ಗಡಿನಾಡಿನ ಬಹುಮುಖ ಬಾಲ ಪ್ರತಿಭೆಯಾದ ಸನ್ನಿಧಿ ಟಿ.ರೈ ಪೆರ್ಲ ಪೆರ್ಲದ ಉದ್ಯಮಿ ಕಾರ್ತಿಕೇಯ ಟಯರ್ಸ್‍ನ ಮಾಲಕರಾದ ತಾರನಾಥ ರೈ ಮತ್ತು ಕವಯತ್ರಿ ಕೊಡ್ಯಮ್ಮೆ ಗುತ್ತು ರಾಜಶ್ರೀ ರೈ ದಂಪತಿಗಳ ಪುತ್ರಿ. ಸನ್ನಿಧಿ ಬದಿಯಡ್ಕದ ಚಿನ್ಮಯ ವಿದ್ಯಾಲಯದಲ್ಲಿ 5ನೇ ತರಗತಿ ಕಲಿಯುತ್ತಿರುವ ಭರವಸೆಯ ಪ್ರತಿಭೆಯಾಗಿ ಮಿಂಚುತ್ತಿದ್ದಾಳೆ . ಇತ್ತೀಚಿಗೆ ಗಡಿನಾಡ ಹೆಮ್ಮೆಯ ಕವಿ ,ಸಾಹಿತಿ, ಹೋರಾಟಗಾರ ,ಶತಮಾನದ ಕವಿ ಕಯ್ಯಾರರ ಜನ್ಮ ಶತಮಾನೋತ್ಸವದ ಅಂಗವಾಗಿ ನಿರ್ಮಿಸಿದ "ಎಸಲ್" ತುಳು ಆಡಿಯೋ ಸಿಡಿಯಲ್ಲಿ ಎಲ್ಲಾ ಹಾಡುಗಳನ್ನು ಸುಮಧುರ ಕಂಠದಿಂದ ಹಾಡುವ ಮೂಲಕ ಶೋತೃಗಳ ಗಮನ ಸೆಳೆದವಳು. ಹಾಗೆಯೇ ರೇಡಿಯೋ ಸಾರಂಗ್ ನಲ್ಲಿ ಸನ್ನಿಧಿ ಟಿ.ರೈ ಪೆರ್ಲ ಹಾಡಿರುವ ಹಾಡುಗಳು ಪ್ರಸಾರವಾಗುತ್ತಿದ್ದು ಜನ ಮೆಚ್ಚುಗೆ ಪಡೆದಿದೆ . ಬಲ ಬಲ ಬಲರಾಮ ಮತ್ತು ಪುಣ್ಯಕೋಟಿಯ ಹಾಡು ಟಾಪ್ ಹಾಡುಗಳು .
ಸಂಗೀತ ವಿದ್ವಾನ್ ನಟರಾಜ ಶರ್ಮ ಬಳ್ಳಪದವು ಅವರ ಬಳಿ ಸುಗಮ ಸಂಗೀತದ ಜೊತೆಗೆ ಕೀಬೋರ್ಡ್ ಹಾಗೂ ಉಷಾ ಭಟ್ ಮಜಕ್ಕಾರ್ ಬಳಿ ಶಾಸ್ತ್ರಿಯ ಸಂಗೀತವನ್ನು ಅಭ್ಯಾಸ ಮಾಡಿ ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಸನ್ನಿಧಿ ಟಿ.ರೈ ಪೆರ್ಲ ನೀಡಿದ್ದಾಳೆ. ಬಳ್ಳಪದವು ಯೋಗೀಶ ಶರ್ಮರ ಬಳಿ ವಯಲಿನ್ ಹಾಗೂ ಬದಿಯಡ್ಕದ ಪಿ.ಕೆ.ಆನಂದ ಅವರ ಬಳಿ ಕರಾಟೆಯನ್ನು , ನಾಟ್ಯ ನಿಲಯಂ ಬಾಲಕೃಷ್ಣ ಮಾಸ್ತರ್ ಅವರ ಬಳಿ ನಾಟ್ಯವನ್ನು ಅಭ್ಯಸಿಸುತ್ತಿದ್ದು ಸಬ್ಬಣಕೋಡಿ ರಾಮ ಭಟ್ ಅವರ ಬಳಿ ಯಕ್ಷಗಾನ ಅಭ್ಯಾಸ ನಡೆಸಿ ಹಲವೆಡೆಗಳಲ್ಲಿ ಪ್ರದರ್ಶನ ನೀಡಿರುವ ಬಾಲ ಸಾಧಕಿ . ಏಕವ್ಯಕ್ತಿ ಯಕ್ಷಗಾನ ಪ್ರದರ್ಶನದಿಂದ ಜನ ಪ್ರಶಂಸೆಗೆ ಪಾತ್ರರಾಗಿರವ ಸನ್ನಿಧಿ ಟಿ.ರೈ ಪೆರ್ಲ.ಏಕ ವ್ಯಕ್ತಿ, ಭಕ್ತಿ ಭಾವ ಸಂಗಮ ಎಂಬ ವೈಶಿಷ್ಟಮಯ ಸಂಗೀತ ಕಾರ್ಯಕ್ರಮವನ್ನು ಹಲವೆಡೆಗಳಲ್ಲಿ ನಡೆಸಿ ಯಶಸ್ವಿಯಾಗಿದ್ದಾಳೆ.
