ಕರಾವಳಿ ಕರ್ನಾಟಕದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಸಂತ ಅಲೋಶಿಯಸ್ ಕಾಲೇಜು .ಮಂಗಳೂರಿನ ಕೇಂದ್ರ ಭಾಗದಲ್ಲಿ ಸ್ಥಾಪಿತವಾಗಿದ್ದು ಜೆಸ್ವಿಟ್ ಎಜುಕೇಶನ್ ಸೊಸೈಟಿಯ ಸ್ವಾಧೀನದಲ್ಲಿದೆ. ಸುಮಾರು 37 ಎಕ್ರೆಯಷ್ಟು ವಿಶಾಲ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ವ್ಯಾಪಿಸಿದ್ದು. ಸುಸಜ್ಜಿತವಾಗಿ ಶಿಕ್ಷಣ ಸೇವೆಯನ್ನು ಜಗತ್ತಿನ ಮೂಲೆ ಮೂಲೆಗಳಿಂದ ಬಂದ ವಿಧ್ಯಾರ್ಥಿಗಳಿಗೆ ನೀಡುತ್ತಿದೆ. ಶಿಕ್ಷಿತ ಸಮಾಜವನ್ನು ರೂಪಿಸುವ ದ್ಯೇಯದೊಂದಿಗೆ ಲೊಯೋಲಾದ ಸಂತ ಇಗ್ನೇಶಿಯಸ್‍ರವರ ಉದಾತ್ತ ಚಿಂತನೆಗಳ ಸಾಕಾರ ಈ ಶಿಕ್ಷಣ ಸಂಸ್ಥೆ.
1880 ರಲ್ಲಿ ಮಂಗಳೂರಿಗೆ ಬೇಟಿ ನೀಡಿದ್ದ ಯುರೋಪಿಯನ್ ಜೆಸ್ವಿಟರು ಕರಾವಳಿಯ ಯುವ ಸಮುದಾಯಕ್ಕೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಯೋಚನೆಯನ್ನು ಮಾಡಿದರು. ಸಂತ ಅಲೋಶಿಯಸ್ ಕಾಲೆಜನ್ನು ಪ್ರಸ್ತುತವಾಗಿ ಮಂಗಳೂರಿನ ಜೆಸ್ವಿಟ್ ಎಜುಕೇಶನ್ ಸೊಸೈಟಿ ನಿರ್ವಹಿಸುತ್ತಿದೆ. 1860ರ ನೊಂದಣಿ ಕಾಯ್ದೆಯ ಅನ್ವಯ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಧರ್ಮ, ಜಾತಿಯ ಜನರಿಗೆ ಸಮಾನ ಶಿಕ್ಷಣವನ್ನು ನೀಡುತ್ತಿದ್ದು, ಎಲ್ಲರ ಜ್ಞಾನ- ದಾಹಕ್ಕೆ ಚಿರಾಮೃತವಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆ ಪದೆದಿದ್ದು, ಪದವಿ, ಸ್ನಾತಕೊತ್ತರ, ಡಿಪೆÇ್ಲಮಾ ಹಾಗೂ ಉನ್ನತ ವ್ಯಾಸಂಗಕ್ಕೆ ನೆರವಾಗುವ ಎಲ್ಲಾ ರೀತಿಯ ವಿಷಯಗಳನ್ನು ಈ ಕಾಲೇಜು ಒದಗಿಸುತ್ತಿದೆ.
