲ್ಲೆಡೆ ಹರಡಿದ್ದು ಎಲ್ಲ ಮಾಧ್ಯಮಗಳು ಈಗ ಕೊಸ್ಟಲ್‍ವುಡ್ ಎಂದೇ ಇಡೀ ತುಳು ಚಿತ್ರರಂಗವನ್ನು ಕರೆಯುತ್ತಿದೆ . ಮತ್ತೊಂದು ಸುದ್ದಿಯೆಂದರೆ ಕನ್ನಡ ಪತ್ರಿಕೆಯಲ್ಲಿ ಅದುಕೂಡ ರಾಜ್ಯವ್ಯಾಪ್ತಿಯ ಅವೃತ್ತಿಯಲ್ಲಿ ಮಂಗಳೂರಿನ ಸಿನಿಮಾ ಸುದ್ದಿಗಳ ಬಗ್ಗೆ ವಿಶೇಷವಾಗಿ ‘ಕುಡ್ಲ’ ಎನ್ನುವ ತುಳು ಶಬ್ದವನ್ನು ಪ್ರಯೋಗ ಮಾಡಿದವರಲ್ಲಿ ಇವರು ಮೊದಲಿಗರು.
ಗ್ರಾಮೀಣ ಭಾಗದಿಂದಲೇ ಬೆಳೆದು ಬಂದ ಸ್ಟೀವನ್ ರೇಗೊರವರು ಗ್ರಾಮೀಣ ಜನ ಜೀವನ ಅಲ್ಲಿಯ ಜೀವಂತ ಸಮಸ್ಯೆಗಳನ್ನು ಕಣ್ಣಾರೆ ಕಂಡವರು. ಹಾಗಾಗಿಯೇ ಗ್ರಾಮೀಣ ವರದಿಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಾ ಬಂದಿದ್ದಾರೆ.
ಇದರ ಫಲವಾಗಿಯೇ ‘ಕಡಂದಲೆ’ ಪ್ರಶಸ್ತಿಗೆ ಇವರು ಆಯ್ಕೆಯಾದರು .ಜಗತ್ತಿನೆಲ್ಲೆಡೆ ಮಲ್ಲಿಗೆಯ ಕಂಪು ಬೀರಿರುವ ಉಡುಪಿಯ ಶಂಕರಪುರ ಮಲ್ಲಿಗೆ ಬಗ್ಗೆ ನೀವೆಲ್ಲ ತಿಳಿದಿರಬೇಕಲ್ಲವೆ? ಹೆಸರಾಂತ ಮಲ್ಲಿಗೆಯ ಬೆನ್ನು ಹತ್ತಿದಾಗ ಆ ಮಲ್ಲಿಗೆಗೆ ಬಳಸುತ್ತಿದದ್ದು ಮಾತ್ರ ವಿಷಕಾರಿ ಕೀಟನಾಶಕ! ಹೌದು ಈ ಮಲ್ಲಿಗೆಯ ವರದಿಯನ್ನು ತಯಾರಿಸಿ ಕೃಷಿಗೆ ಮತ್ತು ಕೃಷಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಇವರ ಲೇಖನ ಒಂದು ಆಂದೋಲನವನ್ನೇ ಮಾಡಿತು. ಅದಕ್ಕಾಗಿ ಕಿನ್ನಿಗೋಳಿಯ ಯುಗ ಪುರುಷ ಮತ್ತು ವಿಜಯ ಕಲಾವಿದರ ಸಹಯೋಗದಲ್ಲಿ ಹಿರಿಯ ಪತ್ರಕರ್ತ ದಿ|| ಕೆ.ಜೆ. ಶೆಟ್ಟಿ ಕಡಂದಲೆ ಇವರ ಸ್ಮರಣಾರ್ಥ “ಕಡಂದಲೆ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.
ನಮ್ಮ ದಕ್ಷಿಣ ಕನ್ನಡದಲ್ಲಿಯೇ ಹುಟ್ಟಿ ಇಲ್ಲೇ ಸಾಯುವ ನಂದಿನಿ ನದಿಯ ಬಗ್ಗೆ ಬರೆದ ವಿಮರ್ಶಾತ್ಮಕ ಲೇಖನಕ್ಕೆ ದ.ಕ. ಜಿಲ್ಲಾ ಪತ್ರಕರ್ತರ ಸಂಘದಿಂದ ಪಾ.ಗೊ (ಪದ್ಯಾಣ ಗೋಪಾಲಕೃಷ್ಣ) ಪ್ರಶಿಸ್ತಿಗೂ ಇವರು ಅರ್ಹರಾದರು.
