ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Tuesday, March 31, 2015

ನೋವು ಮರೆತು ಬದುಕುತ್ತಿರುವ ಪ್ರಕಾಶ್

ಬಂಟ್ವಾಳ ತಾಲೂಕಿನ  ವಾಮದಪದವು ಪಾಂಗಲ್ಪಡಿ ಯಲ್ಲಿ ಇವರ ಮನೆ .2008 ರಲ್ಲಿ ಬಸ್ಸ್ ಅಪಘಾತ ದಲ್ಲಿ ತಮ್ಮ ಸೊಂಟ ಮತ್ತು ಕಾಲಿನ ಬಲವನ್ನು ಕಳೆದು ಕೊಂಡರು. ಬಸ್ಸಿನಲ್ಲಿ ಕ್ಲೀನರ್ ಆಗಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಇವರು ಬಸ್ಸಿನ ಅಡಿ  ಭಾಗದಲ್ಲಿ  ಸಿಲುಕಿದ ಪರಿಣಾಮವಾಗಿ ಜೀವನ ಪರ್ಯಂತ ಕೂತಲ್ಲಿಯೆ ಜೀವನ ಸಾಗಿಸಬೇಕಾದ ಸ್ಥಿತಿ ಇವರದಾಯಿತು.ಇವರು ಸದಾ ರೇಡಿಯೋ ಕೇಳಿಕೊಂಡು ತಮ್ಮ ದಿನವನ್ನು ಕಳೆಯುತಿದ್ದಾರೆ.ಆದರೆ ಸದಾ ಚಟುವಟಿಕೆಯಿಂದ ಇದ್ದಾರೆ.ಅಧ್ಬುತ ಕವಿತೆಗಳನ್ನೂ ಬರೆಯಬಲ್ಲರು.ಜೊತೆಗೆ ಹಾಡುಗಾರನೂ ಹೌದು .ಇವರೇ ತಯಾರಿಸಿದ ರೇಡಿಯೋ ವಿಶೇಷವಾಗಿದೆ .ಸಣ್ಣ ಮನೆಯಲ್ಲಿ  ತಮ್ಮ ತಾಯಿ ಜೊತೆಗೆ ವಾಸವಾಗಿದ್ದು,ರೇಡಿಯೋ ಸಾರಂಗ್107.8 fm ಎ೦ದರೆ ಇವರಿಗೆ ತುಂಬಾ ಇಷ್ಟ.ಇವರ ಕಷ್ಟವನ್ನು ನನ್ನ ಬಳಿ ಹೇಳಿಕೊಂಡಾಗ ನಾನು ಇವರನ್ನು  ಸಂದರ್ಶನ ಮಾಡಿದೆ. ಅನೇಕ ರೇಡಿಯೋ ಸ್ಹೇಹಿತ ಮಿತ್ರರು ಇವರಿಗೆ ಸಹಾಯವನ್ನೂ ಮಾಡಿರುವುದು ಹೆಮ್ಮೆಯ ವಿಷಯ .ಇತ್ತೀಚೆಗೆ ಇವರಿಗೆ  ಗಾಲಿಕುರ್ಚಿಯ ಅಗತ್ಯ ಇದೆ ಅಂತ ಗೊತ್ತಾಯಿತು.ಅ ಸಮಯದಲ್ಲಿ ಮುಳಿಹಿತ್ಲುವಿನ ಅಶೋಕ್ ಎ೦ಬವರು  ಮಂಗಳಾದೇವಿಯ  ಗಣೇಶೋತ್ಸವ ಸಮಿತಿಗೆ ಒ೦ದು ಮನವಿಯನ್ನು ಕೊಟ್ಟರು .ಆಗ ಬಹು ಬೇಗನೆ ಸ್ಪಂದನೆ ದೊರೆಯಿತು .ಮೊನ್ನೆ ನಾನು ನನ್ನ ಸ್ಹೇಹಿತರಾದ  ಅಶೋಕ್ ,ಸಿಂಚನಾ ಶ್ಯಾಮ್ ಮತ್ತು ಮನೆಯವರು ಹೋಗಿ ಅವರಿಗೆ  ಗಾಲಿಕುರ್ಚಿಯನ್ನು  ಹಸ್ತಾ೦ತರ ಮಾಡಿದೆವು.
 ಪ್ರಕಾಶ್ ಪ೦ಗಲ್ಪಾಡಿ
ಇನ್ನೂ ಕೆಲವು ಚಿತ್ರಗಳು:-
ಅಣ್ಣ,ಗಣೇಶ್ ಮತ್ತು ತಾಯಿ ಯಮುನಾ ಜೊತೆ ಪ್ರಕಾಶ್
ಪ್ರಕಾಶರೇ ತಯಾರಿಸಿದ ರೇಡಿಯೋ
ಪ್ರಕಾಶ್ ಜೊತೆ ನಾನು (ವಿಕೆ ಕಡಬ ) ಮತ್ತು ಅಶೋಕ್
ಪ್ರಕಾಶ್ ಗಾಲಿಕುರ್ಚಿಯಲ್ಲಿ ಓಡಾಟ ಮಾಡುತ್ತಿರುವುದು


ಪ್ರಕಾಶ್ ಇತ್ತೀಚೆಗೆ ಹಾಡಿದ ದೇಶ ಕಾಪು ವೀರ ಹಾಡನ್ನು ಕೇಳಲು ಇಲ್ಲಿಗೆ ಒತ್ತಿರಿ:-
ಹಾಡು 
ಇವರ ಸಂದರ್ಶನ ವನ್ನು ಕೇಳಲು ಇಲ್ಲಿಗೆ ಒತ್ತಿರಿ
http://yourlisten.com/thimmappavk/bennere-paterakate-prakash-pangalpady  


No comments:

Post a Comment