ಇದೀಗ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಅಭಿನಂದನಾ ಪುರಸ್ಕಾರ ಈ ಬಾಲ ಪ್ರತಿಭೆಯ ಸ್ಫೂರ್ತಿ ಮತ್ತಷ್ಟು ಹಿಮ್ಮಡಿ ಯಾಗಿದೆ . ಪುರಸ್ಕಾರ ಗಳಿಸಿದ ಸನ್ನಿಧಿಯನ್ನು ಕ.ಜಾ.ಪ. ಕೇರಳ ಗಡಿನಾಡು ಘಟಕದ ಅಧ್ಯಕ್ಷ ಕೇಶವ ಪ್ರಸಾದ್ ನಾಣಿತ್ತಿಲು, ಕೇರಳ ತುಳು ಅಕಾಡೆಮಿ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಪಾರ್ತಿಸುಬ್ಬ ಕಲಾ ಕ್ಷೇತ್ರದ ಸದಸ್ಯ ಕೇಳು ಮಾಸ್ತರ್ ಅಗಲ್ಪಾಡಿ, ಕವಿ,ಪತ್ರಕರ್ತ ರಾಧಕೃಷ್ಣ ಉಳಿಯತ್ತಡ್ಕ, ನೇಸರ್ ಪೆರ್ಲ, ಬೊಳಿಕೆ ಜಾನಪದ ಕಲಾ ಸಂಘ ಕನ್ಯಪ್ಪಾಡಿ, ಮೀಡಿಯಾ ಕ್ಲಾಸಿಕಲ್ಸ್ ಬೆಳ್ಳೂರು,ತುಳುವೆರೆ ಆಯನೋ ಕೂಟೊ ಬದಿಯಡ್ಕ ಮೊದಲಾದ ಸಂಘಟನೆಗಳು ಅಭಿನಂದಿಸಿದೆ. ಸಂಗೀತ, ಹಾಗೂ ಲಲಿತ ಕಲೆಗಳಲ್ಲಿ ಆಸಕ್ತಳಾದ ಹತ್ತರ ಹರೆಯಾದ ಬಾಲ ಪ್ರತಿಭೆ ಸನ್ನಿಧಿ ಟಿ.ರೈ ಪೆರ್ಲಳಿಗೆ 2014ನೇ ವರ್ಷದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯೋತ್ಸವ ಅಭಿನಂದನಾ ಪುರಸ್ಕಾರ ಸಿಕ್ಕಿರುವುದು ಹೆಮ್ಮೆಯ ವಿಷಯ . ಸನ್ನಿಧಿ ಟಿ.ರೈ ಪೆರ್ಲ ಪೆರ್ಲರವರ ಸಂದರ್ಶನ ಮತ್ತು ಹಾಡುಗಳನ್ನು ಇಲ್ಲಿ ಕೇಳಿ
ಸಾರಂಗ್ ಎಕ್ಸಪ್ರೆಸ್ ಕಾರ್ಯಕ್ರಮ ಸಂಗೀತ ವಿದ್ವಾನ್ ನಟರಾಜ ಶರ್ಮ ಬಳ್ಳಪದವು ಅವರ ಬಳಿ ಸುಗಮ ಸಂಗೀತದ ಜೊತೆಗೆ ಕೀಬೋರ್ಡ್ ಹಾಗೂ ಉಷಾ ಭಟ್ ಮಜಕ್ಕಾರ್ ಬಳಿ ಶಾಸ್ತ್ರಿಯ ಸಂಗೀತವನ್ನು ಅಭ್ಯಾಸ ಮಾಡಿ ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಸನ್ನಿಧಿ ಟಿ.ರೈ ಪೆರ್ಲ ನೀಡಿದ್ದಾಳೆ. ಬಳ್ಳಪದವು ಯೋಗೀಶ ಶರ್ಮರ ಬಳಿ ವಯಲಿನ್ ಹಾಗೂ ಬದಿಯಡ್ಕದ ಪಿ.ಕೆ.