ಇನ್ನು ಮಸಾಲೆ ಅರೆಯುವುದರಲ್ಲಿ ಎತ್ತಿದ ಕೈ.ಅಂದರೆ ಅಡುಗೆ ಕೋಣೆಯಲ್ಲಿ ಅಲ್ಲ... ಕರಾವಳಿ ಸಿನಿಮಾ ಸುದ್ದಿಗಳಿಗೆ! ಎಲ್ಲ ವಯೋ ಮಾನವವರು ಓದಲೇ ಬೇಕೆನಿಸುತ್ತದೆ. ಇಂತಹ ಕರಾವಳಿ ಸಿನಿಮಾ ಸುದ್ದಿಗಳನ್ನು 4 ವರ್ಷಗಳಿಂದ ಬರೆಯುತ್ತಿದ್ದ ಇವರ ಲೇಖನದ ಗುಣಮಟ್ಟ ಮತ್ತು ಅತೀ ಹೆಚ್ಚು ಸಿನಿಮಾ ಲೇಖನ ಬರೆದ ಫಲವಾಗಿ 2014ರ ಸಿರಿ ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಇದೀಗಾ ಇವರ ಎಲ್ಲಾ ಲೇಖನಗಳಿಗೆ ತಮ್ಮ ಪತ್ನಿ ಸಾಥ್ ನೀಡುತ್ತಿದ್ದಾರೆ.
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.
ಬಾಲ್ಯದಲ್ಲಿಯೇ ಪುತ್ತೂರಿನ ಸುದ್ದಿ ಪತ್ರಿಕೆಗೆ ಸಣ್ಣ ಕವನ, ಲೇಖನಗಳನ್ನು ಬರೆಯುವ ಮೂಲಕ ಶುರುವಾದ ಬರವಣಿಗೆ ಇಂದು ಉಪಸಂಪಾದಕ ಹುದ್ದೆಯ ವರೆಗೆ ತಲುಪಿಸಿದೆ. ರೇಗೊರವರಿಗೆ ತಾನು ಮಾಧ್ಯಮ ವರದಿಗಾರನಾಗಬೇಕೆಂದು ಎಳೆ ವಯಸ್ಸಿನಲ್ಲೆ ಕನಸು ಕಂಡವರಲ್ಲ .ಏನಾದರೊಂದು ಹೊಸ ಲೇಖನ ಬರೆಯಬೇಕು ಎಂದು ಆಲೋಚಿಸಿದಾಗ ಇವರಿಗೆ ನೆನಪಿಗೆ ಬಂದದ್ದು ಪುತ್ತೂರಿನ ಬಿಸಿ ನೀರಿನ ಬುಗ್ಗೆ. ಇದು ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಬುಗ್ಗೆಯಾಗಿದ್ದು ಅಂದು ಪ್ರಜವಾಣಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕರ್ನಾಟಕ ದರ್ಶನ ಅಂಕಣದಲ್ಲಿ ಮುಖಪುಟದಲ್ಲಿ ಲೇಖನ ಪ್ರಕಟವಾಗಿದ್ದೆ ಹೊಸ ತಿರುವನ್ನು ಪಡೆದು ಕೊಂಡಿತು. ಸ್ಟೀವನ್ ರೇಗೊ ಎಂಬ ಹೆಸರು ಎಲ್ಲೆಡೆ ಹರಡಿತು.
steevan rego |
ಗ್ರಾಮೀಣ ಭಾಗದಿಂದಲೇ ಬೆಳೆದು ಬಂದ ಸ್ಟೀವನ್ ರೇಗೊರವರು ಗ್ರಾಮೀಣ ಜನ ಜೀವನ ಅಲ್ಲಿಯ ಜೀವಂತ ಸಮಸ್ಯೆಗಳನ್ನು ಕಣ್ಣಾರೆ ಕಂಡವರು. ಹಾಗಾಗಿಯೇ ಗ್ರಾಮೀಣ ವರದಿಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಾ ಬಂದಿದ್ದಾರೆ.