ಸಂತ ಅಲೋಶಿಯಸ್ ಕಾಲೇಜು 2007ರಲ್ಲಿ ಸ್ವಾಯತ್ತವಾಗಿದ್ದು. ತದನಂತರ ಕಾಲೇಜಿನಲ್ಲಿ ಹೊಸ ಹೊಸ ವಿಷಯಗಳ ಸೇರ್ಪಡೆಯಾಗಿ ಉತ್ತಮ ಶ್ಶೈಕ್ಷಣಿಕ ಪ್ರಗತಿಯಾಗಿದೆ. ಪಾರದರ್ಶಕ ಶಿಕ್ಷಣದೊಂದಿಗೆ ವ್ಯಕ್ತಿತ್ವ ವಿಕಸನ, ಲಿಂಗ ಸಮಾನತೆ, ಮಾನವ ಹಕ್ಕುಗಳು, ಹಾಗೂ ಭಾರತಿಯ ಸಂವಿಧಾನ ಮತ್ತು ಪರಿಸರ ಬಗೆಗಿನ ಶಿಕ್ಷಣ ಸೇರ್ಪಡೆಯಾಗಿದ್ದು, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಕಡ್ದಾಯಗೊಳಿಸಲಾಗಿದೆ.
ಯುವ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವುದರ ಜೊತೆಗೆ ಅವರಲ್ಲಿ ವೈಯಕ್ತಿಕ ಜವಾಬ್ದಾರಿ ರೂಪುಗೊಳಿಸುವುದು ಶಿಕ್ಷನ ಸಂಸ್ಥೆಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ವ್ರತ್ತಿಪರತೆ, ನೈಪುಣ್ಯತೆ, ಸಮನ್ವಯತೆ ಹೊಸತನವನ್ನು ವಿದ್ಯಾರ್ಥಿಗಳಲ್ಲಿ ರೂಪಿಸಲಾಗುತ್ತಿದೆ. 2014-15ನೇ ಶೈಕ್ಷಣಿಕ ಸಾಲಿನಲ್ಲಿ NAAC ನಿಂದ 3.62 ಅಂಕದೊಂದಿಗೆ A ಗ್ರೇಡ್ ಪಡೆದ್ದಿದ್ದು, ಕಾಲೆಜ್ ಆಫ್ ಎಕ್ಸೆಲ್ಲೆನ್ಸ್ ಎಂಬ ಬಿರುದೂ ಪಡೆದಿದೆ. ಹಾಗೂ ಡಿ.ಬಿ.ಟಿ ಯಿಂದ ಸ್ಟಾರ್ ಕಾಲೇಜು ಎಂಬ ಬಿರಿದನ್ನು ತನ್ನ ಮಡಿಲಿಗೇರಿಸಿಕೊಂಡಿದೆ.
ಸಂತ ಅಲೋಷಿಯಸ್ ಕಾಲೇಜು ಸ್ನಾತಕೋತ್ತರ ಪದವಿಯಲ್ಲಿ ಮೂಲಸೌಕರ್ಯಗಳೋಂದಿಗೆ ಹೆಸರುವಾಸಿಯಾಗಿದೆ. ಮಾನವ ಸಂಪನ್ಮೂಲಗಳ ಅಭಿವೃದ್ಧಿಗಾಗಿ ಪುಡ್ ಸೈನ್ಸ್ ಆ್ಯಂಡ್ ಟೆಕ್ನೋಲೊಜಿ ವಿಭಾಗವನ್ನು ಇಲ್ಲಿ ಆರಂಭಿಸಿರುವುದು ಒಂದು ವಿಶೇಷತೆ. ಸೂಕ್ತವಾಗಿ ಉಪಯೋಗಿಸದೇ ಇರುವ ತರಕಾರಿ ಹಾಗೂ ಹಣ್ಣುಗಳಂಥ ಸಂಪನ್ಮೂಲಗಳನ್ನು ಉಪಯೋಗಿಸಲು ತರಬೇತಿ ನೀಡುವುದರ ಮೂಲಕ ಕಾಲೇಜಿನ ಈ ವಿಭಾಗ ನುರಿತ ಉದ್ಯೋಗಿಗಳನ್ನು ಹಾಗೂ ಉದ್ಯಮಿಗಳನ್ನು ಸೃಷ್ಟಿಸಲು ಮುಂದಾಗಿದೆ.
No comments:
Post a Comment