ಆನಂದ ಅವರ ಬಳಿ ಕರಾಟೆಯನ್ನು , ನಾಟ್ಯ ನಿಲಯಂ ಬಾಲಕೃಷ್ಣ ಮಾಸ್ತರ್ ಅವರ ಬಳಿ ನಾಟ್ಯವನ್ನು ಅಭ್ಯಸಿಸುತ್ತಿದ್ದು ಸಬ್ಬಣಕೋಡಿ ರಾಮ ಭಟ್ ಅವರ ಬಳಿ ಯಕ್ಷಗಾನ ಅಭ್ಯಾಸ ನಡೆಸಿ ಹಲವೆಡೆಗಳಲ್ಲಿ ಪ್ರದರ್ಶನ ನೀಡಿರುವ ಬಾಲ ಸಾಧಕಿ . ಏಕವ್ಯಕ್ತಿ ಯಕ್ಷಗಾನ ಪ್ರದರ್ಶನದಿಂದ ಜನ ಪ್ರಶಂಸೆಗೆ ಪಾತ್ರರಾಗಿರವ ಸನ್ನಿಧಿ ಟಿ.ರೈ ಪೆರ್ಲ.ಏಕ ವ್ಯಕ್ತಿ, ಭಕ್ತಿ ಭಾವ ಸಂಗಮ ಎಂಬ ವೈಶಿಷ್ಟಮಯ ಸಂಗೀತ ಕಾರ್ಯಕ್ರಮವನ್ನು ಹಲವೆಡೆಗಳಲ್ಲಿ ನಡೆಸಿ ಯಶಸ್ವಿಯಾಗಿದ್ದಾಳೆ.
ಇದೀಗ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಅಭಿನಂದನಾ ಪುರಸ್ಕಾರ ಈ ಬಾಲ ಪ್ರತಿಭೆಯ ಸ್ಫೂರ್ತಿ ಮತ್ತಷ್ಟು ಹಿಮ್ಮಡಿ ಯಾಗಿದೆ . ಪುರಸ್ಕಾರ ಗಳಿಸಿದ ಸನ್ನಿಧಿಯನ್ನು ಕ.ಜಾ.ಪ. ಕೇರಳ ಗಡಿನಾಡು ಘಟಕದ ಅಧ್ಯಕ್ಷ ಕೇಶವ ಪ್ರಸಾದ್ ನಾಣಿತ್ತಿಲು, ಕೇರಳ ತುಳು ಅಕಾಡೆಮಿ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಪಾರ್ತಿಸುಬ್ಬ ಕಲಾ ಕ್ಷೇತ್ರದ ಸದಸ್ಯ ಕೇಳು ಮಾಸ್ತರ್ ಅಗಲ್ಪಾಡಿ, ಕವಿ,ಪತ್ರಕರ್ತ ರಾಧಕೃಷ್ಣ ಉಳಿಯತ್ತಡ್ಕ, ನೇಸರ್ ಪೆರ್ಲ, ಬೊಳಿಕೆ ಜಾನಪದ ಕಲಾ ಸಂಘ ಕನ್ಯಪ್ಪಾಡಿ, ಮೀಡಿಯಾ ಕ್ಲಾಸಿಕಲ್ಸ್ ಬೆಳ್ಳೂರು,ತುಳುವೆರೆ ಆಯನೋ ಕೂಟೊ ಬದಿಯಡ್ಕ ಮೊದಲಾದ ಸಂಘಟನೆಗಳು ಅಭಿನಂದಿಸಿದೆ. ಸಂಗೀತ, ಹಾಗೂ ಲಲಿತ ಕಲೆಗಳಲ್ಲಿ ಆಸಕ್ತಳಾದ ಹತ್ತರ ಹರೆಯಾದ ಬಾಲ ಪ್ರತಿಭೆ ಸನ್ನಿಧಿ ಟಿ.ರೈ ಪೆರ್ಲಳಿಗೆ 2014ನೇ ವರ್ಷದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯೋತ್ಸವ ಅಭಿನಂದನಾ ಪುರಸ್ಕಾರ ಸಿಕ್ಕಿರುವುದು ಹೆಮ್ಮೆಯ ವಿಷಯ . ಸನ್ನಿಧಿ ಟಿ.ರೈ ಪೆರ್ಲ ಪೆರ್ಲರವರ ಸಂದರ್ಶನ ಮತ್ತು ಹಾಡುಗಳನ್ನು ಇಲ್ಲಿ ಕೇಳಿ
ಇನ್ನಷ್ಟು ಚಿತ್ರಗಳು :-
ತಾರನಾಥ ರೈ ಜೊತೆಗೆ |
No comments:
Post a Comment