ಇದರ ಫಲವಾಗಿಯೇ ‘ಕಡಂದಲೆ’ ಪ್ರಶಸ್ತಿಗೆ ಇವರು ಆಯ್ಕೆಯಾದರು .ಜಗತ್ತಿನೆಲ್ಲೆಡೆ ಮಲ್ಲಿಗೆಯ ಕಂಪು ಬೀರಿರುವ ಉಡುಪಿಯ ಶಂಕರಪುರ ಮಲ್ಲಿಗೆ ಬಗ್ಗೆ ನೀವೆಲ್ಲ ತಿಳಿದಿರಬೇಕಲ್ಲವೆ? ಹೆಸರಾಂತ ಮಲ್ಲಿಗೆಯ ಬೆನ್ನು ಹತ್ತಿದಾಗ ಆ ಮಲ್ಲಿಗೆಗೆ ಬಳಸುತ್ತಿದದ್ದು ಮಾತ್ರ ವಿಷಕಾರಿ ಕೀಟನಾಶಕ! ಹೌದು ಈ ಮಲ್ಲಿಗೆಯ ವರದಿಯನ್ನು ತಯಾರಿಸಿ ಕೃಷಿಗೆ ಮತ್ತು ಕೃಷಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಇವರ ಲೇಖನ ಒಂದು ಆಂದೋಲನವನ್ನೇ ಮಾಡಿತು. ಅದಕ್ಕಾಗಿ ಕಿನ್ನಿಗೋಳಿಯ ಯುಗ ಪುರುಷ ಮತ್ತು ವಿಜಯ ಕಲಾವಿದರ ಸಹಯೋಗದಲ್ಲಿ ಹಿರಿಯ ಪತ್ರಕರ್ತ ದಿ|| ಕೆ.ಜೆ. ಶೆಟ್ಟಿ ಕಡಂದಲೆ ಇವರ ಸ್ಮರಣಾರ್ಥ “ಕಡಂದಲೆ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.
ನಮ್ಮ ದಕ್ಷಿಣ ಕನ್ನಡದಲ್ಲಿಯೇ ಹುಟ್ಟಿ ಇಲ್ಲೇ ಸಾಯುವ ನಂದಿನಿ ನದಿಯ ಬಗ್ಗೆ ಬರೆದ ವಿಮರ್ಶಾತ್ಮಕ ಲೇಖನಕ್ಕೆ ದ.ಕ. ಜಿಲ್ಲಾ ಪತ್ರಕರ್ತರ ಸಂಘದಿಂದ ಪಾ.ಗೊ (ಪದ್ಯಾಣ ಗೋಪಾಲಕೃಷ್ಣ) ಪ್ರಶಿಸ್ತಿಗೂ ಇವರು ಅರ್ಹರಾದರು.
ಇನ್ನು ಮಸಾಲೆ ಅರೆಯುವುದರಲ್ಲಿ ಎತ್ತಿದ ಕೈ.ಅಂದರೆ ಅಡುಗೆ ಕೋಣೆಯಲ್ಲಿ ಅಲ್ಲ... ಕರಾವಳಿ ಸಿನಿಮಾ ಸುದ್ದಿಗಳಿಗೆ! ಎಲ್ಲ ವಯೋ ಮಾನವವರು ಓದಲೇ ಬೇಕೆನಿಸುತ್ತದೆ. ಇಂತಹ ಕರಾವಳಿ ಸಿನಿಮಾ ಸುದ್ದಿಗಳನ್ನು 4 ವರ್ಷಗಳಿಂದ ಬರೆಯುತ್ತಿದ್ದ ಇವರ ಲೇಖನದ ಗುಣಮಟ್ಟ ಮತ್ತು ಅತೀ ಹೆಚ್ಚು ಸಿನಿಮಾ ಲೇಖನ ಬರೆದ ಫಲವಾಗಿ 2014ರ ಸಿರಿ ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಇದೀಗಾ ಇವರ ಎಲ್ಲಾ ಲೇಖನಗಳಿಗೆ ತಮ್ಮ ಪತ್ನಿ ಸಾಥ್ ನೀಡುತ್ತಿದ್ದಾರೆ.
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.
No comments:
Post a Comment